ಹಲವಾರು ವ್ಯಕ್ತಿಗಳ ಜೀವನದ ದಾರಿ ದೀಪ ನಮ್ಮ ನೆಚ್ಚಿನ ಮುಖ್ಯೋಪಾಧ್ಯಾಯರಾದ – ಬಿ.ಜಿ ಶಿರ್ಸಿ ಗುರು ಮಾತೆಯರು.
ನರೇಗಲ್ಲ ಫೆ.19

ಹಾಲಕೆರೆ ಗ್ರಾಮದ ಅನ್ನದಾನೇಶ್ವರ ಸಂಸ್ಥಾನ ಮಠದ ಹಿರಿಯ ಗುರುಗಳು ಆರಂಭಿಸಿದ ಅನ್ನದಾನ ವಿಜಯ್ ವಿದ್ಯಾ ಪ್ರಸಾರಕ ಸಂಸ್ಥೆಯಾಗಿ 1989 ರಲ್ಲಿ ಆರಂಭವಾದ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆ ಇಲ್ಲಿಯ ವರೆಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಮಾಡುತ್ತಿದೆ. ಸದ್ಯ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷರಾಗಿ ಹಾಗೂ ರೋಣ ಶಾಸಕರಾದ ಜಿ. ಎಸ್ ಪಾಟೀಲರು ಉಪಾಧ್ಯಕ್ಷರಾಗಿ ಮತ್ತು ಹಿರಿಯ ವೈದ್ಯ ಡಾ, ಜಿ. ಕೆ ಕಾಳೆಯವರು ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಚೇರಮನ್ನರಾಗಿ ಉತ್ತಮ ರೀತಿಯಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ.ಕನ್ನಡ ಮಾಧ್ಯಮ ಶಾಲೆಗಳು ಅಂದರೆ ಕದ ಹಾಕುವ ಹಂತಕ್ಕೆ ತಲುಪಿರುವ ದಿನಗಳಲ್ಲಿ ಎಲ್ಲಾ ಸಹಕಾರ ಪಡೆದು ಉತ್ತಮ ರೀತಿಯಲ್ಲಿ ಶಾಲೆಯನ್ನು ನಡೆಸಿ ಕೊಂಡು ಹೋಗುತ್ತಿರುವ ಮುಖ್ಯ ಶಿಕ್ಷಕಿ ಬಿ.ಜಿ ಶಿರ್ಸಿಯವರು 36 ವರ್ಷಗಳಲ್ಲಿ ಸಾವಿರಾರು ಸಾಧಕರನ್ನು ಕನ್ನಡ ನಾಡಿಗೆ ಕೊಡುಗೆಯಾಗಿ ನೀಡಿದ್ದಾರೆ. ಕೆಲವೇ ಕೆಲವು ವಿದ್ಯಾರ್ಥಿಗಳಿಂದ ಆರಂಭವಾದ ಈ ಶಾಲೆಯಲ್ಲಿ ಇಲ್ಲಿಯ ವರೆಗೆ ಹತ್ತು ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡಿದ್ದಾರೆ. ಸದ್ಯ 800 ಕ್ಕೂ. ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ.90 ರ ದಶಕದಲ್ಲಿ ದೂರದ ಊರುಗಳಿಂದ ಮಕ್ಕಳನ್ನು ಶಾಲೆಗೆ ಕರೆತರಲು ಒಂದು ಎತ್ತಿನ ಬಂಡಿಯನ್ನು ಸ್ವಾಮೀಜಿಯವರು ನೀಡಿದ್ದರು. ಅಲ್ಲಿಂದ ಆರಂಭವಾದ ಈ ಶಾಲೆಯ ಪ್ರವೇಶಾತಿ ಪ್ರತಿ ವರ್ಷ ತುಂಬಿರುತ್ತದೆ. ನರೇಗಲ್ ಹಾಗೂ ಸುತ್ತ ಮುತ್ತಲಿನ ಹಳ್ಳಿಗಳಿಂದ ಮಕ್ಕಳು ಈ ಶಾಲೆಯಲ್ಲಿ ಪ್ರವೇಶ ಪಡೆಯಲು ನಾ ಮುಂದೆ, ತಾ ಮುಂದೆ ಎಂದು ಬರುತ್ತಾರೆ. ಪೈಪೋಟಿಯಲ್ಲಿ ಬಂದು ಪ್ರವೇಶ ಪಡೆಯುತ್ತಾರೆ. ಅದಕ್ಕೆ ಕಾರಣ ನಾಯಕಿಯಾಗಿ ಶಾಲೆಯನ್ನು ನಡೆಸಿ ಕೊಂಡು ಹೋಗುತ್ತಿರುವ ಮುಖ್ಯ ಶಿಕ್ಷಕಿ ಬಿ.ಜಿ ಶಿರ್ಸಿಯವರ ಶಿಸ್ತು, ಮಕ್ಕಳ ಮೇಲಿನ ಕಾಳಜಿ, ಪ್ರೀತಿ ಹಾಗೂ ಗುಣ ಮಟ್ಟ ಶಿಕ್ಷಣದ ಮೇಲಿನ ಒಲವು ಮುಖ್ಯ ಶಿಕ್ಷಕಿ ಬಿ.ಜಿ ಶಿರ್ಸಿಯವರು ಮಕ್ಕಳ ಕಲಿಕೆಗಾಗಿ ಹಾಗೂ ಉತ್ತಮ ಶಿಕ್ಷಣಕ್ಕಾಗಿ ಪ್ರತಿ ವರ್ಷ ರೂಪಿಸುವ ಹೊಸ ಯೋಜನೆ, ಜಾರಿಗೆ ತರುವ ವಿಧಾನ ಇತರೇ ಶಾಲೆಗಳಿಗೂ ಮಾದರಿಯಾಗಿದೆ. ನರೇಗಲ್ಲ:- ಶಿಕ್ಷಣ ಮಗುವಿನ ಜೀವನವನ್ನು ಸಾಧನೆಯ ಕಡೆಗೆ ಕರೆದೊಯುವ ಶಕ್ತಿಯನ್ನು ಹೊಂದಿವೆ. ಗ್ರಾಮೀಣ ಪ್ರದೇಶವನ್ನು ಹೊಂದಿರುವ ನರೇಗಲ್ ಹೋಬಳಿಯಲ್ಲಿ ರೈತರ, ಬಡವರ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಕಂಕಣ ಬದ್ದಳಾಗಿ ನಿಲ್ಲುವ ಮೂಲಕ ಹಾಗೂ ಶಾಲೆಯಲ್ಲಿ ಕಲಿಯುವ ವಿದ್ಯಾರ್ಥಿಗಳನ್ನೇ ತನ್ನ ಸ್ವಂತ ಮಕ್ಕಳೆಂದು ಪ್ರೀತಿಸುವ ಮೂಲಕ ಸಮಾಜದ ಋಣ ತೀರಿಸಲು ಮುಂದಾಗಿರುವ ಗದಗ ಜಿಲ್ಲೆಯ ಗಜೇಂದ್ರಗಡ ತಾಲ್ಲೂಕಿನ ನರೇಗಲ್ ಪಟ್ಟಣದ ಶ್ರೀ ಬಸವೇಶ್ವರ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬಿ.ಜಿ ಶಿರ್ಸಿ ಅವರು ಎಲ್ಲಾ ಶಿಕ್ಷಕರಿಗೂ ಮಾದರಿಯಾಗಿದ್ದಾರೆ.

ಮಕ್ಕಳ ವೈಯಕ್ತಿಕ ಕಾಳಜಿ, ಪಾಲಕರ ಜೊತೆಯಲ್ಲಿ ಬೆರೆಯುವ ಹಾಗೂ ಮಾತನಾಡುವ ವಿಧಾನ ಶಾಲೆಯ ಅಭಿವೃದ್ಧಿಗೆ ಹಾಗೂ ಪ್ರವೇಶಾತಿ ಏರಿಕೆಗೆ ಕಾರಣವಾಗಿದೆ ಎನ್ನುತ್ತಾರೆ ನರೆಗಲ್ ಪಾಲಕ ಸದ್ದಾಂ ನಶೇಖಾನ್. ಡಾ, ಜೈವಿಕ ವಿಜ್ಞಾನಿ ಗಿರಡ್ಡಿ, ಕೇಂಬಿಡ್ಜ್ ವಿಶ್ವವಿದ್ಯಾನಿಲಯ ದಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಗದಗ ಜಿಲ್ಲಾಸ್ಪತ್ರೆಯ ಮನೋರೋಗ ತಜ್ಞ ಹಾಗೂ ಮುಖ್ಯಸ್ಥ ಡಾ, ಜಿಕೇಂದ್ರ ಮುಗಳಿ, ಎಸ್.ಎಸ್.ಎಲ್.ಸಿ ಯಲ್ಲಿ ರಾಜ್ಯಕ್ಕೆ ಬ್ಯಾಂಕ್ ವಿದ್ಯಾರ್ಥಿನಿ ಚೈತ್ರಾ ಲಿಂಗಯ್ಯ ಗೌರಿ ಸೇರಿದಂತೆ ಅನೇಕ ವೈದ್ಯರು, ಸಂಶೋಧಕರು, ವಿಜ್ಞಾನಿಗಳು ಕವಿಗಳು, ಪತ್ರಕರ್ತರು, ಸಾಹಿತಿಗಳು ಓದಿದ ಶಾಲೆಯಾಗಿದೆ. ಈ ಶಾಲೆಯಲ್ಲಿ ಕಲಿತ ಅನೇಕ ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಅದಕ್ಕೆ ಕಾರಣ ಮುಖ್ಯ ಶಿಕ್ಷಕಿ ಬಿ.ಜಿ ಶಿರ್ಸಿ ಹಾಗೂ ಅವರ ಶಿಕ್ಷಕ ಬಳಗ ಎನ್ನುತ್ತಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ