ಪರಿಶಿಷ್ಟ ಜಾತಿಗಳ ಒಳ ಮೀಸಲಾತಿಯ ಆಯಾಮಗಳ ಬಗ್ಗೆ ಚರ್ಚಿಸಿದ – ಮಾಜಿ ಕೇಂದ್ರ ಮಂತ್ರಿ ಎ.ನಾರಾಯಣ ಸ್ವಾಮಿ.
ಬಾಗಲಕೋಟೆ ಫೆ.19

ಮಾಜಿ ಕೇಂದ್ರ ಮಂತ್ರಿ ಶ್ರೀ ಎ.ನಾರಾಯಣಸ್ವಾಮಿ ರವರು ಇಂದು ಬೆಳಗಾವಿಯ ಸರ್ಕಿಟ್ಹೌಸ್ಸಲ್ಲಿ ಸಮುದಾಯದ ಮುಖಂಡರೊಂದಿಗೆ ಒಳ ಮೀಸಲಾತಿಯ ಆಯಾಮಗಳ ಕುರಿತು ಮಾತನಾಡಿದರು ನಂತರ ಪ್ರಮುಖವಾಗಿ ತಮ್ಮ ಪ್ರೀತಿಯ ಮಗಳಾದ ಶೀತಲ್ ಮತ್ತು ಶಶಾಂಕ್ ರವರ ಮದುವೆ ಆರತಕ್ಷತೆ ಇದೇ ತಿಂಗಳು 23. ರಂದು ಬೆಂಗಳೂರು ಅರಮನೆಯಲ್ಲಿ ನಡೆಯುತ್ತಿರುವ ಮದುವೆ ಆರತಕ್ಷತೆಗೆ ಆಗಮಿಸಿ ನೂತನ ವಧು ವರರಿಗೆ ಆಶೀರ್ವಾದ ನೀಡಿ ಶುಭ ಹಾರೈಕೆಗಳು ಕೋರಲು ಆಗಮಿಸುವಂತೆ ಮದುವೆ ಆಮಂತ್ರಣ ಪತ್ರಿಕೆ ನೀಡಿ ಎಲ್ಲರನ್ನೂ ಆಹ್ವಾನಿಸಿದರು.

ದಯವಿಟ್ಟು ಆಮಂತ್ರಣ ತಲುಪದೀರುವವರು ವಾಟ್ಸಪ್ ಸುದ್ದಿಯನ್ನು ನೋಡಿ ಕೊಂಡು ಮದುವೆಗೆ ಆಗಮಿಸ ಬೇಕೆಂದು ವಿಷೇಶ ಮನವಿ ಮಾಡಿ ಕೊಂಡರು. ಪ್ರಮುಖರ ಸಭೆಯಲ್ಲಿ ಒಳ ಮೀಸಲಾತಿಯ ಹೋರಾಟಗಾರರು ಮತ್ತು ಮುಖಂಡರಾದ ಶ್ರೀ ಮುತ್ತಣ್ಣ.ವೈ ಬೆಣ್ಣೂರು, ಪ್ರಶಾಂತ ಐಹೊಳೆ, ಅರುಣ್ ಐಹೊಳೆ, ಮೇತ್ರಿ ಜಿಲ್ಲಾ ಪಂಚಾಯತ ಮಾಜಿ ಸದಸ್ಯರು, ಡಿ.ಎಸ್.ಎಸ್ ರಾಜ್ಯ ಅಧ್ಯಕ್ಷರಾದ ಶ್ರೀ ಚಂದ್ರಕಾಂತ ಕಾದ್ರೋಲಿ, ಮೋಹನ್ ಹಿರೇಮನಿ ಹುಬ್ಬಳ್ಳಿ, ಬಸವರಾಜು ಗೋಕಾಕ್, ಅಶೋಕ್ ದೊಡ್ಡಮನಿ, ವೆಂಕಟೇಶ್ ಸಗಬಾಲ, ಅಜಿತ್ ಮಾದರ, ಮಂಜುನಾಥ ಕೊಂಡಂಪಲ್ಲಿ, ಮುಂತಾದ ಅನೇಕ ಪ್ರಮುಖರು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಯಮನಪ್ಪ.ಸಿ.ಹಲಗಿ.ಶಿರೂರು. ಬಾಗಲಕೋಟ