ಶೈಕ್ಷಣಿಕ ಬಲಪಡಿಸಲು ಕಲಿಕಾ ಹಬ್ಬ – ಒಳ್ಳೆಯದು ಚೌಧರಿ.
ಯಲಗೋಡ ಫೆ.20





ದೇವರ ಹಿಪ್ಪರಗಿ ತಾಲೂಕಿನ ಯಲಗೋಡದ ಎಂ.ಪಿ.ಎಸ್ ಶಾಲೆಯಲ್ಲಿ ಕಲಿಕಾ ಹಬ್ಬದ ಕಾರ್ಯಗಳನ್ನು ನಡೆಯಿತು,ಮಕ್ಕಳು ನೀತಿ ಕಥೆಗಳನ್ನು ಆಲಿಸಿ ನೀತಿ ವಂತರಾಗಬೇಕು ಸತತ ಅಧ್ಯಯನ ಶೀಲತೆಯನ್ನು ಮೈಗೂಡಿಸಿ ಕೊಂಡು ಉತ್ತಮ ವ್ಯಕ್ತಿಗಳಾಗಿ ರೂಪ ಗೊಳ್ಳಬೇಕು ಎಂದು ಮುಖ್ಯ ಅತಿಥಿಗಳಾಗಿ ಹಳ್ಳೆಪ್ಪ ಬೋರಗಿಯವರು ಕಲಿಕಾ ಹಬ್ಬದಲ್ಲಿ ಹೇಳಿದರು. ಮಕ್ಕಳು ನೈತಿಕ ಮೌಲ್ಯಗಳನ್ನು ಬೆಳೆಸಿ ಕೊಳ್ಳಬೇಕು ಹಾಗೂ ಆದರ್ಶ ವ್ಯಕ್ತಿಗಳ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿ ಕೊಂಡು ಉತ್ತಮ ವ್ಯಕ್ತಿಗಳಾಗಿ ರೂಪ ಗೊಳ್ಳಬೇಕು ಎಂದು ಮಾತನಾಡಿದರು. ಸರ್ಕಾರಿ ಶಾಲೆಗಳಿಗೆ ಸಂಬಂಧಿಸಿದಂತೆ ವಿಧ್ಯಾರ್ಥಿಗಳಿಗೆ ಇದರಲ್ಲಿ ವಿಶೇಷವಾಗಿ ಮೂಲಭೂತ ಸಾಕ್ಷರತೆ ಮತ್ತು ತಂತ್ರಜ್ಞಾನ ಚಟುವಟಿಕೆಗಳನ್ನು ಬಲಪಡಿಸಲು ವಿಧ್ಯಾರ್ಥಿಗಳಿಗೆ ಕಲಿಕಾ ಹಬ್ಬ ಪೂರಕವಾಗಿ ಹಾಗೂ ಸಂತೋಷ ದಾಯಕ ಕಲಿಕಾ ವಾತಾವರಣ ಪ್ರವೇಶಿಸುತ್ತದೆ.

ಕಲಿಕಾ ಹಬ್ಬವು ಎಫ್.ಎಲ್.ಎನ್ ಆಧಾರಿತ ನಿಧಾನ ಗತಿ ಕಲಿಕೆಯಲ್ಲಿರುವ ಮಕ್ಕಳಿಗಾಗಿ ಇರುತ್ತದೆ ಇದರಲ್ಲಿ ಏಳು ಚಟುವಟಿಕೆಗಳಿವೆ ಎಲ್ಲಾ ಚಟುವಟಿಕೆಗಳು ಮಕ್ಕಳಿಗೆ ಮನರಂಜನೆ ನೀಡುತ್ತಾ ಕಲಿಕೆಯನ್ನು ಉತ್ತೇಜಿಸುತ್ತದೆ ಈ ಚಟುವಟಿಕೆಗಳು ಮಕ್ಕಳಲ್ಲಿರುವ ಸೂಕ್ತ ಪ್ರತಿಭೆಯನ್ನು ಹೊರ ಹಾಕುತ್ತದೆ ಎಂದು ಯಲಗೋಡ ಸಮೂಹ ಸಂಪನ್ಮೂಲ ವ್ಯಕ್ತಿ ಯಾದ ವಿರೇಶ ಚೌಧರಿ ಪ್ರಸ್ತಾವಿಕವಾಗಿ ಮಾತನಾಡಿದರು, ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಯಲಗೋಡದ ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿರುವ ಶ್ರೀ ಮಹಾಂತೇಶ ಕೂಟನೂರು ಇವರು ಜ್ಯೋತಿ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮುಖ್ಯ ಅತಿಥಿಗಳಾಗಿ ಶ್ರೀ ಶಿವಪುತ್ರ ಬೂದಿಹಾಳ. ಶ್ರೀ ಎಂ ಐ ನಾಟಿಕರ. ಶ್ರೀ ಎಂ ಎಸ್ ಪಿ ಕನಸೆ. ಶ್ರೀ ಬಿ ಟಿ ನೆಲಗಿ. ಶ್ರೀ ಆರ್ ಎಚ್ ಪೂಜಾರಿ. ಶ್ರೀ ಸಿ ಎ ಮುಲ್ಲಾ, ಶ್ರೀ ಎಸ್.ಜಿ ಗುಣದಾಳ, ಶ್ರೀ ಸದಾಶಿವ ಗುಡಿಮನಿ,ಶ್ರೀ ಸುರೇಶ ಮೇತ್ರಿ, ಶ್ರೀ ಮಲ್ಲಿಕಾರ್ಜುನ ಅಂಕಲಗಿ ಉಪಸ್ಥಿತರಿದ್ದರು. ಶ್ರೀ ಸುರೇಶ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಶ್ರೀ ರಾಘವೇಂದ್ರ ಉಂಡಿಗೇರ ಸ್ವಾಗತಿಸಿದರು. ಶ್ರೀಮತಿ ಮಂಗಳ ಬಾಯಿ ಅಲ್ಮದ ವಂದಿಸಿದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ