ಸಿದ್ದಯ್ಯನ ಕೋಟೆ ಶಾಖಾ ಮಠದಲ್ಲಿ ಕೆ.ಓ ಶಿವಣ್ಣ ಇವರ ಗಾಯನ ಸಂಗೀತದ – ಧ್ವನಿ ಕೇಳಲು ಸಾರ್ವಜನಿಕರು ಹಾತೊರೆಯುತ್ತಾರೆ.
ತುಮಕೂರ್ಲಹಳ್ಳಿ ಫೆ.20





ಬುಡಕಟ್ಟು ಕಲೆಗಳು ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ಕಲರ್ಸ್ ಕನ್ನಡ ವಾಹಿನಿಯ ಕನ್ನಡ ಕೋಗಿಲೆ ಸೀಸನ್ ಎರಡರ ವಿಜೇತ ಗಾಯಕ ಖಾಸಿಂ ಅಲಿ ಹೇಳಿದರು.ಮೊಳಕಾಲ್ಮೂರು ತಾಲ್ಲೂಕಿನ ತುಮಕೂರ್ಲಹಳ್ಳಿ ಹೊರವಲಯದ ಹೊಗ್ಗಾಲಿ ಪಾಲಯ್ಯತೋಟದಲ್ಲಿ ಸಪ್ತಸ್ವರ ಸಾಂಸ್ಕೃತಿಕ ಸಂಸ್ಥೆ. ತುಮಕೂರ್ಲಹಳ್ಳಿ,ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಬುಡಕಟ್ಟು ಸಾಂಸ್ಕೃತಿಕ ಸಂಭ್ರಮೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬುಡಕಟ್ಟು ಜನರ ಸಾಂಸ್ಕೃತಿಕ ಪರಂಪರೆ ವೈವಿಧ್ಯಮಯ ಮತ್ತು ಶ್ರೀಮಂತವಾದುದು ಈ ಹಿನ್ನೆಲೆಯಲ್ಲಿ ಬುಡಕಟ್ಟು ಸಾಂಪ್ರದಾಯಿಕ ನೃತ್ಯಗಳು, ಸಂಗೀತ ಮತ್ತು ಕರಕುಶಲ ಕಲೆಗಳನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಬೆಳಸಬೇಕಿದೆ ಎಂದು ತಿಳಿಸಿದರು, ಸಂಗೀತ ಶಿಕ್ಷಕ ಕೆ.ಓ ಶಿವಣ್ಣ ಮಾತನಾಡಿ ಬುಡಕಟ್ಟು ಸಮುದಾಯ ಹಿನ್ನಲೆಯ ಕಲೆಗಳಾದ ಗೊರವರ ಕುಣಿತ, ಕೋಲಾಟ, ಸಾಂಪ್ರದಾಯಿಕ ಸೋಬಾನೆ ಪದಗಳು, ತಮಟೆ ವಾದನ, ಉರುಮೆ ವಾದನ, ಖಾಸಬೇಡರ ಪಡೆ, ಪಂಜುನುಂಗುವ ಕುಣಿತ, ದೇವರ ಎತ್ತುಗಳ ಕಿಲಾರಿ ಕುಣಿತ, ದಾಸಯ್ಯನ ಶಂಖುಜಾಕಟೆ, ಚೂರು ಬೆಲ್ಲ ಮಣೇವು ಕುಣಿತ ಸೇರಿದಂತೆ ಮುಂತಾದ ಅನೇಕ ಕಲೆಗಳು ಅಳವಿನ ಅಂಚಿನಲ್ಲಿರುವುದರಿಂದ ಇಂಥಹ ವಿಭಿನ್ನ ಸಂಸ್ಕೃತಿಯ ಕಲೆಗಳನ್ನು ಕಾಪಾಡಬೇಕಿದೆ, ಅಲ್ಲದೆ ಪಠ್ಯಕ್ರಮದಲ್ಲಿ ಇಂಥಹ ಮೂಲ ಕಲೆಗಳನ್ನು ಸೇರಿಸಿ ಮಕ್ಕಳಿಗೆ ಕಲಾ ಸಂಸ್ಕೃತಿಯನ್ನು ಪರಿಚಯಿಸಬೇಕು ಎಂದು ತಿಳಿಸಿದರು.

ಕೆಂಚಪ್ಪ ಮತ್ತು ತಂಡ ಉರುಮೆ ಕಲಾ ಪ್ರದರ್ಶನ, ತಮಟೆ-ಸಿದ್ಧಪ್ಪ ಮತ್ತು ತಂಡ, ಭರತನಾಟ್ಯ ಹರ್ಷಿತಾ ಮತ್ತು ತಂಡ, ಸುಗಮ ಸಂಗೀತ ಗಾಯನ ಖಾಸಿಂ ಅಲಿ, ಜಾನಪದ ಗೀತೆ-ಎಂ.ನುಂಕೇಶ್ ಮತ್ತು ತಂಡ, ವೀರಗಾಸೆ ಭರಮಸಾಗರ ಬಸವರಾಜ, ವಚನ ಸಂಗೀತ ಕೆ.ಓ ಶಿವಣ್ಣ ತಂಡ ಸೇರಿದಂತೆ ಹಲವು ಕಲಾ ತಂಡಗಳು ತಮ್ಮ ಕಲೆಯನ್ನು ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಸಪ್ತಸ್ವರ ಸಾಂಸ್ಕೃತಿಕ ಸಂಸ್ಥೆ ಅಧ್ಯಕ್ಷ ರಾಮದಾಸ್, ಕಾರ್ಯದರ್ಶಿ ಗುಂಡಮ್ಮ, ಮುಖಂಡರಾದ ಗೋಪಾಲನಾಯಕ, ಪಂಪಾಪುರ ಜಯಣ್ಣ, ಜಂಡಿಗ ತಿಪ್ಪಯ್ಯ, ಒಗ್ಗಾಲಿ ತಿಪ್ಪೇಸ್ವಾಮಿ, ಚೇರ್ಮನ್ ಬೋರಯ್ಯ, ಟೈಲರ್ ತಿಪ್ಪೇಸ್ವಾಮಿ, ಹರಿಪ್ರಸಾದ್, ಗಿಡ್ಡೋಬಣ್ಣ, ಗುಂಡಯ್ಯ, ಕಲಾವಿದರಾದ ಅಭಿಷೇಕ್, ಶಿವಕುಮಾರ್ ಮಲ್ಲೂರಹಳ್ಳಿ, ಗಾಯಕ ಅಮುಕುಂದಿ ಗಂಗಾಧರ ಸೇರಿದಂತೆ ಮುಂತಾದವರು ಭಾಗವಹಿಸಿದ್ದರು ಎಂದು ವರದಿಯಾಗಿದೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು