ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ವ್ಯವಹಾರ ದೃಷ್ಟಿಯಲ್ಲಿ ನೋಡದೆ ಅದೊಂದು ಸೇವೆ ಎಂದು ನೋಡಬೇಕು – ಶಾಸಕ ಡಾ, ಶ್ರೀನಿವಾಸ್.ಎನ್ ಟಿ.
ಕೆ. ಹೊಸಹಳ್ಳಿ ಫೆ.20





ಕೆ.ಹೊಸಹಹೊಸಹಳ್ಳಿ ಸೋಫಿಯಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗೆ ಶಾಸಕರಾದ ಡಾ, ಶ್ರೀನಿವಾಸ್.ಎನ್ ಟಿ ಪ್ರಗತಿ 2025 – ಮಕ್ಕಳ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ನಾವು ಖಾಸಗಿ ಶಿಕ್ಷಣ ಸಂಸ್ಥೆಗಳನ್ನು ಆರ್ಥಿಕ ವ್ಯವಹಾರ ಮನೋಭಾವನೆಯ ದೃಷ್ಟಿ ಕೋನದಲ್ಲಿ ನೋಡ ಬಾರದು. ಅವುಗಳು ಈ ನಾಡು ದೇಶ ಎದುರು ನೋಡುತ್ತಿರುವ ಒಬ್ಬ ಗೌರವಾನ್ವಿತ ಪ್ರಜೆಯಾಗಿ, ಭವಿಷ್ಯತ್ತಿನ ನಾಯಕನಾಗಿ ಹುಟ್ಟು ಹಾಕುವ ನಿಟ್ಟಿನಲ್ಲಿ ಕೊಡುಗೆ ನೀಡುತ್ತಿರುವ ಸೇವೆ ಎಂದು ಅರ್ಥ ಮಾಡಿ ಕೊಳ್ಳಬೇಕು ಎಂದರು. ನನ್ನ ಬಾಲ್ಯದ ವಿದ್ಯಾಭ್ಯಾಸದ ಅವಧಿಯಲ್ಲಿ ನಮ್ಮಂತಹ ಗ್ರಾಮೀಣ ಪ್ರದೇಶಗಳಲ್ಲಿನ ಜನರಿಗೆ ಇಂಗ್ಲೀಷ್ ಎಂಬುವುದು ಕಬ್ಬಿಣದ ಕಡಲೆಯಾಗಿತ್ತು. ಖುಷಿಯ ಸಂಗತಿ ಎಂದರೇ, ನಮ್ಮಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳು ಕಲ್ಯಾಣ ಕರ್ನಾಟಕ ಹಿಂದುಳಿದ ಈ ಭಾಗದ ಗಡಿಗ್ರಾಮಗಳಾದ ಆಲೂರು, ಕಾನಾಮಡುಗು, ಹಿರೇಕುಂಬಳಗುಂಟೆ, ಹೊಸಹಳ್ಳಿ , ಹೂಡೇಂ, ಪೂಜಾರಹಳ್ಳಿ, ಜುಮ್ಮೋಬನಹಳ್ಳಿ ಅಂತಹ ಗ್ರಾಮಗಳನ್ನು ಗಮನದಲ್ಲಿಟ್ಟು ಕೊಂಡು, ಬೆಂಗಳೂರು ಮಟ್ಟದಲ್ಲಿ ಉದ್ಯೋಗ ಅವಕಾಶಗಳು ಸೃಷ್ಟಿಯಾಗುವಂತೆ ಮಲ್ಟಿಮೀಡಿಯಾ, ಇಂಜಿನಿಯರ್, ವೆಟರ್ನರಿ ಕೋರ್ಸ್ ಗಳನ್ನುಳ್ಳ ಅಣಿಯಾಗುವಂತೆ ಶಕ್ತಿ ತುಂಬುವ ನಿಟ್ಟಿನಲ್ಲಿ ತಲೆ ಎತ್ತಿ ನಿಂತಿರುವುದನ್ನು ಹಾಗೂ ಸಮಾಜ ಮುಖಿಯಾದ ಕೆಲಸ ಕಾರ್ಯ ಮಾಡುತ್ತಿರುವುದನ್ನು ಸ್ಮರಿಸಿಕೊಳ್ಳುತ್ತೇನೆ ಎಂದು ತಿಳಿಸಿದರು.

ಒಟ್ಟಿನಲ್ಲಿ, ಹಿಂದುಳಿದ ನಮ್ಮ ಕೂಡ್ಲಿಗಿ ಕ್ಷೇತ್ರದ ಜನತೆಗೆ ಶಿಕ್ಷಣ, ಆರೋಗ್ಯ ಮತ್ತು ಮೂಲ ಭೂತ ಸೌಲಭ್ಯಗಳನ್ನು ಕಲ್ಪಿಸಿ ಕೊಡುವ ನಿಟ್ಟಿನಲ್ಲಿ ಸಾಮಾಜಿಕ ಸುಧಾರಣೆಗೆ ಒತ್ತು ಕೊಡಲು ಪ್ರತಿ ದಿನ, ಪ್ರತಿ ಕ್ಷಣವೂ ಸಮಯವನ್ನು ವ್ಯರ್ಥ ಮಾಡದೇ ಇಲ್ಲಿನ ಜನರ ಭಾವನೆಗಳನ್ನು ಅರ್ಥ ಮಾಡಿ ಕೊಂಡು ಕೆಲಸ ಮಾಡುತ್ತೇನೆ ಸಭೆಯಲ್ಲಿ ನೆರೆದ ಜನರಿಗೆ ತಿಳಿಸಿದರು. ಈ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ದಾಮ ಶರಣಾರ್ಯರು ಧರ್ಮಧಿಕಾರಿಗಳು ದಾಸೋಹ ಮಠ ಕಾನಮಡುಗು, ಕಾರ್ಯಕ್ರಮದ ಅಧ್ಯಕ್ಷತೆ ಕೆ.ಎಂ ನಾಗರತ್ನಮ್ಮ ಶರಣಯ್ಯ, ಬಾಪೂಜಿ ಸಮೂಹ ಸಂಸ್ಥೆಯ ಕಾರ್ಯದರ್ಶಿ ಡಾ, ಕೆ.ಎಂ ವೀರೇಶ್ , ಹೊಸಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕೆ ಜಿ ಸಿದ್ದನಗೌಡ.

ಕೆಜಿ ಕುಮಾರ ಗೌಡ, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಯು ನಾಗೇಶ್, ಮಾಜಿ ತಾಲೂಕ ಪಂಚಾಯತಿ ಸದಸ್ಯ ಕೆಜಿ ಗುರು ಸಿದ್ದನಗೌಡ, ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಹೆಚ್ಚ ರೇವಣ್ಣ, ವಿದ್ಯಾನಿಕೇತನ ಶಾಲೆಯ ಆಡಳಿತಾಧಿಕಾರಿ ಕೆಎಂ ಹರ್ಷವರ್ಧನ, ಆರ್ಯನ್ ಪಬ್ಲಿಕ್ ಶಾಲೆಯ ಆಡಳಿತಾಧಿಕಾರಿ ಏಎಂ ಗುರುಸಿದ್ದಯ್ಯ, ಎಚ್ ಕೆ ಉಮೇಶ್, ಎಚ್ ಎಮ್ ಚಂದ್ರಪ್ರಕಾಶ್, ತಳವಾರ್ ಶರಣಪ್ಪ ಕಾನಮಡಗು, ಎಂ ಓ ಮಂಜುನಾಥ್, ಇದೇ ಸಂದರ್ಭದಲ್ಲಿ ಸೋಫಿಯಾ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ವೈದ್ಯಕೀಯ ಪದವಿ ಪಡೆದ ವಿದ್ಯಾರ್ಥಿಗಳಿಗೆ, ಇಂಜಿನಿಯರ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಗೌರವ ಸನ್ಮಾನಿಸಲಾಯಿತು, ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿ ಕಾರ್ಯಕ್ರಮ ಜರುಗಿತು, ಸೋಫಿಯಾ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗ , ವಿದ್ಯಾರ್ಥಿಗಳು, ಮುಖಂಡರು, ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ