ಮಾನ್ವಿಯಲ್ಲಿ ಪೊಲೀಸ್ ಇಲಾಖೆ ಬಂದೋಬಸ್ತ್ ನಡುವೆ – ನಡೆದ ಸರ್ವೆ ಕಾರ್ಯ.
ಮಾನ್ವಿ ಫೆ.24

ಮಾನ್ವಿ ಪಟ್ಟಣದಲ್ಲಿ ವಿವಾದಾತ್ಮಕ ಸರ್ವೆ ನಂಬರ್ ಎಂದೇ ಹೆಸರು ವಾಸಿಯಾದ ಸರ್ವೆ ನಂಬರ್ 7/3 ರ ಕುರಿತು ತಾಲೂಕ ದಂಡಾಧಿಕಾರಿ ರಾಜು ಫಿರಂಗಿ ಹಾಗೂ ಪೊಲೀಸ್ ಸಿಬ್ಬಂದಿಗಳ ಬಂದೋಬಸ್ತ್ ನಡುವೆ ಸರ್ವೆ ಕಾರ್ಯ ನಡೆಯಿತು.
ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಸರ್ವೆ ನಂಬರ್ 7/3 ರ 28 ಗುಂಟೆ ಜಮೀನನ್ನು ಒತ್ತುವರಿ ಮಾಡಲಾಗಿದೆ ಎಂದು ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯ ಬೆಂಗಳೂರಲ್ಲಿ ಹೋರಾಟಗಾರ ಶಹನವಾಜ್ ದೂರು ಸಲ್ಲಿಸಿದ್ದರು.
ಕರ್ನಾಟಕ ಭೂ ಕಬಳಿಕೆ ನಿಷೇಧ ವಿಶೇಷ ನ್ಯಾಯಾಲಯದ ಆದೇಶದ ಪ್ರಕಾರ ವಕ್ಫ್ ಅಧಿಕಾರಿಗಳು ಮಾನ್ವಿ ಕಂದಾಯ ಹಾಗೂ ಸರ್ವೆ ಇಲಖೆಯ ಅಧಿಕಾರಿಗಳು ಸರ್ವೆ ಕಾರ್ಯ ನಡೆಸಿದರು.
ಒಟ್ಟಾರೆ ಯಾಗಿ ನೋಡಿದರೆ ಮಾನ್ವಿ ಪಟ್ಟಣದ ಸರ್ವೆ ನಂಬರ್ 7/3 ರ 22 ಗುಂಟೆ ಜಮೀನು ಯಾರಾದರು ಒತ್ತುವರಿ ಮಾಡಿದ್ದರೆ ಕಾನೂನು ಬದ್ಧವಾಗಿ ಅಧಿಕಾರಿಗಳು ವರದಿ ಕೊಡಬೇಕು ಇಲ್ಲದಿದ್ದರೆ ಮತ್ತೆ ಹೋರಾಟ ಮಾಡಲಾಗುವುದು ಎಂದು ಶಹನವಾಜ್ ತಿಳಿಸಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ