ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ – ವಲಯ ಮಟ್ಟದ ಶಾಖೆಯ ಪದಾಧಿಕಾರಿಗಳ ಆಯ್ಕೆ.
ಕಲಕೇರಿ ಫೆ.26

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮದಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಡಾ, ಡಿ.ಜೆ ಸಾಗರ್ ಜಿ ಬಣ ವಲಯ ಶಾಖೆ ಕಲಕೇರಿ ದಿನಾಂಕ 25.02.2025 ಮಂಗಳವಾರ ಪ್ರವಾಸಿ ಮಂದಿರ ಕಲಕೇರಿಯಲ್ಲಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ವಲಯ ಶಾಖೆ ಪದಾಧಿಕಾರಿಗಳ ಸಭೆ ಕರೆಯಲಾಗಿತ್ತು. ಈ ಸಭೆಯ ಅಧ್ಯಕ್ಷತೆಯನ್ನು ಶ್ರೀ ವೈ.ಸಿ ಮಯೂರ್ ಜಿಲ್ಲಾ ಸಂಚಾಲಕರು ಡಿ.ಎಸ್.ಎಫ್ ವಿಜಯಪುರ ಇವರು ಈ ಸಂದರ್ಭದಲ್ಲಿ ಪದಾಧಿಕಾರಿಗಳ ಆಯ್ಕೆ ಸಂಘಟನೆ ಯಾವ ರೀತಿ ಇರಬೇಕು ಎಂಬುದನ್ನು ಸಂಘದಲ್ಲಿ ನಾವು ಯಾವ ರೀತಿ ಬೆಳೆಯಬೇಕು ಪ್ರತಿಯೊಬ್ಬ ಯುವಕ ಸಂಘಟನೆ ಒಳಗೆ ಯಾವುದೇ ಸಮಾಜ ಯಾವುದೇ ಧರ್ಮಯ ಇರಲಿ ನಮ್ಮ ಯುವಕರು ನ್ಯಾಯವನ್ನು ದೊರ್ಕಿಸುವಂಥ ಕೆಲಸ ಮಾಡಬೇಕು ನಮ್ಮ ಸಂಘಟನೆಯಲ್ಲಿ ಆ ಸಮಾಜ ಈ ಸಮಾಜ ಅನ್ನುವ ಭಾವನೆ ಇರಬಾರದು ನಾವು ಎಲ್ಲರೂ ಒಂದೇ ತಾಯಿಯ ಮಕ್ಕಳಂತೆ ಡಾ, ಡಿ.ಜಿ ಸಾಗರ್ ಅವರ ಮಾರ್ಗದಲ್ಲಿ ಮತ್ತು ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರು ತೋರಿಸಿದ ಹಾದಿಯಲ್ಲಿ ನಾವೆಲ್ಲರೂ ನಡೆಯಬೇಕು.

ಯಾರಿಗೂ ಅನ್ಯಾಯ ಮಾಡಬಾರದು ನ್ಯಾಯಕ್ಕಾಗಿ ಹೋರಾಡುವಂಥ ಛಲ ಪ್ರತಿಯೊಬ್ಬರಲ್ಲಿ ಇರಬೇಕು ಇಲ್ಲಿ ಜಾತಿ ಮತ ಎನ್ನುವ ಭಾವನೆ ಇರಬಾರದು ಎಲ್ಲೇ ಅನ್ಯಾಯ ನಡೆದರೆ ಅಲ್ಲಿ ನಾವೆಲ್ಲರೂ ಹೋಗಿ ನಿಂತು ನ್ಯಾಯವನ್ನು ಒದಗಿಸಿ ಕೊಡುವ ಕರ್ತವ್ಯ ನಮ್ಮದು ಆಗಿರಬೇಕು ಎಂದು ಈ ಸಂದರ್ಭದಲ್ಲಿ ಎಲ್ಲಾ ಪದಾಧಿಕಾರಿಗಳಿಗೆ ತಿಳಿಸಿದರು. ಮುಖ್ಯ ಅತಿಥಿಗಳಾಗಿ ಸೋಮು ಬಡಿಗೇರ್ ವಲಯ ಸಂಚಾಲಕರು ಡಿ.ಎಸ್.ಎಸ್ ಕಲಕೇರಿ. ಸಂಜೀವ್ ಉತಾಳೆ ಸಂಚಾಲಕರು ಡಿ.ಎಸ್.ಎಸ್ ವಲಯ ಶಾಖೆಯ ಕಲಕೇರಿ ಪ್ರಕಾಶ್.ನಾಟಿಕರ್. ಸಂಚಾಲಕರು ಡಿ.ಎಸ್.ಎಸ್ ಬೆಕ್ಕಿನಾಳ ವಿಶೇಷ ಆಹ್ವಾನಿತರಾಗಿ ಎಲ್ಲಪ್ಪ ಹೊಸಮನಿ.

ಇರಗಂಟಿ ಬಡಿಗೇರ್ ಕಲಕೇರಿ ನಗರ ಪದಾಧಿಕಾರಿಗಳು ಬಸವರಾಜ್ ಗುಡಿಸಮನಿ ಸಂಚಾಲಕರು ಕಲಕೇರಿ ನಾಗಪ್ಪ ಹೊಸಮನಿ ಸಂಘಟನಾ ಸಂಚಾಲಕರು ಸೋಮಶೇಖರ್ ಹೊಸಮನಿ ಸಂಘಟನಾ ಸಂಚಾಲಕರು ಆನಂದ ಹೊಸಮನಿ ಸಂಘಟನಾ ಸಂಚಾಲಕರು ಬಸವರಾಜ ಉತಾಳೆ ಖಜಂಚಿ ಹಾಗೂ ರಾಂಪುರ್ ಪಿಟಿ ಗ್ರಾಮದ ವಲಯ ಶಾಖೆ ಪದಾಧಿಕಾರಿಗಳ ಆಯ್ಕೆ ಭೀಮಪ್ಪ ದೊಡ್ಮನಿ ಸಂಚಾಲಕರು ರಾಂಪುರ್ ದೇವೇಂದ್ರ ಹರಿಜನ ಸಂಚಾಲಕರು ಬಸವರಾಜ್ ಕಾಂಬಳೆ ಸಂಚಾಲಕರು ಮಲ್ಲಿಕಾರ್ಜುನ್ ಹರಿಜನ ಸಂಚಾಲಕರು ದೇವೇಂದ್ರ ಬಡಿಗೇರ್ ಖಜಾಂಚಿ ಹಾಗೂ ವಿದ್ಯಾರ್ಥಿ ಘಟಕದ ಪದಾಧಿಕಾರಿಗಳ ಆಯ್ಕೆ ಮಾಡಿದರು. ಪರಶುರಾಮ್ ಹೊಸಮನಿ ಸಂಚಾಲಕರು ದಯಾನಂದ ಬೂದಿಹಾಳ ಸಂಚಾಲಕರು ಪರಶುರಾಮ್ ಸಿದ್ಗುಂಡಪ್ಪ ಹೊಸಮನಿ ಸಂಚಾಲಕರು ಮಲ್ಲಪ್ಪ ಮರಿಯಪ್ಪ ನಡೆ ಸಂಚಾಲಕರು ನಿಂಗರಾಜ್ ಹೊಸಮನಿ ಖಜಾಂಚಿ ಕಲಕೇರಿ ವಲಯ ಶಾಖೆ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ