ಸಂಭ್ರಮ ದಿಂದ ನಡೆದ ಶಿವರಾತ್ರಿ – ಹಬ್ಬ ಆಚರಣೆ.
ಮಾನ್ವಿ ಫೆ.27

ಶಿವರಾತ್ರಿ ಹಬ್ಬ ಬಂದರೆ ಸಾಕು ಮಾನ್ವಿಯಲ್ಲಿ ಒಂದು ರೀತಿಯಲ್ಲಿ ವಿಶೇಷತೆ ಇರುತ್ತದೆ. ಯಾಕಂದರೆ ಮಾನ್ವಿ ಪಟ್ಟಣದ ಧ್ಯಾನ ಮಂದಿರದಲ್ಲಿ ಭಕ್ತರು ಭಾಗವಹಿಸಿ ಮಹಿಳೆಯರೆ ಇಲ್ಲಿ ರಥೋತ್ಸವ ಎಳೆಯುತ್ತಾರೆ.
ಮಾನ್ವಿ ಪಟ್ಟಣದ ಕಲ್ಮಠ ಸ್ವಾಮೀಜಿಗಳು ನಾನಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಧ್ಯಾನ ಮಂದಿರಕ್ಕೆ ಮಹಿಳೆಯರು ಆಗಮಿಸಿ ಗಾರಿಗೆಯನ್ನು ಅರ್ಪಿಸಿ ಪೂಜೆ ಸಲ್ಲಿಸುವ ಪ್ರತೀತಿ ಇದೆ.
ಧ್ಯಾನ ಮಂದಿರದಲ್ಲಿ ನಡೆಯುವ ವಿಶೇಷ ಪೂಜೆ ಹಾಗೂ ಜಾತ್ರೆಯನ್ನು ವೀಕ್ಷಿಸಲು ಮಾನ್ವಿ ತಾಲೂಕಿನ ಸಾವಿರಾರು ಭಕ್ತರು ಭಾಗವಹಿಸುವ ಜನಸ್ತೋಮವನ್ನ ವೀಕ್ಷೀಸುವುದೆ ಇಲ್ಲಿ ನೋಡಬಹುದು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ