ಈ ರವೀಶ ಅಕ್ಕರ ಹಿರಿಯೂರು ಇವರಿಗೆ 69 ನೇ. ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ – ತಾಲೂಕ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಿದರು.
ಹಿರಿಯೂರು ನ.05

69 ನೇ. ಕನ್ನಡ ರಾಜ್ಯೋತ್ಸವ 2024 ರಂದು ಸಾಹಿತ್ಯ ಮತ್ತು ಸಂಘಟನೆ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಈ ರವೀಶ ಹಿರಿಯೂರು ಇವರಿಗೆ ದಿನಾಂಕ 01/11/2024 ನೇ. ಶುಕ್ರವಾರ ಶ್ರೀ ಮತಿ ರಾಧಮ್ಮ ಅಂಜಿನಪ್ಪ ರೋಟರಿ ಬಯಲು ರಂಗಮಂದಿರ, ನೆಹರು ಮೈದಾನ ಹಿರಿಯೂರು ನಲ್ಲಿ ಏರ್ಪಡಿಸಲಾದ 69 ನೇ. ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ತಾಲ್ಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದರು.ಕಾರ್ಯಕ್ರಮದಲ್ಲಿ ಮಾನ್ಯ ತಹಶೀಲ್ದಾರ್ ಸಿ ರಾಜೇಶ್ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ ಎಂ ತಿಪ್ಪೇಸ್ವಾಮಿ, ಪೊಲೀಸ್ ಉಪಾಧೀಕ್ಷಕರು ಶಿವಕುಮಾರ್, ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ವಿ.ಎಂ.ನಾಗೇಶ್ ಇನ್ನೂ ಸಾಹಿತ್ಯ ಅಭಿಮಾನಿಗಳು ಅಧಿಕಾರಿಗಳು ಕನ್ನಡ ಪರ ಸಂಘಟನೆಗಳ ಉಪಸ್ಥಿತಿಯಲ್ಲಿ ತಾಲ್ಲೂಕು ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಂತಸದಲ್ಲಿ ಪತ್ರಿಕಾ ಮಿತ್ರರು. ಸಾಹಿತ್ಯಾಭಿಮಾನಿಗಳು.ಹಾಗೂ ಮಿತ್ರರು ಅಭಿನಂದನೆ ಸಲ್ಲಿಸಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್.ವೀರೇಶ್.ಕೆ.ಹೊಸಹಳ್ಳಿ