ಹಂಪಿ ಉತ್ಸವದಲ್ಲಿ ತಾಲೂಕಿನ ಪ್ರತಿಭೆಗಳು – ಅನಾವರಣ ಗೊಳ್ಳಲಿ ಎಂದು ಗ್ರಾಮಸ್ಥರ ಶುಭ ಹಾರೈಕೆಗಳು.
ತೂಲಹಳ್ಳಿ ಫೆ.28

ಕೊಟ್ಟೂರು ತಾಲೂಕಿನ ತೂಲಹಳ್ಳಿಯ ಯುವ ಉತ್ಸಾಹಿಯ ಸಪ್ತ ಸ್ವರಗಳು ಮೇಳೈಸಿಲಿ ವಿಶ್ವ ವಿಖ್ಯಾತ ಹಂಪಿ ಉತ್ಸವಕ್ಕೆ ಕ್ಷಣ ಗಣನೆ ಆರಂಭವಾಗಿದ್ದು, ಈ ಬಾರಿಯ ಹಂಪಿ ಉತ್ಸವದಲ್ಲಿ ತಾಲೂಕಿನ ಪ್ರತಿಭೆಗಳಿಗೆ ಜಿಲ್ಲಾಡಳಿತ ಅವಕಾಶ ಕಲ್ಪಿಸಿದೆ. ತಾಲೂಕಿನ ತೂಲಹಳ್ಳಿಯ ಸಪ್ತಸ್ವರ ಕಲಾ ಟ್ರಸ್ಟ್ ತಂಡ ದಿಂದ ಕೋಲಾಟ ಹಾಗೂ ಗ್ರಾಮದ ಯುವ ಉತ್ಸಾಹಿ ಗಾಯಕ ಶ್ರೀ ಬಿ.ನೀಲಪ್ಪ ರವರು ಸುಗಮ ಸಂಗೀತ ಕಾರ್ಯಕ್ರಮಗಳಿಗೆ ಆಯ್ಕೆ ಯಾಗಿರುತ್ತಾರೆ. ಎಲ್ಲಾ ಕಲಾವಿದರು ತಮ್ಮ ಕಲಾ ಪ್ರೌಢಿಮೆಯನ್ನು ಪ್ರದರ್ಶಿಸಲಿ ಎಂದು ಗ್ರಾಮಸ್ಥರು ಶುಭ ಕೋರಿದ್ದಾರೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಪ್ರದೀಪ್. ಕುಮಾರ್.ಸಿ.ಕೊಟ್ಟೂರು