ಪಿ.ಎಸ್ ಹಿರೇಮಠ ರವರಿಗೆ “ಬಸವ ಕಾಯಕ ರತ್ನ”- ಪ್ರಶಸ್ತಿ ಲಭಿಸಿದೆ.
ಗಜೇಂದ್ರಗಡ ಫೆ.28


ಗಜೇಂದ್ರಗಡ ದಲ್ಲಿರುವ ಪ್ರತಿಷ್ಠಿತ ಪ್ರೌಢ ಶಾಲೆ ಯಾಗಿರುವ ಕೆ.ಎಸ್.ಎಸ್. ಪ್ರೌಢ ಶಾಲೆಯ ಚಿತ್ರಕಲಾ ಶಿಕ್ಷಕರಾದ ಶ್ರೀ ಪಿ.ಎಸ್ ಹಿರೇಮಠ ಇವರಿಗೆ ಕನ್ನಡ ನುಡಿಮುತ್ತು ಸಾಹಿತ್ಯ ವೇದಿಕೆ ಕರ್ನಾಟಕ ನಿಸರ್ಗ ಸಂಗೀತ ಮಹಾ ವಿದ್ಯಾಲಯ ಹಾಗೂ ರಂಗ ಕಲಾವಿದರ ಸಂಘ (ರಿ) ಇವರುಗಳ ಸಹಯೋಗದಲ್ಲಿ ದ್ವಿತೀಯ ಸಾಹಿತ್ಯ ಸಮ್ಮೇಳನದ ಪ್ರಯುಕ್ತ “ಬಸವ ಕಾಯಕ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ ಸಂಕನಗೌಡ್ರ.ರೋಣ.ಗದಗ