ಬುಡ್ಗ ಜಂಗಮ (ಪ.ಜಾತಿ) ಅಲೆಮಾರಿ ಸಮುದಾಯದ ಇಬ್ಬರ ಹೆಣ್ಣು ಮಕ್ಕಳ ಅತ್ಯಾಚಾರ ಎಸೆಗಿ ಕೊಲೆಯ ಪ್ರಕರಣವನ್ನು – ಖಂಡಿಸಿ ಬೃಹತ್ ಹೋರಾಟ ಹಮ್ಮಿಕೊಳ್ಳಲಾಯಿತು.
ಹೊಸಪೇಟೆ ಫೆ.28

ಯಾದಗಿರಿಯಲ್ಲಿ ನಡೆದ ಇಬ್ಬರು ಹೆಣ್ಣುಮಕ್ಕಳ ಮೇಲಿನ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ವಿವಿಧ ಸಂಘಟನೆಗಳಿಂದ ನಗರದ ಅಂಬೇಡ್ಕರ್ ವೃತ್ತ ದಿಂದ ತಹಶೀಲ್ದಾರ್ ಕಚೇರಿಯ ವರೆಗೆ ಕಾಲ್ನಡಿಗೆ ಜಾಥಾವನ್ನು ನಡೆಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಮಾತನಾಡಿದ ಅಲೆಮಾರಿ ಅರೆ ಅಲೆಮಾರಿ ಜನಾಂಗದ ರಾಜ್ಯಾಧ್ಯಕ್ಷ ಸಣ್ಣ ಮಾರೆಪ್ಪ ಅವರು ಮಾತನಾಡಿ ಅತ್ಯಾಚಾರ ಮತ್ತು ಕೊಲೆ ನಡೆದು ಇವತ್ತಿಗೆ 13 ದಿನ ಕಳೆದರು ಸರ್ಕಾರ ಅವರ ಮೇಲೆ ಯಾವುದೇ ಕ್ರಮ ನಡೆಸಿಲ್ಲ, ನಾವು ಇದನ್ನು ಖಂಡಿಸುತ್ತೇನೆ ಎಂದು ಹೇಳಿದರು.ಸಾಯಮ್ಮ ಮತ್ತು ಶಾಮಮ್ಮ ಎಂಬ ಇಬ್ಬರು ಹೆಣ್ಣುಮಕ್ಕಳು ದಿನ ನಿತ್ಯದ ಜೀವನೋಪಾಯಕ್ಕಾಗಿ ಭಿಕ್ಷೆ ಬೇಡಿ, ಕೂಲಿ ಕೆಲಸ ಮಾಡಿ, ಚಿಂದಿ ಆರಿಸುವ ಕೆಲಸಕ್ಕೆ ಹೋದಾಗ ದುಷ್ಕರ್ಮಿಗಳು ಅತ್ಯಾಚಾರ ಮಾಡಿ ಸೈದಾಪುರ ಪಕ್ಕದ ನೀಲಹಳ್ಳಿಯ ಕೆರೆಯಲ್ಲಿ ಶವಗಳನ್ನು ಬಿಸಾಕಿದ್ದಾರೆ.ಸ್ಥಳೀಯ ಪೋಲಿಸರು ಮತ್ತು ಸ್ಥಳೀಯ ರಾಜಕಾರಣಿಗಳು ಒತ್ತಡದಿಂದ ಮೃತರ ಸಂಬಂಧಿಕರಿಂದ ಪ್ರಕರಣವನ್ನು ದಾಖಲು ಮಾಡುವಾಗ ಇವರು ಸುಳ್ಳು ಹೇಳಿಕೆಗಳನ್ನು ದಾಖಲಿಸಿ ಕೊಂಡು ಸಂಪೂರ್ಣ ಈ ಪ್ರಕರಣವನ್ನು ದಾರಿ ತಪ್ಪಿಸುವ ಹುನ್ನಾರವನ್ನು ಮಾಡುತ್ತಿರುವುದು ಕಂಡು ಬರುತ್ತದೆ.

ಈ ಹಿಂದೆ ಕೂಡ ರಾಯಚೂರು, ಬಳ್ಳಾರಿ ಜಿಲ್ಲೆಯ ಸಿರುಗುಪ್ಪಾದಲ್ಲಿ ಇದೇ ರೀತಿಯಾಗಿ ಚಿಂದಿ ಆರಿಸಲು ಹೋದಾಗ ಇಂತಹ ಪ್ರಕರಣಗಳು ನಡೆದಿದ್ದು, ಇದುವರೆಗೆ ಅನೇಕ ಸಂಘ ಸಂಸ್ಥೆಗಳಿಂದ ಹೋರಾಟ ಮಾಡಿದರೂ ಸಹ ಸರ್ಕಾರದಿಂದ ನ್ಯಾಯ ದೊರಕಿರುವುದಿಲ್ಲ ಎಂದರು. ಈ ಪ್ರಕರಣವಾದರು ಅತೀ ಗಂಭೀರವಾಗಿ ಪರಿಗಣಿಸಿ ನ್ಯಾಯ ಒದಗಿಸಿ ಕೊಡಬೇಕೆಂದು ಹಾಗೂ ಈಗಾಗಲೇ ಹಲವಾರು ಸಂಘ ಸಂಸ್ಥೆಗಳಿಂದ ಅನೇಕ ಹೋರಾಟಗಳ ಮುಖಾಂತರ ಮನವಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ, ಎಸ್.ಪಿ. ಅಧಿಕಾರಿಗಳಿಗೆ, ಮತ್ತು ಸೈದಾಪುರ ಪೊಲೀಸ್ ಠಾಣೆಗೆ ಮತ್ತು ಸಮಾಜ ಕಲ್ಯಾಣ ಇಲಾಖೆಗೂ ಮನವಿ ಪತ್ರವನ್ನು ಸಲ್ಲಿಸಲಾಗಿರುತ್ತದೆ. ಇದುವರೆಗೂ ಅಂದರೆ 15-20 ದಿನಗಳು ಕಳೆದರು ಅತ್ಯಾಚಾರ ವ್ಯೆಸಗಿರುವವರ ವಿರುದ್ಧ ಯಾವುದೇ ಸುಳಿವು ನೀಡದೆ ಮತ್ತು ಪತ್ತೆ ಹಚ್ಚದೆ ಇರುವುದು ವಿಪರ್ಯಾಸದ ಸಂಗತಿಯಾಗಿ ಆದ್ದರಿಂದ ಈ ಕೃತ್ಯ ನಡೆಸಿದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸ ಬೇಕೆಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಕಿನ್ನೂರಿ ಶೇಖಪ್ಪ.ಜೆ ರಮೇಶ, ಸಿದ್ದು.ಬೆಳಗಲ್, ಸಣ್ಣ ಮಾರೆಪ್ಪ ಪಕ್ಕೀರಪ್ಪ ಬಾದಿಗ, ರಾಜಕುಮಾರ, ಸೋಮಶೇಖರ್ ಬಣ್ಣದ ಮನೆ, ಸೂರ್ಯನಾರಾಯಣ, ಜೆ ಶಿವಕುಮಾರ್, ಮತ್ತು ಸೋನು. ಇತರರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಾಲತೇಶ್.ಶೆಟ್ಟರ್.ಹೊಸಪೇಟೆ