ಕೊಳೆತು ನಾರುತ್ತಿರುವ ಚರಂಡಿಯ ಬಗ್ಗೆ ದಿವ್ಯ ನಿರ್ಲಕ್ಷ್ಯ – ತೋರುತ್ತಿರುವ ಅಧಿಕಾರಿಗಳು.
ಉಜ್ಜಿನಿ ಮಾ.02

ಕೊಟ್ಟೂರು ತಾಲೂಕಿನ ಪಂಚಾಯಿತಿ ವ್ಯಾಪ್ತಿಗಳಲ್ಲಿ ಪ್ರತಿ ಗ್ರಾಮ ಅಭಿವೃದ್ಧಿ ಯಾದರೆ ದೇಶ ಅಭಿವೃದ್ಧಿ ಎಂದು ಹೇಳುತ್ತಾರೆ ಆದರೆ ಇಲ್ಲಿ ಅದಕ್ಕೆ ತದ್ವಿರುದ್ಧವಾಗಿ ನಾಗರಿಕತೆಯಿಂದ ಅನಾಗರಿಕತೆ ಜೀವನ ನಡೆಸುವ ಪರಿಸ್ಥಿತಿ ಉಜ್ಜಿನಿ ಗ್ರಾಮ ಪಂಚಾಯಿತಿಗೆ ಸೇರಿದ ಬೈರದೇವರಗುಡ್ಡ ಗ್ರಾಮದಲ್ಲಿ ಕೂಡ್ಲಿಗಿ ಶಾಸಕರ ಅನುದಾನದಲ್ಲಿ ಚರಂಡಿ ಅವೈಜ್ಞಾನಿಕವಾಗಿ ನಿರ್ಮಾಣ ವಾಗಿದೆಯಂತೆ ಇಲ್ಲಿನ ಚರಂಡಿ ನೀರಿನ ಕೊಳೆತು ನಾರುತ್ತಿದ್ದು.
ಇದರಿಂದ ಉತ್ಪತ್ತಿಯಾದ ಸೊಳ್ಳೆಗಳಿಂದ ಸಾರ್ವಜನಿಕರು ಬಲಿ ಯಾಗುತ್ತಿದ್ದಾರೆ. ಹೌದು ಇಲ್ಲಿ ಕೆಲವೇ ದಿನಗಳಿಂದ ಗೀತಾ 22 ವರ್ಷ ಮತ್ತು ರಾಘು 16 ವರ್ಷದ ಬಾಲಕ ಮಲೇರಿಯಾ ಮತ್ತು ಡೆಂಗೀ ಜ್ವರದಿಂದ ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನಮ್ಮ ಗೋಳು ಕೇಳುವವರು ಯಾರು ಇಲ್ಲ. ಈ ಚರಂಡಿಯನ್ನು ಸರಿಯಾಗಿ ಮಾಡಿ ಅಂತ ಹೇಳಿದರೆ ನಾವು ಚರಂಡಿ ಮಾಡಲು ಬಂದಿದ್ದೇವೆ ಮಳೆ ನೀರು ಹೋಗಲು ಮಾಡಲು ಬಂದಿಲ್ಲ ಎಂದು ಮನ ಬಂದಂತೆ ಬುರುಡೆ ಬಿಡುತ್ತಾರೆ.
ಆದರೆ ಈ ಊರಿನಲ್ಲಿ ಅಧಿಕಾರಿಗಳಾಗಲಿ ಜನ ನಾಯಕರಾಗಲಿ ಸಾರ್ವಜನಿಕರಾಗಲಿ ಇತ್ತ ಕಡೆ ಗಮನ ಹರಿಸಿ ಕೆಲಸ ಮಾಡುತ್ತಿಲ್ಲ ಇದಕ್ಕೆ ಮಾನ್ಯ ಶಾಸಕರಾದ ಎನ್.ಟಿ ಶ್ರೀನಿವಾಸ್ ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರ ಇವರು ಈ ಊರಿನ ಬಗ್ಗೆ ಆರೋಗ್ಯ ಮತ್ತು ಅಭಿವೃದ್ಧಿಯ ದೃಷ್ಟಿಯಿಂದ ಕಾಳಜಿ ವಹಿಸಬೇಕೆಂದು ಪನ್ನಪ್ಪ ಚೌಡಮ್ಮ ಹನುಮಂತಪ್ಪ ಅಂಜಿನಪ್ಪ ಹಾಲಮ್ಮ ರುದ್ರಮ್ಮ ಮತ್ತಿತರರು ಮನವಿ ಮಾಡಿ ಕೊಂಡರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರದೀಪ್.ಕುಮಾರ್.ಸಿ.ಕೊಟ್ಟೂರು