ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಹ್ವಾನ – ಪತ್ರಿಕೆ ಬಿಡುಗಡೆ.
ತರೀಕೆರೆ, ಮಾ .02





ಸಾಹಿತ್ಯ ಸಮ್ಮೇಳನದ ಸಿದ್ಧತೆಗಳು ಬರದಿಂದ ನಡೆಯುತ್ತಿದೆ ಎಂದು ಶಾಸಕ ಜಿ.ಎಚ್ ಶ್ರೀನಿವಾಸ್ ಹೇಳಿದರು ಅವರು ಶನಿವಾರ ಪಟ್ಟಣದ ಶಾಸಕರ ಕಚೇರಿಯಲ್ಲಿ ಏರ್ಪಡಿಸಿದ್ದ ಪರಿಷತ್ತಿನ ಕಾರ್ಯಕ್ರಮದಲ್ಲಿ ಜಿಲ್ಲಾ ಸಾಹಿತ್ಯ ಸಮ್ಮೇಳನದ ಆಹ್ವಾನ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದರು. ಪರಿಷತ್ತಿನ ಎಲ್ಲಾ ಕಾರ್ಯಕರ್ತರು ಪ್ರಾಮಾಣಿಕವಾಗಿ ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದು ಹೇಳಿದರು. ಕ.ಸಾ.ಪ ಜಿಲ್ಲಾ ಅಧ್ಯಕ್ಷರಾದ ಸೂರಿ ಶ್ರೀನಿವಾಸ್ ಮಾತನಾಡಿ ಜನಪದ ಕೋಗಿಲೆ ಕೆ.ಆರ್ ಲಿಂಗಪ್ಪ ಮಹಾ ಮಂಟಪ, ಎಚ್.ಚಂದ್ರಪ್ಪ, ತ.ಪು ವೆಂಕಟರಾಂ ದ್ವಾರಗಳು ಮತ್ತು ಎಂ.ಕೆ ಇಂದಿರಾ ವೇದಿಕೆ ನಿರ್ಮಾಣ ಮತ್ತು ರಾಷ್ಟ್ರ ಧ್ವಜವನ್ನು ಡಾ, ಕೆ.ಜೆ ಕಾಂತರಾಜ್ ನೆರವೇರಿಸುವರು. ನಾಡ ಧ್ವಜ ತಾಲೂಕು ಕ.ಸಾ.ಪ ಅಧ್ಯಕ್ಷರಾದ ರವಿ.ದಳವಾಯಿ, ಧ್ವಜ ನಿರ್ವಹಣೆ ವೇದಮೂರ್ತಿ, ಮಲ್ಲೇಶಪ್ಪ,ಸುರೇಶ್, ಹಾಗೂ ಸಮ್ಮೇಳನದ ಮೆರವಣಿಗೆ ಪುರಸಭಾ ಅಧ್ಯಕ್ಷರಾದ ವಸಂತ್ ಕುಮಾರ್ ನೆರವೇರಿಸುವರು.
ಸಮಾರಂಭ ಉದ್ಘಾಟನೆ ಕ.ಸಾ.ಪ ರಾಜ್ಯ ಅಧ್ಯಕ್ಷರಾದ ನಾಡೋಜ ಡಾ, ಮಹೇಶ್ ಜೋಷಿ, ಸ್ಮರಣ ಸಂಚಿಕೆಯನ್ನು ಸಂಸದರಾದ ಕೋಟ ಶ್ರೀನಿವಾಸ್ ಪೂಜಾರಿ, ರಾಜ್ಯಸಭೆ ಮಾಜಿ ಸಂಸದರಾದ ಡಾ, ಎಲ್.ಹನುಮಂತಯ್ಯ ಆಶಯ ನುಡಿಗಳನ್ನಾಡುವರು. ಉಪ ವಿಭಾಗ ಅಧಿಕಾರಿ ಡಾ, ಕೆ.ಜೆ ಕಾಂತರಾಜ್ ಪುಸ್ತಕಗಳನ್ನು ಲೋಕಾರ್ಪಣೆ ಮಾಡುವರು. ಸಮ್ಮೇಳನ ಅಧ್ಯಕ್ಷರ ಭಾಷಣ ಪ್ರತಿ ಮಾಜಿ ಶಾಸಕರಾದ ಡಿ.ಎಸ್ ಸುರೇಶ್ ಬಿಡುಗಡೆ ಮಾಡುವರು. ಹಾಗೂ ಸಾಧಕರಿಗೆ ಸಾಹಿತ್ಯ ಸಿರಿ ಪ್ರಶಸ್ತಿ,ಸಂಘಟನಾ ಚತುರ ಪ್ರಶಸ್ತಿ, ಹಾಗೂ ಕನ್ನಡ ಸಿರಿ ಪ್ರಶಸ್ತಿಗಳನ್ನು ನೀಡಲಾಗುವುದು ಎಂದು ಹೇಳಿದರು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಉಪವಿಧಿಕಾರಿ ಡಾ, ಕೆ.ಜೆ ಕಾಂತರಾಜ್ ಎಲ್ಲರಿಗೂ ಶುಭ ಕೋರಿದರು. ಈ ಕಾರ್ಯಕ್ರಮದಲ್ಲಿ ಬಿ.ಎಸ್ ಭಗವಾನ್, ಮಿಲ್ಟ್ರಿ ಶ್ರೀನಿವಾಸ್, ಶಿವಣ್ಣ,ರವಿ ದಳವಾಯಿ, ಹಾ.ಮ ದೇವಾನಂದ, ಸುನಿತಾ ಕಿರಣ್, ಇಮ್ರಾನ್, ನವೀನ್ ಪೆನ್ನಯ್ಯ, ಸಿ.ಡಿ.ಪಿ.ಓ ಚರಣ್ ರಾಜ್, ಈ.ಓ ದೇವೇಂದ್ರಪ್ಪ, ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು