ಹಂದಿಗನೂರನಲ್ಲಿ ವಿವಿಧ ಕಾಮಗಾರಿ ಭೂಮಿ ಪೂಜೆ – ಅಶೋಕ ಮನಗೂಳಿ.
ಹಂದಿಗನೂರು ಮಾ.02

ನಮ್ಮ ಕಾಂಗ್ರೆಸ್ ಸರ್ಕಾರ ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಿದ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿದ್ದೇವೆ ನುಡಿದಂತ ನಡೆದ ನಮ್ಮ ಕಾಂಗ್ರೆಸ್ ಸರ್ಕಾರ, ಗ್ಯಾರಂಟಿ ಗಳಿಂದ ಅಭಿವೃದ್ಧಿ ಆಗುತ್ತಿಲ್ಲ ಎಂದು ವಿರೋಧ ಪಕ್ಷದ ಅವರು ಹೇಳುತ್ತಾರೆ, ಅಭಿವೃದ್ಧಿ ಹಾಗೂ ಗ್ಯಾರಂಟಿ ಎರಡು ನಡೆಯುತ್ತವೆ, ಎಂದು ಸಿಂದಗಿ ಮತ ಕ್ಷೇತ್ರದ ಶಾಸಕರಾದ ಅಶೋಕ ಮನಗೂಳಿ ಯವರು ಹೇಳಿದರು.

ಸಿಂದಗಿ ತಾಲ್ಲೂಕಿನ ಹಂದಿಗನೂರ ಗ್ರಾಮದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವಿಜಯಪುರ, ಅನುಷ್ಠಾನ ಜೆ.ಆರ್.ಐ.ಡಿ.ಎಲ್ ಸಿಂದಗಿ, ಗ್ರಾಮದ ಶಿವ ಸಂಗಪ್ಪ ದೇವಸ್ಥಾನದ ಹತ್ತಿರ ಸಮುದಾಯದ ಭವನ ನಿರ್ಮಾಣಕ್ಕೆ ೧೦ ಲಕ್ಷ ರೂಪಾಯಿ, ಅಮ್ಮೋಗಿ ಸಿದೇಶ್ವರ ದೇವಸ್ಥಾನ ಹತ್ತಿರ ಸಮುದಾಯ ಭವನಕ್ಕೆ ೧೫ ಲಕ್ಷ ಮೊತ್ತದ, ೨೦೨೩/೨೪ ನೇ. ಸಾಲಿನ ಮುಖ್ಯ ಮಂತ್ರಿ ವಿಶೇಷ ಅನುದಾನದಲ್ಲಿ ಶಾಸಕರು, ಭೂಮಿ ಪೂಜೆ ಮಾಡಿದರು.

ಹಾಗೂ ೨೦೨೩/೨೪ ನೇ. ಸಾಲಿನ ಸಣ್ಣ ನೀರಾವರಿ ಇಲಾಖೆಯ ವತಿಯಿಂದ ಹಂದಿಗನೂರ ಗ್ರಾಮದ ಕೆರೆ ಅಭಿವೃದ್ಧಿಗೆ ಮಂಜೂರಾದ ೫೦ ಲಕ್ಷ ಮೊತ್ತದ ಕಾಮಗಾರಿಯ ಭೂಮಿ ಪೂಜೆ ಮಾಡಿದರು.

ಈ ಸಂದರ್ಭಗಳಲ್ಲಿ ಇಲಾಖೆಯ ಅಧಿಕಾರಿಗಳಾದ ಚವ್ಹಾಣ, ಶ್ರೀಶೈಲ ಚೌದ್ರರಿ, ಹಾಗೂ ಜೆ.ಆರ್.ಐ.ಡಿ.ಎಲ್ ಇಲಾಖೆಯ ಅಧಿಕಾರಿಗಳಾದ ರಾಜಶೇಖರ, ಹಾಗೂ ಸಿಬ್ಬಂದಿಗಳು, ಹಾಗೂ ಗ್ರಾಮ ಪಂಚಾಯತಿ ಅಧ್ಯಕ್ಷರು ಪ್ರತಿ ನಿಧಿಯಾದ ಈರಗಂಟೆಪ್ಪ ಬಿರಾದಾರ,ಕನ್ನೊಳ್ಳಿ ಜಿಲ್ಲಾ ಪಂಚಾಯತಿಯ ಪ್ರಬಲ ಆಕಾಂಕ್ಷೆ ಯಾದ ಚೇತನಗೌಡ ಬಿರಾದಾರ, ಆಲಮೇಲ ತಾಲೂಕಿನ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷರಾದ ಅಶೋಕ ಕೋಳಾರಿ, ಹಾಗೂ ಕಾಂಗ್ರೆಸ್ ಮುಖಂಡರಾದ ಸೋಮು ಬಿರಾದಾರ, ಅಪ್ಪಸಾಹೇಬಗೌಡ ಬಿರಾದಾರ, ಭಿಮಪ್ಪ,ಹಾಗೂ ಗ್ರಾಮ ಪಂಚಾಯತಿ ಸದಸ್ಯರು, ಮತ್ತು ಗ್ರಾಮದ ಸಾರ್ವಜನಿಕರು ಈ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪಹಚ್ಯಾಳ.ದೇವರ ಹಿಪ್ಪರಗಿ