ನಿರಾಶ್ರಿತರ ಕೇಂದ್ರದ 155 ನಿರ್ಗತಿಕರಿಗೆ ಉಚಿತ ಕ್ಷೌರ ಸೇವೆ ಸಲ್ಲಿಸಿದ – ಮಲ್ಲಿಕಾರ್ಜುನ.ಬಿ & ಹಡಪದ.ಸುಗೂರ ಎನ್.
ಚಿತ್ತಾಪೂರ ಅ.01





ಮಲ್ಲಿಕಾರ್ಜುನ.ಬಿ & ಹಡಪದ.ಸುಗೂರ ಎನ್ ಕಲಬುರಗಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿಗಳು ಅವರ ಸಮ್ಮುಖದಲ್ಲಿ ಸತತವಾಗಿ ಆರು ವರ್ಷಗಳಿಂದ ಕರ್ನಾಟಕ ಚೇತನ ನಾಡಶ್ರೀ ರತ್ನ ನಾಲವಾರದ ಪರಮ ಪೂಜ್ಯ ಶ್ರೀ ಷ.ಬ್ರ ಡಾ, ಸಿದ್ದ ತೋಟೇಂದ್ರ ಶಿವಾಚಾರ್ಯ ಮಹಾಸ್ವಾಮಿಗಳ 61 ನೇ. ವರ್ಷದ ಹುಟ್ಟು ಹಬ್ಬದ ನಿಮಿತ್ತವಾಗಿ ಕಲಬುರಗಿ ಜಿಲ್ಲೆಯ ಬಿದ್ದಾಪೂರ ಕಾಲೋನಿಯ ನಿರಾಶ್ರಿತರ (ನಿರ್ಗತಿಕರ) ಕೇಂದ್ರದಲ್ಲಿರುವ 155 ಕ್ಕೂ ಹೆಚ್ಚು ನಿರಾಶ್ರಿತರಿಗೆ ಉಚಿತ ಕ್ಷೌರ ಸೇವೆ ಸಲ್ಲಿಸಲಾಯಿತು. ಒಟ್ಟು ಇಲ್ಲಿಯ ವರೆಗೆ 15 ಕಡೆಯಲ್ಲೂ ಒಟ್ಟು 1650 ಕ್ಕೂ ಹೆಚ್ಚು ಅನಾಥರಿಗೆ ಅಂಧರಿಗೆ. ನಿರ್ಗತಿಕರಿಗೆ, ಬುದ್ದಿ ಮಾಧ್ಯಂರಗೆ, ಅಂಗವಿಕಲರಿಗೆ. ವಿಕಲ ಚೇತನರಿಗೆ. ಸಾಧು-ಸಂತರಿಗೆ. ಪೌರ ಕಾರ್ಮಿಕರಿಗೆ.

ಕಟ್ಟಡ ಕಾರ್ಮಿಕರಿಗೆ, ಅನಾಥ ಮಕ್ಕಳಿಗೆ. ಹಿರಿಯ ವೃದ್ದರಿಗೆ ಹೀಗೆ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಬಡವರ, ನಿರ್ಗತಿಕರ, ರೋಗಿಗಳ, ಅನಾಥರ, ವೃದ್ಧರಿಗೆ ಇಡೀ ತಮ್ಮ ಜೀವನದುದ್ದಕ್ಕೂ ಸೇವೆಯನ್ನು ಸಲ್ಲಿಸಿ. ಅವರಲ್ಲಿಯೇ ದೇವರನ್ನು ಕಂಡು, ಸಾರ್ಥಕತೆಯನ್ನು ಕಂಡ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ನಿಸ್ವಾರ್ಥಿ ಸಮಾಜ ಸೇವಕ ಮಲ್ಲಿಕಾರ್ಜುನ.ಬಿ ಹಡಪದ ಸುಗೂರ ಎನ್ ಅವರು ಕಂಡಿದ್ದಾರೆ ಮತ್ತು ಈ ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಕ್ಷೌರಿಕ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ ಸಮಾಜದ ಸಂಘಟನೆ ಜೊತೆಗೆ ಈ ರೀತಿಯ ವಿಭಿನ್ನ ಸೇವೆ ಮಾಡುವುದರ ಮೂಲಕ ಸಮಾಜಕ್ಕೆ ಮತ್ತು ಸಾವಿರಾರು ಅನಾಥರಿಗೆ ಉಚಿತವಾಗಿ ಕ್ಷೌರ ಸೇವೆ.

ಸಲ್ಲಿಸಿದ ಸಲುವಾಗಿ ಮಲ್ಲಿಕಾರ್ಜುನ.ಬಿ & ಹಡಪದ.ಸುಗೂರ ಎನ್ ಅವರಿಗೆ ಅನೇಕ ಸಂಘ ಸಂಸ್ಥೆಗಳು ರಾಜ್ಯ ಮಟ್ಟದ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ 35 ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿವೆ. ಎಂದು ಶ್ರೀ ಬಾಲ ಬ್ರಹ್ಮಚಾರಿ ರಾಜ ಶಿವಯೋಗಿ ಮಹಾಸ್ವಾಮಿಗಳು ಶಹಾಬಾದ ಪೂಜ್ಯರು ಉಚಿತ ಕ್ಷೌರ ಸೇವೆಗೆ ಚಾಲನೆ ನೀಡುವ ಮೂಲಕ ಪೂಜ್ಯರು ಮಾತನಾಡಿದರು. ಈ ಸಂಧರ್ಭದಲ್ಲಿ ಸಮಾಜದ ಹಿರಿಯರು ಜಿಲ್ಲಾ ಗೌರವಾಧ್ಯಕ್ಷರು ಬಸವರಾಜ ಹಡಪದ ಸುಗೂರ ಎನ್, ಹಾಗೂ ರಾಜ್ಯ ಹಡಪದ ಅಪ್ಪಣ್ಣ ಸಮಾಜದ ಮಾಜಿ ಸಂಘಟನಾ ಕಾರ್ಯದರ್ಶಿ ಬಸವರಾಜ ಹಳ್ಳಿ ಶಹಾಬಾದ, ಹಾಗೂ ಜಿಲ್ಲಾ ಕಾರ್ಯಾಧ್ಯಕ್ಷರು ಭಗವಂತ ಸಹ ಶಿಕ್ಷಕರು ಹೊನ್ನಕಿರಣಗಿ, ಮತ್ತು ಇಂದಿನ ಸಮಾಜದಲ್ಲಿ ಹಿರಿಯರನ್ನು ಗೌರವಿಸುವುದು ಕಡಿಮೆಯಾಗಿದೆ.

ಇಳಿವಯಸ್ಸಿನಲ್ಲಿ ಹಿರಿಯರನ್ನು ಕುಟುಂಬ ಸದಸ್ಯರು ಮುತುವರ್ಜಿ ಯಿಂದ ಆರೈಕೆ ಮಾಡಬೇಕಿದೆ. ಉತ್ತಮ ಆಹಾರ, ಶುಚಿತ್ವ ಹಾಗೂ ಆರೋಗ್ಯದ ಬಗ್ಗೆ ನಾವೆಲ್ಲರೂ ಕಾಳಜಿ ವಹಿಸುವುದು ಅಗತ್ಯವಾಗಿದೆ. ಉತ್ತಮ ಸಮಾಜಕ್ಕಾಗಿ ಉತ್ತಮ ನಾಗರಿಕರಾಗಿ ಅಜ್ಜ ಅಜ್ಜಿಯರ ಸೇವೆ ಮಾಡಲು ಯುವಕರು ಮುಂದಾಗಬೇಕು ಆಗ ಯಾರೂ ಸಹ ಈ ರೀತಿಯ ನಿರ್ಗತಿಕರ ಕೇಂದ್ರಕ್ಕೆ ಅನಾಥ ಆಶ್ರಮಕ್ಕೆ ಬರುವ ಸಾಧ್ಯತೆ ಇರುವುದಿಲ್ಲ ಎಂದು ಕಲಬುರಗಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ್ ಹಡಪದ ನೀಲೂರ ತಿಳಿಸಿದರು.

ಜಿಲ್ಲಾ ಉಪಾಧ್ಯಕ್ಷರು ರುದ್ರಮಣಿ ಅಪ್ಪಣ್ಣ ಬಟಗೇರಾ, ನಿರಾಶ್ರಿತರ ಕೇಂದ್ರದ ಸೊಪರಡೆಂಟ್ ಪ್ರಕಾಶ ಪವ್ಹಾರ. ಮತ್ತು ವಿರೇಶ ಸರ ಕಲಬುರಗಿ. ಹಾಗೂ ಸಮಾಜದ ಹಿರಿಯ ಮುಖಂಡರು ನಾಗಣ್ಣಾ ಹಡಪದ ಮುತ್ತಕೋಡ್ ಶಹಾಬಾದ, ಶಂಭುಲಿಂಗ ಹಡಪದ ನಗರ ಘಟಕ ಕಾರ್ಯದರ್ಶಿ ಕಲಬುರಗಿ ತಾಲೂಕಾಧ್ಯಕ್ಷ ಚಂದ್ರಶೇಖರ ಹಡಪದ ತೊನಸನಹಳ್ಳಿ.ತಾಲೂಕು ಕಾರ್ಯದರ್ಶಿ ವಿನೋದ ಹಡಪದ ಅಂಬಲಗಾ, ಮಲ್ಲಿಕಾರ್ಜುನ ಬೆಳಗುಪ್ಪಾ. ಅರುಣ ಹಡಪದ ಗೊಬ್ಬೂರ ಬಿ,ಮಹಾದೇವ ಹಡಪದ ವಡಗೇರಿ ರಾವೂರ, ಮಲ್ಲಿಕಾರ್ಜುನ ಹಡಪದ ಮದರಗಾಂವ್ ವಾಡಿ, ರಮೇಶ್ ಕರಾರಿ, ಅಂಕುಶ ಹಡಪದ ಶಿರಡೂಣ. ಈ ಕಾಯಕ ಬಂಧುಗಳು ಈ ಉಚಿತ ಕ್ಷೌರ ಸೇವೆಯಲ್ಲಿ ಭಾಗವಹಿಸಿ ಸೇವೆ ಸಲ್ಲಿಸಿದರು ಎಂದು ಕಲಬುರಗಿ ಜಿಲ್ಲೆಯ ಹಡಪದ ಅಪ್ಪಣ್ಣ ಸಮಾಜದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿ ಹಡಪದ ಸುಗೂರ ಎನ್ ಅವರು ಎಲ್ಲರಿಗೂ ಹೃತ್ಪೋರ್ವಕ ಅನಂತ ಧನ್ಯವಾದಗಳು ತಿಳಿಸಿದರು ಎಂದು ವರದಿಯಾಗಿದೆ.