ಮಾನ್ವಿಯಲ್ಲಿ ಛತ್ರಪತಿ ಶಿವಾಜಿ – ಜಯಂತಿ ಆಚರಣೆ.
ಮಾನ್ವಿ ಮಾ.04

ಮಾನ್ವಿ ಪಟ್ಟಣದಲ್ಲಿ ಛತ್ರಪತಿ ಶಿವಾಜಿ ಜಯಂತಿಯನ್ನು ಅದ್ಧೂರಿ ಮೆರವಣಿಗೆಯ ಮೂಲಕ ವಿಜೃಂಭಣೆಯಿಂದ ಆಚರಿಸಲಾಯಿತು.

ರಾಯಚೂರು ಜಿಲ್ಲೆಯ ಮಾನ್ವಿ ಪಟ್ಟಣದ ಎಪಿಎಂಸಿ ವೃತ್ತದಿಂದ ಟಿಎಪಿಸಿಎಂಎಸ್ ಆವರಣದವರೆಗೂ ಡಿಜೆ ಹಾಡಿಗೆ ಯುವಕರು ಕುಣಿದು ಕುಪ್ಪಳಿಸಿದರು.

ವಿಚಾರವಾದಿ ಶ್ರೀಕಾಂತ ಹೊಸಕೆರೆ ಮಾತನಾಡಿ ಛತ್ರಪತಿ ಶಿವಾಜಿ ಅವರು ಚಿಕ್ಕವರಾಗಿದ್ದಾಗ ಕ್ರಾಂತಿಕಾರಿ ಯಾಗಿದ್ದರು. ಪ್ರಸ್ತುತ ದಿನಗಳಲ್ಲಿ ಇಂದಿನ ಯುವಕರು ಛತ್ರಪತಿ ಶಿವಾಜಿಯ ವಿಚಾರ ಧಾರೆಗಳನ್ನು ಮೈಗೂಡಿಸಿ ಕೊಳ್ಳಬೇಕು ಎಂದರು.
ಛತ್ರಪತಿ ಶಿವಾಜಿ ಅವರು ತಮ್ಮ ಕಾಲಘಟ್ಟದಲ್ಲಿ ಅಸಮಾನತೆಯ ಬಗ್ಗೆ ತಮ್ಮ ತಾಯಿಯ ಹತ್ತಿರ ಹೇಳುತ್ತಿದ್ದರು. ಹೀಗಾಗಿ ಯುವಕರು ಪ್ರತಿಭಟಿಸುವ ವಿಚಾರ ಅಳವಡಿಸಿ ಕೊಳ್ಳಬೇಕು ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ