ನಿವೃತ್ತ ನ್ಯಾಯಮೂರ್ತಿ ನಾಗ್ ಮೋಹನ್ ದಾಸ್ ಏಕಸದಸ್ಯ ಕಮೀಟಿಗೆ – ಮಾದಿಗ ಮಹಾ ಸಭಾದಿಂದ ಮನವಿ ಪತ್ರ ಸಲ್ಲಿಕೆ.
ಕುಷ್ಟಗಿ ಮಾ.04

ತಾಲೂಕಿನ ಮಾದಿಗ ಸಮುದಾಯದ ಹಿರಿಯ ಹೋರಾಟಗಾರರು ಮುಖಂಡರು ಮತ್ತು ಸಂಘಟನೆಯ ಕಾರ್ಯಕರ್ತರಲ್ಲಿ ದಿನಾಂಕ 27/01/2025 ರಂದು ನಮ್ಮ ತಾಲೂಕಿನ ಸಮುದಾಯದ ಅಧ್ಯಕ್ಷರಾದ ಶ್ರೀ ನಾಗರಾಜ ಮೇಲಿನಮನಿ ಉಪಾಧ್ಯಕ್ಷರಾದ ಕೃಷ್ಣಮೂರ್ತಿ ಅವರ ಟೆಂಗುಂಟಿ ಹಾಗೂ ಹಿರಿಯ ಹೋರಾಟಗಾರರು ಗೌರವಾಧ್ಯಕ್ಷರಾದ ಶ್ರೀ ಸುಖರಾಜ ತಾಳಕೇರಿ ಹಾಗೂ ವಸಂತಪ್ಪ ಮೇಲಿನಮನಿ ಪ್ರಧಾನ ಕಾರ್ಯ ದರ್ಶಿಗಳಾದ ಹುಸೇನಪ್ಪ ಮುದೇನೂರು, ಶ್ರೀ ಬಸವರಾಜ ಬೇವಿನಕಟ್ಟಿ, ಹನುಮಂತಪ್ಪ ಇಂಡಿ, ಚಿದಾನಂದ ಇಂಡಿ, ಚಂದ್ರಶೇಖರ ಹಿರೇಮನಿ ಹಾಗೂ ಮಂಜುನಾಥ ಕಟ್ಟಿಮನಿ ಈ ಮುಂತಾದವರುಗಳ ಸಮುದಾಯದ ತುಡಿತ ಇರುವಂತರ ಸೂಕ್ತ ಸಲಹೆ ಮೇರೆಗೆ, ನಾನು ಶಿವಕುಮಾರ ದೊಡ್ಡಮನಿ ಮತ್ತು ಕಿರಿಯ ವಕೀಲರಾದ ಸುರೇಶ್ ಜೊತೆಗೂಡಿ ಸರ್ಕಾರ ರಚಿಸಿರುವ ಒಳ ಮೀಸಲಾತಿ ಜಾರಿಗಾಗಿ ನಿವೃತ್ತ ನ್ಯಾಯಮೂರ್ತಿ ನಾಗ ಮೋಹನ ದಾಸ್ ಏಕಸದಸ್ಯ ಕಮೀಟಿಗೆ ಇಂದು ದಿನಾಂಕ 27/01/2025 ರಂದು ಕುಷ್ಟಗಿ ತಾಲೂಕಿನ ಮಾದಿಗ ಸಮುದಾಯದ ವತಿಯಿಂದ ಒಳ ಮೀಸಲಾತಿ ಜಾರಿಗೆ ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸುತ್ತಾ ರಾಜ್ಯದ ರಾಜಕೀಯ ವ್ಯವಸ್ಥೆಯಲ್ಲಿ ಸಿಕ್ಕ ಒಳ ಮೀಸಲಾತಿಯ ಪರಿಸ್ಥಿತಿ ಹೇಗಿದೆ ಅಂದ್ರೆ ಉಧೋ ಉಧೋ ಉಧೋ ಬಿಜೆಪಿ, ಉಧೋ ಉಧೋ ಉಧೋ ಕಾಂಗ್ರೆಸ್ ಅನ್ನೋ ಪರಿಸ್ಥಿತಿ ಬಂದೋಗಿದ್ದು ಸುಳ್ಳಲ್ಲ ವಾಸ್ತವ ಸ್ಥಿತಿಗತಿಯ ಬಗ್ಗೆ ಅರ್ಥೈಸಿ ಕೊಳ್ಳುವಲ್ಲಿ ಮುಂಚೂಣಿ ನಾಯಕರ ಕೊರತೆ ಎದ್ದು ಕಾಣುವಂತಾಗಿದೆ. ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ನವರು ಒಳ ಮೀಸಲಾತಿಯ ವಿಚಾರವಾಗಿ ಇಚ್ಚಾಶಕ್ತಿ ಕೊರತೆ ಇದೆ. ಅವರು ಒಳ ಮೀಸಲಾತಿ ವಿಚಾರವಾಗಿ ಟಾಯಿಮ್ ಸ್ಪೆಂಡ್ ಮಾಡ್ತಾರ ವಿನಃ ಅವರು ಒಳ ಮೀಸಲಾತಿ ಮಾಡುವ ವಿಷಯ ಬಂದಾಗ ಅಲ್ಲೇನ್ರೀ ಏಕಸದಸ್ಯ ಕಮೀಟಿ ಮಾಡಿದ್ದೇನೆ ವರದಿ ಬರಲಿ ಮಾಡ್ತೀನಿ ಅಂತಾ ಹೇಳುತ್ತಾ ಮುಂದೂಡುತ್ತಾರೆ. ಆದರೆ ಅವರಿಗೆ ಸರ್ಕಾರ ಮಟ್ಟದಲ್ಲಿ ಹಿಡಿತ ಇಲ್ಲದ್ದರಿಂದ ನ್ಯಾಯಮೂರ್ತಿ ನಾಗ್ ಮೋಹನ್ ದಾಸ್ ಏಕಸದಸ್ಯ ಪೀಠಕ್ಕೆ ಸರಾಗವಾದ ಮಾಹಿತಿ ಇಲ್ಲದಂತಾಗಿದೆ. ಮತ್ತ ಇನ್ನೇನು ಸಾಕ್ಷೀ ಬೇಕು ಅದಕ್ಕಾಗಿ ಸಮಾಜದ ಪ್ರಜ್ಞಾವಂತ ನಾಯಕರೇ ಸಮಾಜದ ಏಳ್ಗೆಗಾಗಿ, ಸಮಾಜದ ಯುವ ಪೀಳಿಗೆಗಾಗಿ, ಸಮಾಜದ ಬದ್ಧತೆಯಿಂದ, ಪ್ರಜ್ಞಾವಂತ ನಾಯಕರೇ ಸುಮ್ಮ ಕೂಂತರೆ ಸುಲಿಗೆ ತಪ್ಪದು ಧಂಗೆ ಎದ್ದರೆ ಜಯ ನಮ್ಮದು ಅನ್ನೋ ಮಂತ್ರ ಜಪಿಸಿದಾಗ ಮಾತ್ರ ಅದರ ಜೊತೆಗೆ ಚಲನ ಶೀಲತೆಯ ವೇಗ ಹೆಚ್ಚಿಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸುವರೆಗೂ ಯಾರು ವಿರಮಸ ಬಾರದು ಜೈ ಮಾದಿಗ ಜೈಜೈಜೈ ಮಾದಿಗ.