ಸರ್ಕಾರದ ಸೌಲಭ್ಯಗಳು ನಿಜವಾದ ಬಡ ವರ್ಗದವರಿಗೆ ತಲುಪಬೇಕೆಂದ ಶಾಸಕರು.
ಮೊಳಕಾಲ್ಮುರು ಫೆಬ್ರುವರಿ.1

ಇಂದು ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮ ಪಂಚಾಯತ್ ಆವರಣದಲ್ಲಿ ದೇವಸಮುದ್ರ ಹೋಬಳಿ ಮಟ್ಟದ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನ ಸಮಾವೇಶ ಕಾರ್ಯಕ್ರಮದಲ್ಲಿ ನಮ್ಮ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಎನ್ ವೈ ಗೋಪಾಲಕೃಷ್ಣರವರು ಪಾಲ್ಗೊಂಡರು. ಮತ್ತು ಜನಸಾಮಾನ್ಯರು ಬಡವರು ಅವಿದ್ಯಾವಂತರು ನಮ್ಮ ಕಾಂಗ್ರೆಸ್ ಪಕ್ಷದ 5 ಗ್ಯಾರೆಂಟಿಗಳನ್ನು ಸದುಪಯೋಗ ಪಡೆದು ಕೊಳ್ಳಿ ಎಂದು ಶಾಸಕರ ಮಾತು ಮತ್ತು ಸರ್ಕಾರದ ಸೌಲಭ್ಯಗಳು ಸಹ ನಿಜವಾದ ಬಡ ಕುಟುಂಬಗಳಿಗೆ ಮಾತ್ರ ತಲುಪಬೇಕು.

ಎಸ್.ಸಿ /ಎಸ್.ಟಿ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರು ಶೋಷಿತ ವರ್ಗದವರು ಸರ್ಕಾರದ ಸೌಲತ್ತುಗಳು ಸಿಗಬೇಕೆಂದು ಮಾನ್ಯ ಶಾಸಕರ ಒಂದು ನಿರ್ಧಾರವಾಗಿರುತ್ತದೆ ಈ ಸಂದರ್ಭದಲ್ಲಿತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಯೋಜನೆಯ ಫಲಾನುಭವಿಗಳು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಮುಖಂಡರು ಮೊದಲಾದವರು ಉಪಸ್ಥಿತರಿದ್ದರು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು:ತಿಪ್ಪೇಸ್ವಾಮಿ.ಹೊಂಬಾಳೆ.ಮೊಳಕಾಲ್ಮುರು