ಡಾ, ನಾಗರಾಜ್ ಗೌರಿಬಿದನೂರು ಸಂಯೋಜಕರು ರಾಷ್ಟ್ರೀಯ ಸಾಕ್ಷರತಾ ಮಿಷನ್ ಇವರಿಂದ – ಶಾಲಾ ಮಕ್ಕಳಿಗೆ ಬ್ಯಾಗ್ ಗಳನ್ನ ವಿತರಿಸಿದರು.
ಕಲಕೇರಿ ಮಾ.05

ವಿಜಯಪುರ ಜಿಲ್ಲೆಯ ಕಲಕೇರಿ ಗ್ರಾಮದಲ್ಲಿ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯ ಮೂರು ಶಾಲೆಯ ಆವರಣದಲ್ಲಿ ಡಾ, ನಾಗರಾಜ್ ಗೌರಿಬಿದನೂರ ಸಂಯೋಜಕರು ರಾಷ್ಟ್ರೀಯ ಸಾಕ್ಷರತಾ ಮಷೀನ್ ಭಾರತ ಸರ್ಕಾರ ಇವರ ಯೋಜನೆ ಅಡಿಯಲ್ಲಿ ಕಲಕೇರಿ ಗ್ರಾಮದಲ್ಲಿ ಇರುವ ಎಲ್ಲಾ ಸರ್ಕಾರಿ ಶಾಲೆಯ ಮಕ್ಕಳಿಗೆ ಉಚಿತ ಶಾಲೆಯ ಬ್ಯಾಗ್ ಗಳನ್ನು ವಿತರಣಾ ಕಾರ್ಯಕ್ರಮ ಬಾಗ್ಯವಂತ ಮೋಪಗಾರ ಹಾಗೂ ಬಲವಂತರ ಮೋಪಗಾರ ಇವರ ನೇತೃತ್ವದಲ್ಲಿ ನಡೆಯುವುದು ಕಾರ್ಯಕ್ರಮದಲ್ಲಿ. ದೇವರ ಹಿಪ್ಪರಗಿ ಮತ ಕ್ಷೇತ್ರದ ಸನ್ಮಾನ್ಯ ಶಾಸಕರು ರಾಜು ಗೌಡ ಪಾಟೀಲ್ ಇವರ ಸೋದರರಾದಂತ ಸಚಿನ್ ಗೌಡ ಪಾಟೀಲ್ ಇವರಿಂದ ಕಾರ್ಯಕ್ರಮ ನೆರವೇರಿತು. ಸಿದ್ದು ಬುಳ್ಳ ವೇದಿಕೆಯನ್ನು ಉದ್ದೇಶಿಸಿ ಮಾತನಾಡಿದರು ವಿದ್ಯಾರ್ಥಿಗಳಿಗೆ ಸರಕಾರ ದಿಂದ ಬರುವಂತಹ ಯೋಜನೆಗಳು ಗ್ರಾಮದ ಭಾಗ್ಯವಂತ ಮೋಪಗಾರ ಹಾಗೂ ಬಲವಂತರಾಯ ಮೊಪಗಾರ್ ಇವರು ದಿಲ್ಲಿವರೆಗೂ ಹೋಗಿ ಶಾಲೆಗಳಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಶಾಲೆ ಬ್ಯಾಗಗಳನ್ನು ವಿತರಣಾ ಮಾಡಿದರು ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಕಲಕೇರಿ ಗ್ರಾಮದ ಭೂದಾನಿಗಳಾದ ಡಾ, ವ್ಹಿ.ಕೆ ಜಾಲಹಳ್ಳಿ ಇವರು ಪ್ರತಿಯೊಬ್ಬರು ಗ್ರಾಮದ ಇಂಥ ಯುವಕರು ಸರ್ಕಾರಿ ಶಾಲೆಗಳಿಗೆ ಉಚಿತ ಬ್ಯಾಗಗಳನ್ನು ವಿತರಣಾ ಮಾಡಿ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ ಇವರಿಗೆ ನಾವೆಲ್ಲರೂ ಬೆಂಬಲಿಸಬೇಕು ಎಂದು ತಿಳಿಸಿದರು.

ಎಸ್.ಎಲ್ ನಾಯ್ಕೋಡಿ. ಬಿ.ಆರ್.ಸಿ ಹಣಮಂತ್ ವಡ್ಡರ್. ಗ್ರಾಮ ಪಂಚಾಯತಿ ಅಧ್ಯಕ್ಷರು ರಾಜ ಅಹ್ಮದ್ ಸಿರಸಗಿ. ಗ್ರಾಮ ಪಂಚಾಯತಿ ಉಪಾಧ್ಯಕ್ಷರು ವಿಜಯಲಕ್ಷ್ಮಿ ಪರಶುರಾಮ್ ಬೇಡರ್. ಚಂದ್ರಕಾಂತ್ ಬಡಿಗೇರ್ ಎಸ್.ಡಿ.ಎಂ.ಸಿ ಅಧ್ಯಕ್ಷರು. ಮಲ್ಲು ನಾವಿ. ಪ್ರವೀಣ್ ಜಗ ಶೆಟ್ಟಿ. ಊರಿನ ಹಿರಿಯರಾದ ಗಂಗಮ್ಮ ಮೋಪಗಾರ. ಇರಗಂಟೆಪ್ಪ ಮೋಪಗಾರ. ಚಂದ್ರುಚಂದ್ರು ಉಪ್ಪಾರ್ ಸಿಂದಗಿ ತಾಲೂಕ ಅಧ್ಯಕ್ಷರು. ಪರಶುರಾಮ್ ಉಪ್ಪಾರ್ ಸಿಂದಗಿ ನಗರ ಘಟಕ ಅಧ್ಯಕ್ಷರು. ಎಲ್ಲಾ ಭಗೀರಥ ಸಮಾಜದ ಮುಖಂಡರು ಹಾಗೂ ಊರಿನ ಮುಖಂಡರು ಗ್ರಾಮಸ್ಥರು ಮತ್ತು ಎಲ್ಲಾ ಶಾಲೆಯ ಮುಖ್ಯ ಗುರುಗಳು ಗುರು ಮಾತೆಯವರು ಎಲ್ಲಾ ಮೂರು ಶಾಲೆಯ ವಿದ್ಯಾರ್ಥಿಗಳು ಸೇರಿದಂತೆ ಈ ಕಾರ್ಯಕ್ರಮ ಅದ್ದೂರಿಯಿಂದ ನಡೆಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ