ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟದ ಎಮ್.ಆರ್.ಎಚ್.ಎಸ್ ವೇದಿಕೆಯಲ್ಲಿ – ಕುಸಿದು ಬಿದ್ದ ರಾಜ್ಯಾಧ್ಯಕ್ಷ ಬಿ.ನರಸಪ್ಪ.

ಬೆಂಗಳೂರು ಮಾ.05

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ವರ್ಗೀಕರಣದ ಅಂತಿಮ ಘಟ್ಟದ ಹೋರಾಟದ ವೇದಿಕೆಯಲ್ಲಿ ಕುಸಿದು ಬಿದ್ದು ಅಸ್ವಸ್ಥರಾದ MRHS ರಾಜ್ಯಾಧ್ಯಕ್ಷ ಶ್ರೀ ಬಿ.ನರಸಪ್ಪ ದಂಡೋರ ಹೋರಾಟಗಾರರ ಜೀವಕ್ಕೆ ಬೆಲೆಯೇ ಇಲ್ಲವೇ…? ಯಾರು ಹೊಣೆ ಸಾಮಾಜಿಕ ನ್ಯಾಯ ಮತ್ತು ಒಳ ಮೀಸಲಾತಿ ವಿರೋಧಿ ಯಾಗಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಮಾದಿಗ ದಂಡೋರ MRHS ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷರಾದ ಪದ್ಮ ಶ್ರೀ ಮಂದ ಕೃಷ್ಣ ಮಾದಿಗ ಅವರ ಆದೇಶದಂತೆ ಕಳೆದ ಎರಡು ದಿನಗಳಿಂದ ನಡೆಯುತ್ತಿರುವ ಧರಣಿ ಸತ್ಯಾಗ್ರಹದ ನೇತೃತ್ವ ವಹಿಸಿದ್ದ MRHS ರಾಜ್ಯಾಧ್ಯಕ್ಷರಾದ ಶ್ರೀ ಬಿ.ನರಸಪ್ಪ ದಂಡೋರ ಅವರು ಧರಣಿ ಸತ್ಯಾಗ್ರಹದ ಎರಡನೆಯ ದಿನವಾದ ಇಂದು ಒಳ ಮೀಸಲಾತಿ ಜಾರಿಯಲ್ಲಿ ವಿಳಂಬ, ಎಸ್ಸಿ ಬ್ಯಾಕ್ ಲಾಗ್ ಹುದ್ದೆಗಳ ತರಾತುರಿಯ ಭರ್ತಿ ಮತ್ತು SCSP/TSP ಹಣದ ದುರ್ಬಳಕೆಯ ಕುರಿತು ಆವೇಶ ಪೂರಿತ ಭಾಷಣದ ನಂತರ ಹಠಾತ್ ಅಸ್ವಸ್ಥರಾಗಿ ಕುಸಿದು ಬಿದ್ದ ಘಟನೆ ಧರಣಿಯ ವೇದಿಕೆಯಲ್ಲಿ ನಡೆಯಿತು. ನೆರೆದ ಮುಖಂಡರೆಲ್ಲ ತಲ್ಲಣಿಸಿ ಅವರನ್ನು ಮಲಗಿಸು ವಷ್ಟರಲ್ಲಿ, ಸ್ಥಳದಲ್ಲಿದ್ದ ಪೊಲೀಸರು ಕರೆಸಿದ್ದ ವೈದ್ಯರು ಅವರನ್ನು ತಪಾಸಣೆ ಮಾಡಿ ಉಪವಾಸದ ಕಾರಣ ರಕ್ತ ದೊತ್ತಡದಲ್ಲಿ ಸಮಸ್ಯೆಯಾಗಿದೆ ಎಂದು ಅವರನ್ನು ತಕ್ಷಣ ಆಂಬುಲೆನ್ಸ್ ಮೂಲಕ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದರು. ಸುಧೀರ್ಘ ಮುವ್ವತ್ತು ವರ್ಷಗಳ ಒಳ ಮೀಸಲಾತಿ ಹೋರಾಟದಲ್ಲಿ ಎಷ್ಟೋ ಜನ ತಮ್ಮ ಜೀವವನ್ನೇ ಅರ್ಪಿಸಿ ಹುತಾತ್ಮ ರಾಗಿದ್ದಾರೆ. ಅಸಂಖ್ಯಾತ ಹೋರಾಟಗಾರರು ತ್ಯಾಗ ಬಲಿದಾನದ ಮೂಲಕ ಹೋರಾಟವನ್ನು ಜೀವಂತ ವಾಗಿರಿಸಿ ಕೊಂಡು ಬಂದಿದ್ದಾರೆ. ಜೀವವನ್ನೇ ಪಣವಾಗಿಟ್ಟು ಹೋರಾಟ ಮಾಡುತ್ತಿರುವ ಕೆಚ್ಚೆದೆಯಿಂದ ಧೀಮಂತ ಹೋರಾಟಗಾರ ಮಾದಿಗ ದಂಡೋರ MRHS ರಾಜ್ಯಾಧ್ಯಕ್ಷರಾದ ಶ್ರೀ ಬಿ.ನರಸಪ್ಪ ದಂಡೋರ ಅವರು ಅಗ್ರ ಗಣ್ಯರು. ಅಂತಹ ನಾಯಕರ ಕೈಯನ್ನು ಬಲ ಪಡಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಆದೇಶ ಬೃಹತ್ ಬೆನ್ನಿಗೆ ಆಶಾದಾಯಕರ ಮತ್ತು ಪದ್ಮ ಶ್ರೀ ಮಂದ ಕೃಷ್ಣ ಮಾದಿಗ ಅವರ ಕನಸನ್ನು ನನಸು ಮಾಡುವ ನಿಟ್ಟಿನಲ್ಲಿ ಒಳ ಮೀಸಲಾತಿ ಹೋರಾಟದ ಅಂತಿಮ ಘಟ್ಟದ ಈ ಹೋರಾಟಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಹೋರಾಟದ ತುಡಿತವಿರುವ ಪ್ರತಿಯೊಬ್ಬ ಯುವಕರು, ಮುಖಂಡರು, ಹೋರಾಟಗಾರರು ಪಕ್ಷಾತೀತವಾಗಿ ಬೆಂಗಳೂರಿನ ಫ್ರೀಡಂ ಪಾರ್ಕ್ ಧರಣಿ ವೇದಿಕೆಗೆ ಆಗಮಿಸಿ ನಿಮ್ಮ ಬೆಂಬಲ ಸೂಚಿಸಿ. ನಿಮ್ಮನ್ನು ಯಾರು ಕರೆಯ ಬೇಕಾಗಿಲ್ಲ ಇದು ಯಾರ ಪ್ರತಿಷ್ಠೆಯ ಅಥವಾ ವೈಯಕ್ತಿಕ ಹೋರಾಟವಲ್ಲ ಇದು ಸಮುದಾಯದ ಮುಂದಿನ ಯುವ ಪೀಳಿಗೆಗಳ ಭವಿಷ್ಯಕ್ಕಾಗಿ ನಡೆಯುತ್ತೀರುವ ಹೋರಾಟಕ್ಕೆ ಬನ್ನಿ ಒಗ್ಗಟ್ಟಿನಿಂದ ಭಾಗವಹಿಸೋಣ ನಮ್ಮ ಹಕ್ಕುಗಳಿಗಾಗಿ ಹೋರಾಡೋಣ ಎಂದು ಕರೆ ಕೊಟ್ಟ ನಾಯಕರು.

ರಾಜ್ಯ ಮಟ್ಟದ ವಿಶೇಷ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಯಮನಪ್ಪ.ಸಿ.ಹಲಗಿ.ಶಿರೂರು. ಬಾಗಲಕೋಟೆ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button