ಗ್ರಾ.ಪಂ ಅಧ್ಯಕ್ಷೆಯಾಗಿ ಕಳಕವ್ವ ಜೊಳ್ಳಿ – ಅವಿರೋಧ ಆಯ್ಕೆ.
ರಾಜೂರ ಮಾ.06

ಗಜೇಂದ್ರಗಡ ಸಮೀಪದ ರಾಜೂರ ಗ್ರಾಮ ಪಂಚಾಯಿತಿ ಅಧ್ಯಕ್ಷೆಯಾಗಿ ಕಳಕವ್ವ ಯಮನೂರಪ್ಪ ಜೊಳ್ಳಿ ಅವರನ್ನು ಮಂಗಳವಾರ ಅವಿರೋಧ ಆಯ್ಕೆ ಮಾಡಲಾಯಿತು. ಗ್ರಾಮ ಪಂಚಾಯಿತಿಯು ಒಟ್ಟು 21 ಸದಸ್ಯರನ್ನು ಹೊಂದಿದ್ದು, ರಾಜೀನಾಮೆ ಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕಳಕವ್ವ ಯಮನೂರಪ್ಪ ಜೊಳ್ಳಿ ಎಲ್ಲ ಸದಸ್ಯರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಯಿತು. ತಾಲ್ಲೂಕು ಪಂಚಾಯಿತಿ ಸಿಬ್ಬಂದಿ ಸಿ.ಬಿ ಮಾಳಗಿ ಚುನಾವಣಾ ಅಧಿಕಾರಿಗಳಾಗಿ ಕಾರ್ಯ ನಿರ್ವಹಿಸಿದರು. ನಿರ್ಮಲಾ ಸೊಲಬಗೌಡ್ರ ಬೆಂಬಲಿಗರು ಹೂಮಾಲೆ ಹಾಕಿ, ಅಭಿನಂದಿಸಿದರು. ನೂತನ ಅಧ್ಯಕ್ಷೆ ಕಳಕವ್ವ ಜೊಳ್ಳಿ ಮಾತನಾಡಿ, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಗ್ರಾಮಗಳಲ್ಲಿ ಮೂಲ ಸೌಲಭ್ಯ ಕಲ್ಪಿಸಲು ಹಾಗೂ ಅಭಿವೃದ್ಧಿ ಕಾರ್ಯಗಳನ್ನು ಪ್ರಾಮಾಣಿಕ ಎಂದರು. ಅನುಷ್ಠಾನ ಗೊಳಿಸಲು ಪ್ರಯತ್ನ ಮಾಡುತ್ತೇನೆ. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶರಣಪ್ಪ ಸಜ್ಜನರ, ಸದಸ್ಯರಾದ ಮುತ್ತಣ್ಣ ತಳವಾರ, ಪರಸಪ್ಪ ರಾಠೋಡ, ಬಸವರಾಜ ಆಡಿನ, ಚಂದ್ರಗೌಡ ಪಾಟೀಲ, ಶಾರದಾ ಜಾಧವ, ನಿಂಗವ್ವ ಶಂಕ್ತಿ, ದಾನವ್ವ ರಾಠೋಡ, ಬಿಬಿಜಾನ ಗಡಾದ, ಜನ್ನತ್‌ಬಿ ನಧಾಪ್, ಲಲಿತವ್ವ ರಾಠೋಡ, ಲಕ್ಷ್ಮವ್ವ ಹೊಸಳ್ಳಿ, ಕಾವೇರಿ ಚಿಲಝರಿ, ಸಿದ್ದಮ್ಮ ಕುರುಬನಾಳ, ಶೇಖಪ್ಪ ಮಳಗಿ, ಶಿವಕುಮಾರ ಜಾಠೋತ್ತರ, ಸುರೇಶ ಪಮ್ಮಾರ, ಚನ್ನಬಸವ ಅಬ್ಬಿಗೇರಿ, ಲಲಿತವ್ವ ತಳವಾರ, ಬಸವರಾಜ ಕಟ್ಟಿಮನಿ, ಮುಖಂಡರಾದ ಸುರೇಶಗೌಡ ಪಾಟೀಲ, ಅಮರೇಶ ನೂಲ್ವಿ, ಶೇಖಪ್ಪ ರಾಠೋಡ, ಶಿವಕುಮಾರ ಜಾಧವ, ರಾಜು ನಧಾಫ್, ಅಲ್ಲಸಾಬ ಮುಜಾವರ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಎಸ್.ವಿ ಸಂಕನಗೌಡ್ರ.ರೋಣ.ಗದಗ