ಸರ್ಕಾರದ ಎಲ್ಲಾ ಅಧಿಕಾರಿಗಳು ರೈತರಿಗೆ ಕಾಳಜಿಯನ್ನ ತೋರಿಸ ಬೇಕು – ಶಿವಲಿಂಗಪ್ಪ ಬೋಪಳಾಪುರ.
ರೋಣ ಮಾ.08

ನಗರದ ಪ್ರವಾಸಿ ಮಂದಿರದಲ್ಲಿ ಕಳೆದ ದಿನ ರೋಣ ತಾಲೂಕಿನ ರೈತ ಸೇನೆಯ ಸಂಘದ ಮುಖಂಡರೆಲ್ಲರೂ ಬಹು ಮುಖ್ಯವಾದ ಸಭೆಯನ್ನು ಆಯೋಜಿಸಿದರು. ಈ ಸಭೆಯಲ್ಲಿ ಪ್ರಮುಖವಾಗಿ ರೋಣ ತಾಲೂಕು ರೈತ ಸೇನೆ ಸಂಘದ ಉಪಾಧ್ಯಕ್ಷರಾದ ಶಿವಲಿಂಗಪ್ಪ ಬೋಪಾಳಾಪುರ ಸಭೆಯನ್ನು ಉದ್ದೇಶಿಸಿ ರೈತ ಸೇನೆ ಸಂಘದ ಪ್ರಮುಖ ಬೇಡಿಕೆಗಳನ್ನು ಈಡೇರಿಸ ಬೇಕೆಂದು ಸರ್ಕಾರಕ್ಕೆ ಒತ್ತಾಯಿಸಿದರು. ಕನಿಷ್ಠ ಬೆಂಬಲ ಬೆಲೆಯನ್ನು ಜಾರಿಗೆ ತರಬೇಕು ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ತಮ್ಮ ಸಂಬಳವನ್ನು ಹೆಚ್ಚಿಸಿ ಕೊಳ್ಳುತ್ತಿದ್ದಾರೆ ಹೊರತು ರೈತರಿ ಗೋಸ್ಕರ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನು ಜಾರಿಗೆ ತರ ಬೇಕಾದದ್ದು ರಾಜ್ಯವು ಕೇಂದ್ರ ಸರ್ಕಾರದ ಆದ್ಯ ಕರ್ತವ್ಯವಾಗಿದೆ ರಾಜ್ಯ ಹಾಗೂ ಕೇಂದ್ರ ಸರಕಾರದ ಎಲ್ಲಾ ಅಧಿಕಾರಿಗಳು ರೈತರಿಗೆ ಕಾಳಜಿಯನ್ನ ತೋರಿಸ ಬೇಕೆಂಬುದು ನಮ್ಮ ನಿಲುವಾಗಿದೆ ರೈತರ ಉತ್ಪನ್ನಗಳನ್ನು ನೇರವಾಗಿ ಸರ್ಕಾರವು ಖರೀದಿಸ ಬೇಕು ಏಕೆಂದರೆ ಖಾಸಗೀಕರಣ ದಿಂದಾಗಿ ಅವರು ಬೆಳೆದ ಬೆಳೆಗೆ ನಿಗದಿತ ಬೆಲೆ ಸಿಗದೇ ಕಡಿಮೆ ಬೆಲೆಗೆ ಮಾರಾಟ ಮಾಡುವಂತಾಗಿದೆ ಹಾಗೂ ರೈತರಿಗೆ ಅನ್ಯಾಯವಾಗುತ್ತಿದೆ ಆದ್ದರಿಂದ ಅನ್ಯಾಯವನ್ನು ತಪ್ಪಿಸಲು ರೈತರಿಗೆ ಕೃಷಿ ಪರಿಷತ್ತು ರಚನೆ ಯಾಗಬೇಕು ಏಕೆಂದರೆ ರೈತನು ದೇಶದ ಬೆನ್ನೆಲುಬು ಆದ್ದರಿಂದ ಆ ರೈತನ ಆರ್ಥಿಕ ಪರಿಸ್ಥಿತಿಯ ಸುಧಾರಣೆಗಾಗಿ ಒಂದು ಕೃಷಿ ಪರಿಷತ್ತನ್ನ ರಚಿಸ ಬೇಕೆಂದು ನಮ್ಮ ಮನವಿ ಯಾಗಿದೆ. ಅದೇ ರೀತಿಯಾಗಿ ಬಹಳ ದಿನದಿಂದ ನೆನೆಗುದಿಗೆ ಬಿದ್ದಿರುವ ಮಹದಾಯಿ ನದಿ ಯೋಜನೆಯನ್ನು ಬೇಗನೆ ಜಾರಿಗೆ ತರಬೇಕು ಆ ವಿಷಯದ ಕಡೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಮನ ವಹಿಸ ಬೇಕೆಂಬುದು ನಮ್ಮ ರೈತ ಸೇನೆ ಸಂಘದ ಮನವಿಯಾಗಿದೆ ಎಂದು ಮಾತನಾಡಿದರು. ಈ ಸಂದರ್ಭದಲ್ಲಿ ರೋಣ ತಾಲೂಕು ಕರ್ನಾಟಕ ರೈತ ಸೇನೆಯ ಸದಸ್ಯರಾದ ಶೇರ್ ಸಾಬ್ ಪಿಂಜರ್, ರಮೇಶ್ ಚಲವಾದಿ, ಆನಂದ್ ಮಲ್ಲಾಪುರ್, ಮಲ್ಲಪ್ಪ ಚಳಗೇರಿ ಇತರರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ