ಎರಡು ಶಾಲೆಗಳ 2024/25 ನೇ. ಸಾಲಿನ ಸ್ನೇಹ ಸಮ್ಮೇಳನ ಹಾಗೂ ಏಳನೇ ತರಗತಿ ವಿದ್ಯಾರ್ಥಿಗಳ – ಬಿಳ್ಕೊಡುವ ಸಮಾರಂಭ ಜರುಗಿತು.
ಕಲಕೇರಿ ಮಾ.08

ಕೆ.ಬಿ.ಎಮ್.ಪಿ.ಎಸ್ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಕಲಕೇರಿ ಹಾಗೂ ಕೆ.ಜಿ.ಎಸ್ ಸರ್ಕಾರಿ ಹೆಣ್ಣು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಕಲಕೇರಿ ಎರಡು ಶಾಲೆಗಳು. 2024/2025 ನೇ. ಸಾಲಿನ ಸ್ನೇಹ ಸಮ್ಮೇಳನ ಹಾಗೂ ಏಳನೇ ತರಗತಿ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭ. ಅದ್ದೂರಿಯಿಂದ ಕಾರ್ಯಕ್ರಮ ನಡೆಯಿತು. ದಿವ್ಯ ಸಾನಿಧ್ಯ. ಡಾ, ವ್ಹಿ.ಕೆ ಜಲಹಳ್ಳಿಮಠ ಭೂದಾನಿಗಳಾದ ಮಕ್ಕಳ ಭವಿಷ್ಯ ಮೇಲೆತ್ತರಕ್ಕೆ ಬೆಳದಿದೆ ಸರಕಾರಿ ಶಾಲೆಯ ಶಿಕ್ಷಕರು ತಮ್ಮ ಮಕ್ಕಳಕ್ಕಿಂತ ಹೆಚ್ಚು ವಿದ್ಯಾರ್ಥಿಗಳನ್ನು ಬಾಳ ಚೆನ್ನಾಗಿ ವಿದ್ಯಾಭ್ಯಾಸಗಳನ್ನು ಮಾಡ್ತಿದ್ದಾರೆ ಎಂದು ತಿಳಿಸಿದರು.

ಕಲಕೇರಿಯ ಪೊಲೀಸ್ ಠಾಣೆಯ ಪಿ.ಎಸ್.ಐ.ಸುರೇಶ್ ಮಂಟೂರ್ ಇವರು ನಾನು ಕೂಡ ಸರಕಾರಿ ಕನ್ನಡ ಶಾಲೆಯಲ್ಲಿ ಓದಿ ಅಭ್ಯಾಸವನ್ನು ಮಾಡಿ ಈ ಸರಕಾರಿ ನೌಕರಿ ಮಾಡ್ತಾ ಇದೀನಿ ಎಲ್ಲಾ ವಿದ್ಯಾರ್ಥಿಗಳು ಗುರುಗಳು ಹೇಳಿದ ಯಾವುದೇ ವಿಷಯ ಇರಲಿ ಆ ವಿಷಯಗಳನ್ನು ಸರಿಯಾಗಿ ಬರೆದು ನಾವು ಇವರಂತೆ ಸರಕಾರಿ ಹುದ್ದೆಯಲ್ಲಿ ಮುಂದುವರಿಯ ಬೇಕು ಎಂಬುದನ್ನು ವಿದ್ಯಾರ್ಥಿಗಳಲ್ಲಿ ಛಲ ಇರಬೇಕು ಮೊದಲಿನ ಕಾಲದಲ್ಲಿ ಶಿಕ್ಷಕರು ಮಕ್ಕಳನ್ನ ಹೊಡೆದರೆ ಏನು ಅಂತಾ ಇದ್ದೀಲ್ಲಾ ಆದರೆ ಈಗಿನ ಕಾಲದಲ್ಲಿ ಮಕ್ಕಳಿಗೆ ಹೊಡೆಯುವುದು ಅಲ್ಲಾ ಬಾಯಿಂದ ಹೇಳಿ ವಿದ್ಯಾಭ್ಯಾಸ ಮಾಡಿಸುವಂತ ಪರಿಸ್ಥಿತಿ ಬಂದಿದೆ ಯಾವುದೇ ವಿದ್ಯಾರ್ಥಿಗಳಿಗೆ ಶಿಕ್ಷಕರು ಒಂದು ಏಟು ಹೊಡೆದರೆ ಪಾಲಕರ ಬಂಧು ಕೇಳುತ್ತಾರೆ ನಮ್ಮ ಮಕ್ಕಳಿಗೆ ಯಾಕೆ ನೀನು ಹೊಡೆದೆ ಎಂದು ಕೇಳುವ ಪರಿಸ್ಥಿತಿ ಇದೆ ಆದರೆ ಪಾಲಕರು ನಿಮ್ಮ ಮಕ್ಕಳನ್ನ ಸರ್ಕಾರಿ ಶಾಲೆಯಲ್ಲಿ ಓದಿಸಿ ವಿದ್ಯಾವಂತರಾಗಿ ಆ ಮಕ್ಕಳು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಈ ಶಾಲೆಯ ಎಸ್.ಎಲ್ ನಾಯ್ಕೋಡಿ. ಸಿ.ಆರ್.ಪಿ ಈ ಸಂದರ್ಭದಲ್ಲಿ ನಾನು ಬಂದ ವೇಳೆಯಲ್ಲಿ ಈ ಶಾಲೆಯಲ್ಲಿ ವಿದ್ಯಾಭ್ಯಾಸದ ಮಕ್ಕಳು ಗಮನ ಹರಿಸುತ್ತಿರಲಿಲ್ಲಾ ಈಗ ಈ ಸರ್ಕಾರಿ ಶಾಲೆಯಲ್ಲಿ ಇದ್ದಂತ ಎಲ್ಲಾ ಶಿಕ್ಷಕರು ಮಕ್ಕಳನ್ನು ತಮ್ಮ ಸ್ವಂತ ಮಕ್ಕಳಂತೆ ಜೋಪಾನ ಮಾಡಿ ಅವರಿಗೆ ವಿದ್ಯಾಭ್ಯಾಸದಲ್ಲಿ ಮಕ್ಕಳನ್ನ ಅಭ್ಯಾಸ ಮಾಡಿಸುವುದರಲ್ಲಿ ಮುಂದಾಗಿದ್ದಾರೆ ಇನ್ನೂ ಒಂದು ವಿಷಯ ಏನಪ್ಪಾ ಅಂದ್ರೆ ಎರಡು ತಿಂಗಳ ಹಿಂದೆ ಮಕ್ಕಳನ್ನ ಯಾವ ರೀತಿ ನಾವು ಮಕ್ಕಳನ್ನ ಕಲಿಸಬೇಕು ಮಕ್ಕಳಿಗೆ ಒಂದು ಉನ್ನತ ಮಟ್ಟಕ್ಕೆ ಬೆಳೆಸಬೇಕು ಎಂದು ಎಲ್ಲಾ ಶಿಕ್ಷಕರು ಮಕ್ಕಳಿಗೆ ಬಹಳ ಚೆನ್ನಾಗಿ ವಿದ್ಯಾಭ್ಯಾಸಗಳನ್ನು ಹೇಳುತ್ತಿದ್ದಾರೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಕಲಕೇರಿ ಗ್ರಾಮದ ಹಣಮಂತ್ ವಡ್ಡರ್ ಶ್ರೀ ಭವಾನಿ ಕಂಪುಟರ್ ತರಬೇತಿ ಅಧ್ಯಕ್ಷರು ಈಗಿನ ಕಾಲದಲ್ಲಿ ಕಂಪ್ಯೂಟರ್ ಯುಗ ಇದೆ ಆದ್ದರಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ಬೇಕು ನನ್ನತ್ರ ಒಂದು ನೂರು ಮಕ್ಕಳು ಕಂಪ್ಯೂಟರ್ ತರಬೇತಿಯಲ್ಲಿ ಇದ್ದಾರೆ ಅವರಿಗೆ ತಿಂಗಳಿಗೆ 400 ರೂಗಳನ್ನು ಪಡೆಯುತಾ ಇದೀನಿ ಸರಕಾರಿ ಕನ್ನಡ ಶಾಲೆಯ ವಿದ್ಯಾರ್ಥಿಗಳಿಗೆ ತಿಂಗಳಿಗೆ 200 ಎರಡು ನೂರಲ್ಲಿ ಕಂಪ್ಯೂಟರ್ ತರಬೇತಿ ಕಲಿಸುತ್ತೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು. ಈ ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷರು ನಿರ್ಮಲಾ ನಂದಿಮಠ. ಎಮ್.ಪಿ.ಎಸ್ ಹಾಗೂ ಕೆ.ಜಿ.ಎಸ್ ಶಾಲೆಯ ಅಧ್ಯಕ್ಷರಾದ ಆನಂದ್ ಅಡಿಕಿ. ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ರಾಜ ಅಹ್ಮದ್ ಸಿರಿಸಗಿ. ಊರಿನ ಮುಖಂಡರಾದ ಸಂಗಾರೆಡ್ಡಿ ದೇಸಾಯಿ. ಚಂದ್ರಕಾಂತ್ ಬಡಿಗೇರ್ ಎಸ್.ಡಿ.ಎಮ್.ಸಿ ಉಪಾಧ್ಯಕ್ಷರು ಎಮ್.ಪಿ.ಎಸ್ ಶಾಲೆಯ ಶ್ರೀಮತಿ ವಿಜಯಲಕ್ಷ್ಮಿ ಗೂಗಲ್ ಎಸ್.ಡಿ.ಎಮ್.ಸಿ. ಉಪಾಧ್ಯಕ್ಷರು ಕೆ.ಜಿ.ಎಸ್. ಶಾಲೆಯ ಭಾಗ್ಯವಂತ ಮೋಪಗಾರ ಶಿಕ್ಷಣ ಪ್ರೇಮಿ. ಲಾಳೇ ಮಶಾಕ್ ವಲ್ಲಿಭಾವಿ. ಎಸ್.ಡಿ.ಎಮ್.ಸಿ. ಅಧ್ಯಕ್ಷರು ಯು.ಬಿ.ಎಸ್ ನಂಬರ್ 1 ಉರ್ದು ಶಾಲೆಯ ಕಿರಣ್ ಕುಮಾರ್ ದೇಸಾಯಿ. ವಾಯ್.ಆರ್ ಸಿರಸಗಿ ಮುಖ್ಯ ಗುರುಗಳು ಯು.ಬಿ.ಎಸ್. ನಂಬರ್ 1 ಶಾಲೆ. ಸ್ವಾಗತ ಕೋರಿದರು. ಡಿ.ಬಿ ಅಡಿಕಿ ಶಿಕ್ಷಕರು. ಮಲ್ಲು ನಾವಿ. ಶ್ರೀಶೈಲ್ ಅಡಿಕಿ. ದೊಡ್ಡಪ್ಪ ಗೊಮಶೆಟ್ಟಿ. ಎಮ್.ಪಿ.ಎಸ್ ಶಾಲೆಯ ಮುಖ್ಯ ಗುರುಗಳು. ಜೆ.ಬಿ ಕುಲಕರ್ಣಿ, ಕೆ.ಜಿ.ಎಸ್ ಶಾಲೆಯ ಮುಖ್ಯ ಗುರುಗಳು. ಎಸ್.ಬಿ ಪಡಶೆಟ್ಟಿ. ಎಲ್ಲಾ ಶಿಕ್ಷಕರು ಗುರುಮಾತೆ ಅವರು ಎಲ್ಲಾ ವಿದ್ಯಾರ್ಥಿಗಳು ಎಲ್ಲಾ ಪಾಲಕರು ಎಲ್ಲಾ ಎಸ್.ಡಿ.ಎಂ.ಸಿ ಎಲ್ಲಾ ಸದಸ್ಯರು ಊರಿನ ಎಲ್ಲಾ ಹಿರಿಯರು ಸೇರಿದಂತೆ ವಿದ್ಯಾರ್ಥಿಗಳಿಂದ ಅನೇಕ ಕಾರ್ಯಕ್ರಮಗಳನ್ನು ಅದ್ದೂರಿಯಿಂದ ನಡೆಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ