ತರೀಕೆರೆಯಲ್ಲಿ ಚಿಕ್ಕಮಗಳೂರು ಜಿಲ್ಲಾ 20 ನೇ. ಕನ್ನಡ – ಸಾಹಿತ್ಯ ಸಮ್ಮೇಳನ.

ತರೀಕೆರೆ ಮಾ.08

ಡಾ, ಸರೋಜಿನಿ ಮಹಿಷಿ ವರದಿ ಯಥಾವತ್ತಾಗಿ ಅನುಷ್ಠಾನವಾಗ ಬೇಕು ಶ್ರೀಮಂತ ಕನ್ನಡ ಭಾಷೆಗೆ ಶಾಸ್ತ್ರಿಯ ಸ್ಥಾನ ಮಾನವನ್ನು ಕೇಂದ್ರ ಸರ್ಕಾರ ತಾರತಮ್ಯ ಮಾಡದೆ ಜಾರಿಗೆ ತರಬೇಕು ಎಂದು ಕನ್ನಡ ಸಾಹಿತ್ಯ ಸಮ್ಮೇಳನದ ಸಮ್ಮೇಳನ ಅಧ್ಯಕ್ಷರಾದ ಡಾ, ಎಚ್.ಎಂ ಮರುಳು ಸಿದ್ದಯ್ಯ ಪಟೇಲ್ ಹೇಳಿದರು. ಅವರು ತರೀಕೆರೆ ಬಯಲು ರಂಗ ಮಂದಿರದಲ್ಲಿ ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮ್ಮೇಳನ ಅಧ್ಯಕ್ಷೆತೆ ವಹಿಸಿ ಮಾತನಾಡಿದರು. ಕಲಾ ಕ್ಷೇತ್ರದಲ್ಲಿ ಚಿಕ್ಕಮಗಳೂರು ಜಿಲ್ಲೆ ರಾಜ್ಯದಲ್ಲಿಯೇ ವಿಶೇಷ ಸ್ಥಾನ ಹೊಂದಿದೆ, ಅನೇಕ ಜಾನಪದ ಕಲೆಗಳ ಸಂಗಮ ಸ್ಥಾನವಾಗಿದೆ. ಜಾನಪದ ರತ್ನ ಕೆ.ಆರ್ ಲಿಂಗಪ್ಪನವರು ತರೀಕೆರೆಗೆ ಕೀರ್ತಿ ತಂದವರು, 1967 ರಲ್ಲಿ ತರೀಕೆರೆಯಲ್ಲಿ ಜಾನಪದ ಸಾಹಿತ್ಯ ಸಮ್ಮೇಳನ ಮಹಾರಾಜ ಜಯಚಾಮರಾಜೇಂದ್ರ ಒಡೆಯರ್ ರವರು ನೆರವೇರಿಸಿ ಹೊನ್ನ ಬಿತ್ತೇವು ಹೊಲಕ್ಕೆಲ್ಲ ಎಂಬ ಬೃಹತ್ ಗ್ರಂಥ ಜನಪದ ಇತಿಹಾಸ ಬಂಡಾರವೆನಿಸಿದೆ. ಗೋ ರು ಚೆನ್ನಬಸಪ್ಪನವರು ಜಿಲ್ಲೆಯ ತರೀಕೆರೆ ತಾಲೂಕಿನವರು ಎಂಬ ಹೆಮ್ಮೆ ನಮ್ಮದು ಪತ್ರಿಕೋದ್ಯಮದಲ್ಲಿ ಕುರವಂಜಿ ಪತ್ರಿಕೆ ತರೀಕೆರೆಯಲ್ಲಿ ಹುಟ್ಟಿದ್ದು 1932 ರಲ್ಲಿ ಜಿಲ್ಲೆಯ ಮೊದಲ ಮಾಸಪತ್ರಿಕೆಯಾಗಿ ವಿಚಾರ ತರಂಗಿಣಿ, ಹಾಗೂ 1949ರಲ್ಲಿ ಜಿಲ್ಲೆಯಲ್ಲಿ ಮೊದಲ ಗರ್ಜನೆ ಪತ್ರಿಕೆಯನ್ನು 1951 ರಲ್ಲಿ ದಿನ ವಾಣಿ ಪತ್ರಿಕೆಯನ್ನು ಪ್ರಭುದೇವ ರವರು ಸ್ಥಾಪಿಸಿದರು, ಅಜ್ಜಂಪುರದ ಗೀತಾ ಮಿತ್ರ ತರೀಕೆರೆಯ ಅಂಚೆ ವಾರ್ತೆ,ಮೇಘದೂತ, ತರೀಕೆರೆ ವಾಣಿ,ಸ್ನೇಹ ವಾರ್ತೆ, ಸುದ್ದಿ ಅಕ್ಷಯ, ಮುಂತಾದ ಪತ್ರಿಕೆಗಳು ತರೀಕೆರೆ ತಾಲೂಕಿನ ಅಭಿವೃದ್ಧಿಗೆ ಶ್ರಮಿಸಿವೆ, ತರೀಕೆರೆಯ ಪಾಳೇಗಾರರು ಪ್ರಭಾವಶಾಲಿಗಳಾಗಿ ಆಡಳಿತ ನಡೆಸಿದ ನಿರ್ದರ್ಶನಗಳಿವೆ 1830 ರಲ್ಲಿ ತರೀಕೆರೆ ಪಾಳೇಗಾರರ ವಂಶಸ್ಥರಾದ ರಂಗಪ್ಪ ನಾಯಕ ಮತ್ತು ಆತನ ಮಗ ಸರ್ಜ ಹನುಮಪ್ಪ ನಾಯಕ ಬ್ರಿಟಿಷರ ವಿರುದ್ಧ ದಂಗೆ ಎದ್ದರು ಆ ದಂಗೆಯ ನಂತರ ಪ್ರಾಂತ್ಯವು ಮೈಸೂರು ಅರಸರ ಆಡಳಿತಕ್ಕೆ ಸೇರ್ಪಡೆ ಯಾಯಿತು ಹೊಯ್ಸಳರ ಕಾಲದ ಎರಡನೇ ವೀರ ಬಲ್ಲಾಳನ ಸೇನಾನಿ ಯಾಗಿದ್ದ ಅಮೃತೇಶ್ವರ ನಾಯಕರು 1199 ರಲ್ಲಿ ಅಮೃತೇಶ್ವರ ದೇವಾಲಯವನ್ನು ಕಟ್ಟಿಸಿದರು, ಜಿಲ್ಲೆಯಲ್ಲಿ ಅನೇಕ ಪ್ರಕೃತಿ ತಾಣಗಳು, ಶ್ರೇಷ್ಠ ಜೀವ ನದಿಗಳು ಪಶ್ಚಿಮ ಘಟ್ಟಗಳ ಶಿಖರಗಳು ಅನೇಕ ಅಧ್ಯಯನ ಕೇಂದ್ರಗಳು, ಭಕ್ತಿ ಶ್ರದ್ಧೆ ಜಗತ್ಪ್ರಸಿದ್ಧಿ ಹೊಂದಿವೆ ಎಂದು ಹೇಳಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಸೂರಿ ಶ್ರೀನಿವಾಸ್ ಪ್ರಾಸ್ತಾವಿಕವಾಗಿ ಮಾತನಾಡಿ ತರೀಕೆರೆ ಮಲೆನಾಡಿನ ಹೆಬ್ಬಾಗಿಲು ಇಲ್ಲಿ ವೀಳ್ಯದೆಲೆ ಅಡಿಕೆಗೆ ರಾಜ್ಯದಲ್ಲಿಯೇ ಹೆಸರಾಗಿದೆ ಅಂತರಘಟ್ಟಮ್ಮನ ಬಾನ ತರೀಕೆರೆಯಿಂದಲೇ ಪ್ರಾರಂಭವಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಡಾ, ಜೆಪಿ ಕೃಷ್ಣೇಗೌಡ ರವರು ಮಾತನಾಡಿ 1915 ರಲ್ಲಿ ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್, ಸರ್ ಎಂ ವಿಶ್ವೇಶ್ವರಯ್ಯ, ಮಿರ್ಜಾ ಇಸ್ಮೈಲ್ ರವರು ಕನ್ನಡ ಸಾಹಿತ್ಯ ಪರಿಷತ್ತನ್ನು ಸ್ಥಾಪಿಸಿದರು ಎಂದು ಹೇಳಿದರು. ಉಪ ವಿಭಾಗ ಅಧಿಕಾರಿ ಡಾ, ಕೆ.ಜೆ ಕಾಂತರಾಜ್ ಸ್ಮರಣ ಸಂಚಿಕೆ ಬಿಡುಗಡೆ ಮಾಡಿ ಕನ್ನಡವನ್ನು ಕಟ್ಟೋಣ ಬೆಳೆಸೋಣ ಎಂದು ಹೇಳಿದರು. ಡಾ, ಸಿ.ಕೆ ಸುಬ್ಬರಾಯ” ತರೀಕೆರೆ ಏರಿ ಮೇಲೆ ” ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿ ಮಾತನಾಡಿ ಕರುನಾಡಿನಲ್ಲಿ ಎಲ್ಲಾ ಭಾಷೆಯವರಿದ್ದಾರೆ ಆದರೆ ನಮ್ಮ ಭಾಷೆಯನ್ನು ಬೆಳೆಸೋಣ ನಾಡ ನುಡಿ ಬಗ್ಗೆ ಅಭಿಮಾನವನ್ನು ಹೊಂದಬೇಕು ಎಂದು ಹೇಳಿದರು. ಡಾ, ಭರತ್ ಅಂಚೆ ಮಾತನಾಡಿ ತರೀಕೆರೆ ತಾಲೂಕು ಶಿಕ್ಷಣ ಕ್ಷೇತ್ರದಲ್ಲಿ ಮುಂದುವರಿಯ ಬೇಕು ಇಲ್ಲಿ ಕನ್ನಡ ಉದಯವಾಗಿದೆ ಕನ್ನಡ ಸಾಹಿತ್ಯ ಭಾಷೆ ನಡೆ ನುಡಿ ಸಂಸ್ಕೃತಿಯನ್ನು ಉಳಿಸುವ ಸಾಹಿತಿಗಳು ತರೀಕೆರೆ ನೆಲದಲ್ಲಿರುವುದು ಪಟ್ಟಣದ ಹೆಮ್ಮೆಯ ಸಂಗತಿ ಎಂದು ಹೇಳಿದರು. ನಾನು ಹುಟ್ಟಿದ ತರೀಕೆರೆ ಗೆ ನನ್ನ ಸೇವೆ ಉಚಿತ ಆರೋಗ್ಯ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ ಮೂಲಕ ಸೇವೆ ಮಾಡುತ್ತಿದ್ದೇನೆ ಎಂದು ಹೇಳಿದರು. ಪುರಸಭಾ ಅಧ್ಯಕ್ಷರಾದ ವಸಂತ್ ಕುಮಾರ್ ರವರು ಭವ್ಯ ಮೆರವಣಿಗೆಯನ್ನು ಉದ್ಘಾಟನೆ ಮಾಡಿದರು. ಪುರಸಭಾ ಉಪಾಧ್ಯಕ್ಷರಾದ ಗಿರಿಜಾ ಪ್ರಕಾಶ್ ವರ್ಮ ರವರು ಮಾತನಾಡಿ ಕನ್ನಡಿಗರೆಲ್ಲರೂ ಒಟ್ಟಾಗಿ ನಾಡು ನುಡಿಯನ್ನು ಕಟ್ಟೋಣ ಬೆಳೆಸೋಣ ಎಂದು ಹೇಳಿದರು. ಕಾರ್ಯಕ್ರಮ ಸುನೀತಾ ಕಿರಣ್ ಮತ್ತು ತಂಡದವರಿಂದ ಪ್ರಾರ್ಥನೆಯಿಂದ ಪ್ರಾರಂಭವಾಗಿ ಭಗವಾನ್ ರವರು ನಾಡಗೀತೆ ಹಾಡಿ ರೈತ ಗೀತೆಯನ್ನು ಭಕ್ತನಕಟ್ಟೆ ಲೋಕೇಶ್ ರವರು ನೆರವೇರಿಸಿ. ಕಾರ್ಯಕ್ರಮದ ಸ್ವಾಗತವನ್ನು ಎಸ್.ಎಸ್ ವೆಂಕಟೇಶ್, ನಿರೂಪಣೆ ರೂಪ ನಾಯಕ್, ನಿರ್ವಹಣೆ ಶೃಂಗೇರಿ ಸುಬ್ಬಣ್ಣ ಮತ್ತು ವಂದನಾರ್ಪಣೆ ರವಿ ದಳವಾಯಿ ರವರು ನೆರವೇರಿಸಿದರು.

ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button