ಅಂಬೇಡ್ಕರ್ ಜಯಂತಿ ಆದ ನಂತರ ಚುನಾವಣಾ ದಿನಾಂಕ ಘೋಷಿಸಿ – ಶ್ರೀಶೈಲ ಜಾಲವಾದ.
ದೇವರ ಹಿಪ್ಪರಗಿ ಮಾ.08

ಏಪ್ರಿಲ್ 14 ರಂದು ನಡೆಯುವ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಹಾಗಾಗಿ ಏಪ್ರೀಲ್ ನಂತರ ಬರುವ ತಿಂಗಳಲ್ಲಿ ಚುನಾವಣೆ ಘೋಷಿಸಿ ಎಂದು ಶ್ರೀಶೈಲ.ಬ ಜಾಲವಾದಿ ಗೋಲಗೇರಿ ವಿಜಯಪುರ ಜಿಲ್ಲಾ ಕಾರ್ಯಾಧ್ಯಕ್ಷರು ಬಹುಜನ ದಲಿತ ಸಂಘರ್ಷ ಸಮಿತಿ ಜಿಲ್ಲಾ ಶಾಖೆ ವಿಜಯಪುರ ಮಾನ್ಯ ಕರ್ನಾಟಕ ಮುಖ್ಯ ಮಂತ್ರಿಯಾದ ಸಿದ್ದರಾಮಯ್ಯ ಅವರಲ್ಲಿ ಕೋರಿಕೆ ಇದೆ.ಪಂಚಾಯತಿ ಯಿಂದ ಹಿಡಿದು ಪಾರ್ಲಿಮೆಂಟ್ ನವರಿಗೆ ಭವ್ಯ ಭಾರತದ ಭವಿಷ್ಯವನ್ನೇ ಬರೆದಂತಹವರು ಯಾರಾದರೂ ಇದ್ದರೆ ಒಬ್ಬರೇ ಮಹಾನಾಯಕ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತದ ಭಾಗ್ಯ ವಿಧಾತ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುವುದು ಅಂದ್ರೆ ದೇಶದ ಬಗ್ಗೆ ಮಾತನಾಡುವುದು ಅಂತಾ ಅರ್ಥ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅಂದರೆ ದೇಶ. ಹಾಗಾಗಿ ಪ್ರತಿ ವರ್ಷ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯ ಸಮಯದಲ್ಲಿ ಚುನಾವಣೆಗಳು ಘೋಷಣೆ ಯಾಗುತ್ತಿದ್ದು ಸರ್ಕಾರದ ಸುತ್ತೋಲೆ ಬರುವುದರಿಂದ ಚುನಾವಣೆ ನೀತಿ ಸಂಹಿತೆ ಇರುವುದರಿಂದ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ಸರ್ಕಾರ ಜಿಲ್ಲಾಡಳಿತ ಮತ್ತು ತಾಲೂಕಾಡಳಿತ ಅದ್ದೂರಿಯಾಗಿ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲ. ಈ ಬಾರಿ ಡಾ, ಬಾಬಾ ಸಾಹೇಬ್ ಅಂಬೇಡ್ಕರ್ ಬರೆದಂತ ಸಂವಿಧಾನದ ಪೀಠಿಕೆ ಬಗ್ಗೆ ಜನತೆಗೆ ತಿಳಿ ಹೇಳುವುದರ ಮೂಲಕ ಜಾಗೃತಿಯನ್ನು ಮೂಡಿಸಿದ್ದೀರಿ. ತಮಗೆ ಕೋಟಿ ಕೋಟಿ ಭೀಮ ನಮನಗಳು. ಆದರೆ ನೀತಿ ಸಂಹಿತೆಯನ್ನು ಏಪ್ರಿಲ್ ತಿಂಗಳ ನಂತರ ಘೋಷಿಸಿದರೆ ಜಿಲ್ಲಾಡಳಿತ ತಾಲೂಕ ಆಡಳಿತ ಅಧಿಕಾರಿಗಳು ಕಾರ್ಯಕ್ರಮ ಅದ್ದೂರಿಯಾಗಿ ನಡೆಸಲು ಬಹುದೊಡ್ಡ ಯಶಸ್ವಿ ಕಾರ್ಯಕ್ರಮ ಆಗುತ್ತದೆ ಏಕೆಂದರೆ ಈ ಬಾರಿಯೂ ಸರ್ಕಾರ ಜಿಲ್ಲಾ ಪಂಚಾಯಿತಿ ತಾಲೂಕು ಪಂಚಾಯಿತಿಯ ಚುನಾವಣೆ ಘೋಷಣೆ ಮಾಡುವ ಸಾಧ್ಯತೆಗಳು ಕಂಡು ಬರುತ್ತಿದ್ದು. ಡಾಕ್ಟರ್ ಅಂಬೇಡ್ಕರ್ ಅವರ ಜಯಂತಿ ಏಪ್ರಿಲ್ 14 ರಂದು ಈ ತಿಂಗಳು ಮುಗಿಯುವವರೆಗೂ ಜಿಲ್ಲಾ ಪಂಚಾಯತಿ ಮತ್ತು ತಾಲೂಕು ಪಂಚಾಯತಿಯ ಚುನಾವಣೆ ಘೋಷಣೆ ಮಾಡದಂತೆ ಮಾನ್ಯ. ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯ ಕ್ರಮ ಕೈಗೊಳ್ಳಬೇಕೆಂದು ಬಹುಜನ ದಲಿತ ಸಂಘರ್ಷ ಸಮಿತಿ ಆರ್.ಎಮ್.ಎನ್ ರಮೇಶ್ ಬಣದ ವಿಜಯಪುರ ಜಿಲ್ಲಾ ಕಾರ್ಯಾಧ್ಯಕ್ಷರಾದ ಶ್ರೀಶೈಲ ಜಾಲವಾದಿ ಅವರು ಮನವಿ ಮಾಡಿದ್ದಾರೆ. ದೇಶದ ಮುಖ್ಯಮಂತ್ರಿಯಾದ ಸಿದ್ದರಾಮಯ್ಯ ತಾವು ಬುದ್ಧ.ಬಸವ. ಡಾ, ಅಂಬೇಡ್ಕರ್ ಅವರ ಚಿಂತನೆಗಳನ್ನು ಆಳವಾಗಿ ಅಧ್ಯಯನ ಮಾಡಿ ಅವರ ತತ್ವ ಸಿದ್ಧಾಂತಗಳನ್ನು ಸಂಪೂರ್ಣವಾಗಿ ಮೈಗೂಡಿಸಿ ಕೊಂಡು ಕಾಂಗ್ರೆಸ್ ಸರ್ಕಾರವನ್ನು ರಚಿಸಿ ರಾಜ್ಯದ ಜನತೆಗೆ ಹೆಮ್ಮೆಯ ಮುಖ್ಯಮಂತ್ರಿ ಎಂದು ಪ್ರೀತಿಗೆ ಪಾತ್ರರಾದವರು 2024 ರಲ್ಲಿ ನಮ್ಮ ಭಾರತ ದೇಶದ ಸಂವಿಧಾನ ಜಾರಿಗೆ ಬಂದು 75 ವರ್ಷಗಳು ಒಳ್ಳೆಯ ಜಯದ ನಿಟ್ಟಿನಲ್ಲಿ ಈ ಹಿನ್ನಲೆಯಲ್ಲಿ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಪ್ರತಿಯೊಂದು ತಾಲೂಕಿನಲ್ಲಿ ಪ್ರತಿಯೊಂದು ಕಟ್ಟ ಕಡೆಯ ಹಳ್ಳಿಗಳಿಗೂ ಸಂವಿಧಾನ ಜಾಗೃತಿ ಜಾಥಾ ರಥ ಆಯೋಜಿಸಿ ಜಾಗೃತಿ ಮೂಡಿಸಿದವರು ತಾವು. ಅದಕ್ಕೆ ರಾಜ್ಯದ ಅನ್ನರಾಮಯ್ಯ ಸಿದ್ದರಾಮಯ್ಯ ಅವರ ಸರ್ಕಾರಕ್ಕೆ ರಾಜ್ಯದ ಜನತೆಯ ಪರವಾಗಿ ಹಾಗೂ ಬಹುಜನ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ. ಮತ್ತು ಜಿಲ್ಲಾ ಸಮಿತಿ. ಮತ್ತು ತಾಲೂಕ ಸಮಿತಿ ಪದಾಧಿಕಾರಿಗಳಾದ ಜಿಲ್ಲಾ ವಿಜಯಪುರ ಜಿಲ್ಲಾ ಕಾರ್ಯಾಧ್ಯಕ್ಷರಾದ ಶ್ರೀಶೈಲ ಜಾಲವಾದಿ ಜಿಲ್ಲಾಧ್ಯಕ್ಷರಾದ ರಾಘವೇಂದ್ರ ಗುಡಿಮನಿ ಪ್ರದೀಪ್ ಮಲ್ಲಾರಿ ಪ್ರಕಾಶ್ ತಳಕೇರಿ ಕಾಮೇಕ್ಷ ಭಜಂತ್ರಿ ಅನಿಲ್ ಕಲ್ಮಡಿ ಶಿವಕುಮಾರ್ ಬಸವರಾಜ್ ಅರುಣ್ ಕುಮಾರ್ ಶಿಂಗೆ ಶ್ರೀಮತಿ ಶಿವಗಂಗಾ ಕಟ್ಟಿಮನಿ ಶರಣು ಕಡಿ ಅಜಿತ್ ಮುಲ್ಲಾ ಅಮೋಗಿ ಡವಳಾರ ಸಂತೋಷ್ ಮುನಿಸಿ ರಮೇಶ್ ಒತಿಹಾಳ ಇವರೆಲ್ಲರೂ ಪತ್ರಿಕೆ ಪ್ರಕಟನೆ ಮೂಲಕ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಕೋಟಿ ಕೋಟಿ ಭೀಮಾ ನಮನಗಳನ್ನು ಈ ಪತ್ರಿಕೆ ಪ್ರಕಟಣೆ ಮೂಲಕ ಸಲ್ಲಿಸುತ್ತೇವೆ ಎಂದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಭೀಮಪ್ಪ. ಹಚ್ಯಾಳ.ದೇವರ ಹಿಪ್ಪರಗಿ