ಸಾರ್ವಜನಿಕರಿಗೆ ದ್ರೋಹ ಬಗೆಯುತ್ತಿರುವ ಸಿರವಾರ ತಾಲೂಕ – ಕಾರ್ಯ ನಿರ್ವಾಹಕ ಅಧಿಕಾರಿ ಶಶಿಧರ್.ಸ್ವಾಮಿ.
ಮಾನ್ವಿ ಮಾ.08

ರಾಯಚೂರು ಜಿಲ್ಲೆಯ ಸಿರವಾರ ತಾಲೂಕಿನ ಕೆ.ಗುಡ್ದಿನ್ನಿ ಗ್ರಾಮದಲ್ಲಿ ಸರ್ಕಾರದ ಅನುದಾನ ಲೂಟಿ 2024-25 ನೇ. ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕೈಗೊಂಡ ಕಾಮಗಾರಿಗಳು ಮತ್ತು ಜೆ.ಜೆ.ಎಮ್ ಯೋಜನೆ ಕಾಮಗಾರಿಗಳು ಹಾಗೂ 15 ನೇ. ಹಣಕಾಸು ಯೋಜನೆ ಅಡಿಯಲ್ಲಿ ಅರ್ಧಂಬರ್ಧ ಕೆಲಸ ಮಾಡಿರುತ್ತಾರೆಂದು ಅಧಿಕಾರಿಗಳ ಗಮನಕ್ಕೆ ತಂದರು ಅಧಿಕಾರಿಗಳು ಗಾಢ ನಿದ್ರೆಗೆ ಜಾರಿರುತ್ತಾರೆ.
ಅಧಿಕಾರಿಗಳಿಗೆ ಕಾಮಗಾರಿ ಸರಿಯಾದ ರೀತಿಯಲ್ಲಿ ಆಗಿಲ್ಲ ಎಂದು ದೂರು ಸಲ್ಲಿಸಿದ ದೂರುದಾರರು ಮೇಲೆ ದರ್ಪ ಮೆರೆದು ದೌರ್ಜನ್ಯ ವೇಸಗಿರುತ್ತಾರೆ ಸರಕಾರಿ ಕೆಲಸ ದೇವರ ಕೆಲಸದಂತೆ ಮಾಡಬೇಕು.
ಆದರೆ ಇಲ್ಲಿಯ ಅಧಿಕಾರಿಗಳು ಗೂಂಡಾ ವರ್ತನೆ ಮಾಡುತ್ತಿದ್ದಾರೆಂದು ಅಂಬೇಡ್ಕರ್ ಜನಸೇವಾ ಸತ್ಯಶೋಧನಾ ಸಮಿತಿಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ