ಕಲ್ಪತರು ಕಿರಿಯ ಪ್ರಾಥಮಿಕ ಶಾಲೆಯಲ್ಲಿ 7 ನೇ. ವಾರ್ಷಿಕೋತ್ಸವ – ಸಮಾರಂಭ ಜರುಗಿತು.
ಡಂಬಳ ಮಾ.09

ಸಿಂದಗಿ ತಾಲ್ಲೂಕಿನ ಗೋಲಗೇರಿ ಗ್ರಾಮದ ಹತ್ತಿರ ಇರುವ ಡಂಬಳದಲ್ಲಿ ಕರ್ನಾಟಕ ಅಲೆಮಾರಿ ಜನಾಂಗ ಶಿಕ್ಷಣ ಹಾಗೂ ವಿವಿದೋದ್ದೇಶಗಳ ಸೇವಾ ಸಂಸ್ಥೆ ಗೋಲಗೇರಿ ಅಡಿಯಲ್ಲಿ ಕಲ್ಪತರು ಕಿರಿಯ ಪ್ರಾಥಮಿಕ ಶಾಲೆ ಡಂಬಳದಲ್ಲಿ ಶಾಲಾ 7 ನೇ ವಾರ್ಷಿಕೋತ್ಸವ ನಡೆಯಿತು. ಯಂಕಂಚಿಯ ಶ್ರೀ ಅಭಿನವ ರುದ್ರಮುನಿ ಶಿವಾರ್ಚಾಯರು ಹಾಗೂ ಗೋಲಗೇರಿಯ ಶ್ರೀ ವೇ.ಮೂ ಪ್ರಶಾಂತ ಮಹಾಸ್ವಾಮಿಗಳು ದಿವ್ಯ ಸಾನಿದ್ಯ ವಹಿಸಿದ್ದರು. ಯಂಕಂಚಿಯ ಶ್ರೀ ಗಳು ಮಾತನಾಡಿ ಬದುಕನ್ನು ಕಟ್ಟಿ ಕೊಳ್ಳಲು ದುಡ್ಡು ಮುಖ್ಯವಲ್ಲ ಶಿಕ್ಷಣ ಜ್ಞಾನ ಮುಖ್ಯ ಜ್ಞಾನದ ದೇಗುಲಗಳೆಂದರೆ ಶಾಲೆಗಳು ಎಂದು ಹೇಳಿದರು ನಂತರ ಗೋಲಗೇರಿಯ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಶರಣು ಚಟ್ಟಿ ಅವರು ಮಾತನಾಡಿ, ಮಕ್ಕಳ ಶೈಕ್ಷಣಿಕ ಬಲವರ್ಧನೆಗೆ ಉತ್ತಮ ಪರಿಸರ ದೊಂದಿಗೆ ನೈತಿಕ ಸಂಸ್ಕಾರ ಅಗತ್ಯ. ಶಿಕ್ಷಕ ರೊಂದಿಗೆ ಪಾಲಕರು ಮಕ್ಕಳ ಕಲಿಕೆಯ ಕಡೆ ಗಮನ ಹರಿಸಿ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಸಹಕರಿಸ ಬೇಕು ಎಂದು ತಿಳಿಸಿದರು.ಮಹಿಳೆಯರ ದಿನಾಚರಣೆ ಪ್ರಯುಕ್ತ ಶಾರದಾಂಬೆ ಭಾವ ಚಿತ್ರಕ್ಕೆ ಶ್ರೀ ಮತಿ ನಿರ್ಮಲಾ ಮಾರಲಭಾವಿ ಅವರು ಪೂಜೆ ನೆರವೇರಿಸಿದರು. ಸಿದ್ದು ರಾಜಾರಾಮ ಗೊಂಧಳಿ ಅಧ್ಯಕ್ಷತೆ ವಹಿಸಿದ್ದರು. ವಿಜುಗೌಡ ನಿಂ ಬಿರಾದಾರ ಉದ್ಘಾಟಿಸಿದರು,ಬಿ.ಸಿ ಪಾಟೀಲ ವಕೀಲರು ಹಾಗೂ ಭೀಮಾಶಂಕರ ಅಲ್ಲಾಪೂರ. ಜ್ಯೋತಿ ಬೆಳೆಗಿಸಿದರು. ಭೀಮಾಜಿ ಕುಲಕರ್ಣಿ, ಅಪ್ಪಾಜಿ ಸುಣಗಾರ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಬಸವರಾಜ ರಾ ಕಾಂಬಳೆ, ಗ್ರಾ.ಪಂ ಅಧ್ಯಕ್ಷರಾದ ಅಮೋಗಿ ಜೈನಾಪೂರ,ಗೊಲ್ಲಾಳಪ್ಪಗೌಡ ಪಾಟೀಲ, ಗೌಡಣ್ಣ ಆಲಮೇಲ, ಎಸ್.ಎಸ್ ಜೋಶಿ ಸರ್, ಬಸವರಾಜ. ಬಿರಾದಾರ ಮಾಗಣಗೇರಿ. ಎಂ.ಪಿ ರಾಠೋಡ, ರಾಮಚಂದ್ರ ರಾಠೋಡ ಎ.ಡಿ ಕೋರವಾರ, ಸಿದ್ದು ತಡಲಗಿ, ಶಿಕ್ಷಕರಾದ ಪಿ.ಎಂ ಶೇಖ, ಗೊಲ್ಲಾಳಪ್ಪ ಪೂಜಾರಿ, ಆನಂದ ಪ್ರ ಪಾಟೀಲ ಚಂದ್ರು.ಕೆಂಭಾವಿ ಪತ್ರಕರ್ತರಾದ ದಾವಲಸಾಬ. ಬನ್ನೆಟ್ಟಿ ಸೇರಿದಂತೆ ಪಾಲಕರು ಭಾಗವಹಿಸಿದ್ದರು. ಪ್ರಕಾಶ ಗೊಂಧಳಿ ನಿರೂಪಿಸಿದರು, ಮಹಾಂತೇಶ. ಗೊಂದಳಿ ಸ್ವಾಗತಿಸಿ ವಂದಿಸಿದರು. ಸುಮಾರು 2 ಗಂಟೆ ಕಾಲ ಮುದ್ದು ಮಕ್ಕಳು ನೃತ್ಯ ಮತ್ತು ಮನರಂಜನೆ ಕಾರ್ಯಕ್ರಮ ನಡೆಯಿತು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ