ಮನನೊಂದು ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳು – ನೇಣಿಗೆ ಶರಣು.
ಮಳ್ಳಿ ಮಾ.09

ಕಲಬುರಗಿ ಜಿಲ್ಲೆಯ ಯಡ್ರಾಮಿ ತಾಲೂಕಿನ ಮಳ್ಳಿ ಮತ್ತು ನಾಗರಹಳ್ಳಿ ಗ್ರಾಮದಲ್ಲಿ ಇಡೀ ಮಾನವ ಕುಲವೇ ಬೆಚ್ಚಿ ಬೀಳುವಂತಹ ದುರ್ಘಟನೆ ಒಂದು ಬೆಳಕಿಗೆ ಬಂದಿದೆ. ಮಳ್ಳಿಯಲ್ಲಿನ ಸರ್ಕಾರಿ ಪ್ರೌಢ ಶಾಲೆಯ ಹತ್ತನೇ ತರಗತಿ ಜೊತೆಯಲ್ಲೇ ವ್ಯಾಸಂಗ ಮಾಡುತ್ತಿರುವ ಇಬ್ಬರು ವಿದ್ಯಾರ್ಥಿಗಳು ಇದರ ನಡುವೆಯೂ ಮಳ್ಳಿ ಗ್ರಾಮದ ಯುವಕ ಮಾಳಪ್ಪ ಪೂಜಾರಿ ಎಂಬವವನು ಮತ್ತು ನಾಗರಹಳ್ಳಿ ಗ್ರಾಮದ ಅನ್ಯಕೋಮಿನ ಯುವತಿ ನಸೀಮಾ ಮುಲ್ಲಾ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು.
ಆದರೆ ಅಂತರ್ಜಾತಿ ಬೇರೆ ಧರ್ಮ ಎಂಬ ಒಂದೇ ವಿಷಯಕ್ಕೆ ಮನೆಯಲ್ಲಿ ಈ ವಿಷಯಕ್ಕೇ ಒಪ್ಪುವುದಿಲ್ಲ ಎಂದೂ ಭಾವಿಸಿ ಮಳ್ಳಿ – ನಾಗರಹಳ್ಳಿ ಯಲ್ಲಿಯ ಮಧ್ಯೆ ಹೊರವಲಯದ ಶಹಾಪುರ- ಸಿಂದಗಿ ಮುಖ್ಯ ರಸ್ತೆಯ ಬದಿಯಲ್ಲಿ ಗಿಡವೊಂದಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ವಿಷಯ ತಿಳಿಯದಂತೆ ಸ್ಥಳೀಯರು ಮತ್ತು ಕುಟುಂಬಸ್ಥರು ಬಂದು ನೋಡಿದಾಗ ಜೋಡಿಯಲ್ಲೇ ನೇತಾಡುತ್ತಿರುವ ಶವವನ್ನು ನೋಡಿ ಕುಟುಂಬಸ್ಥರ ಆಕ್ರಂದನ ಮುಗಿಲಿಗೆ ಮುಟ್ಟಿತು ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಾಶಂಕರ್.ಎನ್.ನೀಲಕೋಡ.ಇಜೇರಿ