ಸನ್ನತಿ ಪ್ರಾಧಿಕಾರ ರಚನೆಗೆ – ಕೆ.ಶಂಕರ್ ನಂದಿಹಾಳ ಹರ್ಷ.
ಬಳ್ಳಾರಿ ಮಾ.09

ಕೆ.ಶಂಕರ್ ನಂದಿಹಾಳ ಹರ್ಷ ಕ್ರಿ.ಪೂ 3 ನೇ. ಶತಮಾನಕ್ಕೆ ಸೇರಿದ ಸಾಮ್ರಾಟ್ ಅಶೋಕ ಆಡಳಿತ ಚಕ್ರವರ್ತಿಯ ಕಾಲಘಟ್ಟದ ವಿಶ್ವ ವಿಖ್ಯಾತ ಪ್ರಾಚೀನ ಮಹಾ ಬೌದ್ಧಸ್ತೂಪ ಪತ್ತೆಯಾದ ಚಿತ್ತಾಪುರ ತಾಲೂಕಿನ ಸನ್ನತಿ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಆದೇಶ ಹೊರಡಿಸಿರುವ ಕ್ರಮವನ್ನು ಬೌದ್ಧರು ಸ್ವಾಗತಿಸಿದ್ದಾರೆ.ಕೆ.ಶಂಕರ್ ನಂದಿಹಾಳ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ, ಬೌದ್ಧ ಧರ್ಮದ ಪರಂಪರೆ ಸಾರುವ ಸನ್ನತಿ ಬೌದ್ಧ ತಾಣ ಬೆಳಕಿಗೆ ಬಂದು ಮೂರು ದಶಕಗಳು ಗತಿಸಿವೆ.ಇದುವರೆಗೂ ಕಿಂಚಿತ್ತೂ ಅಭಿವೃದ್ಧಿ ಕಂಡಿಲ್ಲ. ಬೌದ್ಧ ಭಾವನೆ ಬೆಸೆಯುವ ಸನ್ನತಿ ಅಭಿವೃದ್ಧಿ ಕಾಣಬೇಕು ಎಂಬುದು ನಮ್ಮ ಬಹು ದಿನಗಳ ಕನಸಾಗಿತ್ತು. ಇದಕ್ಕಾಗಿ ಶಾಂತಿ ಮಾರ್ಗದ ಹಲವು ಹೋರಾಟಗಳನ್ನು ನಡೆಸಲಾಗಿದ್ದು, ರಾಜ್ಯ ಮತ್ತು ಹೊರ ದೇಶಗಳ ಭಂತೇಜಿಗಳು ಸನ್ನತಿಯನ್ನು ಕೇಂದ್ರೀಕರಿಸಿ ಕಾರ್ಯಕ್ರಮಗಳನ್ನು ಸಂಘಟಿಸಲು ಆರಂಭಿಸಿದ್ದರು.ಕೊನೆಗೂ ರಾಜ್ಯ ಸರ್ಕಾರ ಎಚ್ಚೆತ್ತು ಕೊಂಡಿದ್ದು, ಸನ್ಮಾನ್ಯ ಶ್ರೀ ಗೌರವಾನ್ವಿತ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಸಾಹೇಬರು ಹಾಗೂ ಉಪ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಸಾಹೇಬರು ಅಭಿನಂದನೆಗಳು ಸಲ್ಲಿಸಲಾಗುತ್ತದೆ. ಹಾಗೂ ಸನ್ನತಿ ಅಭಿವೃದ್ಧಿ ಪ್ರಾಧಿಕಾರ ರಚಿಸಿ ಅಸ್ತಿತ್ವಕ್ಕೆ ತಂದಿದ್ದಕ್ಕೆ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಜಿಲ್ಲಾ ಸಮಿತಿ ಬಳ್ಳಾರಿ ಸ್ವಾಗತಾರ್ಹವಾಗಿದೆ.ಪ್ರಾಧಿಕಾರ ರಚನೆ ಕೇವಲ ಬಜೆಟ್ ಘೋಷಣೆಯಾಗಿ ಉಳಿಯದೆ ಪ್ರಾಮಾಣಿಕವಾಗಿ ಕಾರ್ಯರೂಪಕ್ಕೆ ಬರಬೇಕು. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ವಿಶೇಷ ಗಮನ ಹರಿಸುವ ಮೂಲಕ ಹೆಚ್ಚಿನ ಅನುದಾನ ನೀಡಬೇಕು.ಆ ಮೂಲಕ ಪ್ರಾಚೀನ ಇತಿಹಾಸ ಹೊತ್ತಿರುವ. https://www.prajavani.net/business/budget/karnataka-budget-2025-rs-25-cr-for-mandya-agricultural-university-details-3197151 ಸನ್ನತಿಯನ್ನು ವಿಶ್ವದ ಗಮನ ಸೆಳೆಯುವಂತೆ ಅಭಿವೃದ್ಧಿ ಪಡಿಸಲು ಮುಂದಾಗಬೇಕು ಎಂದು ಕೆ.ಶಂಕರ್ ನಂದಿಹಾಳ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕರ್ನಾಟಕ ದಲಿತ ರಕ್ಷಣಾ ವೇದಿಕೆಯು ಸುದ್ದಿ ಮಾಧ್ಯಮ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್ ಗೆ ತಿಳಿಸಿದ್ದಾರೆ.