ದಲಿತರ ಮೇಲೆ ತಪ್ಪದ ದೌರ್ಜನ್ಯ, ದಬ್ಬಾಳಿಕೆ, ಕೋನ್ ರೆಡ್ಡಿ ಸಾಹೇಬ್ರೆ ಎಲ್ಲಿದ್ದೀರಿ ನಿಮ್ಮ ಚಿತ್ತ – ನಿಮ್ಮ ಕ್ಷೇತ್ರದ ದಾಟನಾಳ ಕಡೆ ಹರಿಸಿರಿ.

ನವಲಗುಂದ ಮಾ.11

ಭಾಗ್ಯ, ಭಾಗ್ಯಾನ ನಡುವೆ ನಡೀತಾ ಜಾತಿಯ ತಾರ್ಯಾತಮ್ಯ ಈ ಮೇಲ್ಜಾತಿಯ ಭಾಗ್ಯ ಯಾರು ದಲಿತ ಸಮುದಾಯಕ್ಕೆ ಸೇರಿದ ಭಾಗ್ಯ ಯಾರು ಈ ಭಾಗ್ಯಗೂ ಮತ್ತು ಆ ಭಾಗ್ಯಗೂ ಯಾಕೆ ಜಗಳ ಅಂತೀರಾ ವೀಕ್ಷಕರೇ ಒಂದಂದಾಗಿ ಹೇಳ್ತಾ ಹೋಗುತ್ತೆವೇ ಕೇಳಿ ವೀಕ್ಷಕರೇ ಹೌದು ಪ್ರಿಯ ವೀಕ್ಷಕರೇ ಎಲ್ಲಿ ಅಂತೀರಾ ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ದಾಟನಾಳ ಗ್ರಾಮದಲ್ಲಿ ಮೇಲ್ವರ್ಗದ ಭಾಗ್ಯ ಶಿವಪ್ಪ ಕುರಿ ಮತ್ತು ದಲಿತ ಸಮುದಾಯಕ್ಕೆ ಸೇರಿದ ಭಾಗ್ಯ ಶಿವಪ್ಪ ಛಲವಾದಿ ಯುವತೀಯರು ಆ ಗ್ರಾಮದ ಪ್ರೌಢ ಶಾಲೆಯಲ್ಲಿ 10 ನೇ. ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ ಈ ಭಾಗ್ಯ ಶಿವಪ್ಪ ಕುರಿ ಎಂಬ ಯುವತಿಗೆ ಜಾತಿ ತಾರ್ಯಾತಮ್ಯ ತುಂಬಿ ತುಳು ಕುತ್ತಿರುತ್ತೆ ಈ ಮೇಲ್ವರ್ಗದ ಯುವತಿ ವ ಭಾಗ್ಯ ಶಿವಪ್ಪ ಕುರಿ ದಲಿತ ಸಮುದಾಯಕ್ಕೆ ಸೇರಿದ ಭಾಗ್ಯ ಶಿವಪ್ಪ ಛಲವಾದಿಗೆ ಪ್ರತಿ ದಿನ ಮಾನಸಿಕ ಹಿಂಸೆ ಕೊಡುತ್ತಿರುತ್ತಾಳೆ.ಶಾಲೆಯಲ್ಲಿ ಪ್ರತಿ ದಿನ ಈ ಭಾಗ್ಯ ಶಿವಪ್ಪ ಕುರಿ ದಲಿತ ಸಮುದಾಯಕ್ಕೆ ಸೇರಿದ ಭಾಗ್ಯ ಛಲವಾದಿಗೆ ಶಾಲೆಯಲ್ಲಿ ಎ ನೀನು ಕೀಳು ಜಾತಿಯವಳು ನೀನು ಕ್ಲಾಸಿನಲ್ಲಿ ನನ್ನ ಪಕ್ಕದಲ್ಲಿ ಕೂಡ ಬೇಡ ಎಂದು ಬಹು ದಿನಗಳಿಂದ ಮಾನಸಿಕವಾಗಿ ಚಿತ್ರ ಹಿಂಸೆ ಕೋಡುತ್ತೀರಿತ್ತಾಳೆ ಇದನ್ನು ಬಹಳ ದಿನಗಳಿಂದ ಸಹಿಸಿ ಕೊಂಡು ಬಂದ ದಲಿತ ಸಮುದಾಯದ ಭಾಗ್ಯ ದಿನಾಂಕ್ 7.3.2025 ಶುಕ್ರವಾರ ರಂದು ನೀನು ನಡೆದು ಕೊಳ್ಳುತ್ತಿರುವ ರೀತಿ ಸರಿ ಇಲ್ಲ ಈ ಶಾಲೆ ಎಲ್ಲರಿಗೂ ಸರಿ ಸಮಾನ ನೀನು ನನ್ನ ಜಾತಿಗೆ ಅವಮಾನ ಮಾಡುವುದ ರೊಂದಿಗೆ ಪ್ರತಿ ದಿನ ನನಗೆ ನೀನು ಜಾತಿ ನಿಂದನೆ ಮಾಡುವದರಿಂದ ನನಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುತ್ತಾ ಬಂದಿದ್ದೀಯಾ ನಿನ್ನ ವರ್ತನೆ ಸರಿಯಲ್ಲವೆಂದು ದಲಿತ ಸಮುದಾಯದ ಭಾಗ್ಯ ಮೇಲ್ವರ್ಗದ ಭಾಗ್ಯಳಿಗೆ ತಿಳಿ ಹೇಳಿರುತ್ತಾಳೆ.

ಅಷ್ಟಕ್ಕೇ ಸುಮ್ಮನಾಗದ ಈ ಮೇಲ್ವರ್ಗದ ಯುವತಿ ಭಾಗ್ಯ ಶಿವಪ್ಪ ಕುರಿ ಅವರ ಅಣ್ಣನಿಗೆ ನಮ್ಮ ಶಾಲೆಯಲ್ಲಿ ಹೊಲೆಯ ಜಾತಿಗೆ ಸೇರಿದ ಭಾಗ್ಯ ಶಾಲೆಯಲ್ಲಿ ನನ್ನ ಜೊತೆಯಲ್ಲಿ ಜಗಳ ಮಾಡುತ್ತಿದ್ದಾಳೆ ಎಂದು ಮೇಲ್ವರ್ಗದ ಭಾಗ್ಯ ಆಕೆಯ ಅಣ್ಣ ಸಚಿನ್ ಗೆ ವಿಷಯ ಮುಟ್ಟಿಸುತ್ತಾಳೆ.ಮರುದಿನ ದಿನಾಂಕ 8/3/2025 ಶನಿವಾರ ರಂದು ಮೇಲ್ವರ್ಗದ ಭಾಗ್ಯಾಳ ಅಣ್ಣ ಸಚಿನ್ ಶಿವಪ್ಪ ಕುರಿ ಮತ್ತು ಅವನ ಸಹಪಾಠಿ ಜಯಪ್ಪ ರಾಮಪ್ಪ ಅಡ್ನೂರು ಇವರಿಬ್ಬರ ಗ್ಯಾಂಗ್ ಕಟ್ಟಿಕೊಂಡು ಗ್ರಾಮದ ಬಸ್ ಸ್ಟಾಂಡ್ ಹತ್ತಿರ ದಲಿತ ಯುವತಿ ಭಾಗ್ಯ ಶಾಲೆ ಮುಗಿಸಿ ಕೊಂಡು ಬರುವದನ್ನು ಕಾಯುತ್ತಿರುತ್ತಾರೆ ಶಾಲೆ ಮುಗಿಸಿಗೊಂಡು ಬರುತ್ತಿದ್ದ ದಲಿತ ಯುವತಿ ಭಾಗ್ಯಳನ್ನು ಸುಮಾರು ಮದ್ಯಾಹ್ನ 12 ರಿಂದ 12.30 ಸುಮಾರಿಗೆ ಗ್ರಾಮದ ಬಸ್ ಸ್ಟಾಂಡ್ ಹತ್ತಿರ ಸಚಿನ್ ಜಯಪ್ಪ ಮತ್ತು ಇವರಿಬ್ಬರ ಗ್ಯಾಂಗ್ ದಲಿತ ಯುವತಿ ಭಾಗ್ಯಳನ್ನು ಅಡ್ಡಗಟ್ಟಿ ಎ ನೀನು ನನ್ನ ತಂಗಿಯ ಜೊತೆ ಜಗಳ ಮಾಡಿದ್ದೀಯಾ ಅಂತಾ ಸಚಿನ್ ಮತ್ತು ಜಯಪ್ಪನ ತಂಡ ದಲಿತ ಯುವತಿಗೆ ಸಾರ್ವಜನಿಕ ಸ್ಥಳದಲ್ಲಿ ಜಾತಿ ನಿಂದನೆ ಮಾಡಿದ್ದಲದೇ ದಲಿತ ಯುವತಿಯ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಾರೆ. ಈ ವಿಷಯ ತಿಳಿದ ದಲಿತ ವಿವತಿಯ ಕುಟುಂಬಸ್ಥರು ಭಾಗ್ಯಾಳ ತಾಯಿ ಶೋಭಾ ಮತ್ತು ಆಕೆಯ ಅಜ್ಜ ಶರಣಪ್ಪ ಮಾವಂದಿರಾದ ಹಣಮಂತ ಮಹಾಂತೇಶ ಮತ್ತು ದಲಿತ ಸಮುದಾಯದ ಕೆಲವೊಂದಷ್ಟು ಪ್ರಜ್ಞಾವಂತ ಯುವಕರು ಗ್ರಾಮದ ಬಸ್ ಸ್ಟಾಂಡ್ ಘಟನಾ ಸ್ಥಳಕ್ಕೆ ಬರುತ್ತಾರೆ. ಘಟನಾ ವಿಷಯವನ್ನು ಕೇಳಲು ಮುಂದಾದ ದಲಿತ ಸಮುದಾಯದವರಿಗೂ ಕೂಡ ಸಚಿನ್ ಶಿವಪ್ಪ ಕುರಿ ಮತ್ತು ಜಯಪ್ಪ ರಾಮಪ್ಪ ಅಡ್ನೂರು ಇವರಿಬ್ಬರ ತಂಡ ಬಸ್ ಸ್ಟಾಂಡ್ ಆವರಣದಲ್ಲೇ ದಲಿತ ಛಲವಾದಿ ಸಮುದಾಯದ ಘಟನಾ ವಿಷಯ ಕೇಳಲು ಹೋದ ಎಲ್ಲರ ಮೇಲೇಯು ಕೂಡ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡುವುದಲ್ಲದೆ ಅವರ ಮೇಲೇಯು ಕೂಡ ಹಲ್ಲೆ ಮಾಡಿರುತ್ತಾರೆ. ಹಲ್ಲೆಗೆ ಒಳಗಾದ ದಾಟನಾಳ ಗ್ರಾಮದ ದಲಿತ ಸಮುದಾಯದವರು ತಾಲೂಕಿನ ಸರಕಾರಿ ಆಸ್ಪತ್ರೆ ನವಲಗುಂದ ಚಿಕಿತ್ಸೆ ಪಡೆಯಲು ದಾಖಲಾಗಿರುತ್ತಾರೆ.

ಈ ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಧಾರವಾಡ ಜಿಲ್ಲಾ ಅಧ್ಯಕ್ಷ ಪುಂಡಲೀಕ್ ಛಲವಾದಿ ಮತ್ತು ಅವರ ತಂಡ ಹಲ್ಲೆ ಮಾಡಿದ 11 ಆರೋಪಿ ಸಚಿನ್ ಶಿವಪ್ಪ ಕುರಿ.ಜಯಪ್ಪ ರಾಮಪ್ಪ ಅಡ್ನೂರ. ಕಾರ್ತಿಕ್ ಮುದಿಯಪ್ಪ ಹಿಟ್ನಾಯ್ಕರ. ಫಕೀರಪ್ಪ ಜಟ್ಟೇನ್ನವರ. ರವಿ ಸಿದ್ದಪ್ಪ ಗುಡಿಸಗಾರ. ಎಲ್ಲಪ್ಪ ಸಿದ್ದಪ್ಪ ಗುಡಿಸಾಗರ್. ಸಲೀಂ ಪಕೀರಸಾಬ್ ಮುಲ್ಲಾ ನವರ್. ಮೈಲಾರಿ ಎಲ್ಲಪ್ಪ ಕುರಿ. ಶಿವಾನಂದ್ ಸಿದ್ದಲಿಂಗಪ್ಪ ಗುಡಿಸಾಗರ. ಪಾರವ್ವ ಶಿವಾನಂದ ಕುರಿ. ಮುದಿಯಪ್ಪ ಎಲ್ಲಪ್ಪ ಹಿಟ್ನಾಯ್ಕರ್ ವ್ಯಕ್ತಿಗಳ ಮೇಲೆ ಎಸ್/ಸಿ ಎಸ್/ಟಿ ಪ್ರಕರಣ ದಾಖಲಿಸುವ ಮೂಲಕ ಸಧ್ಯ ಈ ಆರೋಪಿಗಳನ್ನು ಧಾರವಾಡ ಸಬ್ಜೈಲ್ ಗೆ ಶಿಫ್ಟ್ ಮಾಡಲಾಗಿದೆ.ದೌರ್ಜನ್ಯಕ್ಕೆ ಒಳಗಾದ ದಲಿತ ಸಮುದಾಯದ ಭಾಗ್ಯಾಳ ಕುಟುಂಬಸ್ಥರ ಮೇಲೇಯು ಕೂಡ ಹಲ್ಲೆ ಮಾಡಿದ ಮೇಲ್ವರ್ಗದ ಜನರಿಂದ ಕೌಂಟರ್ ಕೇಸ್ ದಾಖಲಿಸಿದ್ದಾರೆ.

ದಲಿತ ಸಮುದಾಯದ ಶರಣಪ್ಪ ಛಲವಾದಿ ಮತ್ತು ಮಹಾಂತೇಶ ಛಲವಾದಿ ಇವರನ್ನು ಕೂಡ ಜಿಲ್ಲಾ ಸಬ್ಜೈಲ್ ಗೆ ಶಿಫ್ಟ್ ಮಾಡಿದ್ದಾರೆ ಎಂದು ತಿಳಿದು ಬಂದಿದೆ FIR ದಾಖಲಾಗಿರುವ ಹಿನ್ನೆಲೆಯಲ್ಲಿ ಆ ದಾಟನಾಳ ಗ್ರಾಮದ ದಲಿತ ಕುಟುಂಬಸ್ಥರು ಭಯದ ಭೀತಿಯಲ್ಲಿ ಜೀವನ ನಡೆಸುವಂತ ಪರಸ್ಥಿತಿ ನಿರ್ಮಾಣವಾಗಿದೆ FIR ದಾಖಲಾದ ಬಳಿಕ ಪೊಲೀಸ್ ಇಲಾಖೆಯ ಸಿಬ್ಬಂದಿಯವರು ಆ ದಾಟನಾಳ ಗ್ರಾಮಕ್ಕೆ ಹೋಗದೆ ಇರೋದು ದೊಡ್ಡ ದುರಂತ.ಧಾರವಾಡ ಜಿಲ್ಲಾ ವರಿಷ್ಟಧಿಕಾರಿಗಳೇ ಎಲ್ಲಿದ್ದೀರಾ ನಿಮ್ಮ ಚಿತ್ತ ನವಲಗುಂದ ತಾಲೂಕು ದಾಟನಾಳ ಗ್ರಾಮದತ್ತ ಹರಿಸಿರಿ ದೌರ್ಜನ್ಯ ಪ್ರಕರಣ ದಾಖಲಾಗಿದೆ 2 ದಿನ ಗತಿಸುತ್ತಾ ಬಂದರು ಕೂಡ ದೌರ್ಜನ್ಯಕ್ಕೆ ಒಳಗಾದ ಸಂತ್ರಸ್ತರಿಗೆ ಆಗಲಿ ಆ ಗ್ರಾಮದ ದಲಿತ ಕಾಲೋನಿಗಳಾಗಲಿ ಯಾವ ಒಬ್ಬ ಸಿಬ್ಬಂದಿ ಕೂಡ ಬಂದೋಬಸ್ತಿಗೆ ಹೋಗಿಲ್ಲವಂತೆ ಆ ಗ್ರಾಮದ ದಲಿತ ಕಾಲೋನಿಯಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಪತ್ರಿಕೆ ವರದಿ ಕಂಡ ಮೇಲಾದರೂ ಭಯದಿಂದ ಇರುವ ದಾಟನಾಳ ಗ್ರಾಮದ ದಲಿತರಿಗೆ ಪ್ರೊಡಕ್ಷನ್ ಕೊಡುವುದರ ಮೂಲಕ ಭಯದ ವಾತಾವರಣ ಹೋಗಲಾಡಿಸಿರಿ. ಇನ್ನೂಳಿದ ದಲಿತ ನಾಯಕರೇ ಎಲ್ಲಿದ್ದೀರಿ….? ನಿಮ್ಮ ಚಿತ್ತ ಧಾರವಾಡ ಜಿಲ್ಲಾ ನವಲಗುಂದ ಭಾಗದತ್ತ ಹರಿಸಿರಿ ದಲಿತರು ದೌರ್ಜನ್ಯ ದಬ್ಬಾಳಿಕೆಗೆ ಒಳಗಾದ ಎಸ್/ಸಿ ಎಸ್/ಟಿ ಪ್ರಕರಣ ದಾಖಲಾದ ಬಳಿಕ ರೀ ಕೌಂಟರ್ ಕೇಸ್ ಮಾಡಿದ್ದಾರೆ.

ಕೌಂಟರ್ ಕೇಸ್ ಮಾಡಿ ಕೇಸ್ ಖುಲಾಸೆ ಮಾಡುವ ಪ್ಲಾನ್ ನಡೆಸುವರನ್ನು ಬಗ್ಗು ಬಡೀರಿ. ಎಲ್ಲಾ ದಲಿತ ಪ್ರಗತಿಪರ ಸಂಘಟನೆಗಳು ಒಗ್ಗೂಡಿ ಕೊಂಡು ದಲಿತರ ಮೇಲೆ ಆಗಿರುವ ಕೌಂಟರ್ ಕೇಸನ್ನು ರದ್ದು ಗೊಳಿಸಿ ಎಂದು ಸರ್ಕಾರಕ್ಕೆ ಮತ್ತು ಪೊಲೀಸ್ ಇಲಾಖೆಗೆ ತಾಕೀತು ಮಾಡಿ ಇಲ್ಲವಾದರೆ ಮುಂದೊಂದು ದಿನ ದಲಿತರ ಪರಿಸ್ಥಿತಿ ಅಧೋಗತಿ ಆಗುವುದು ಖಂಡಿತ ಎಚ್ಚರಿಕೆ ಇರಲಿ.ಪತ್ರಿಕಾ ವರದಿ ಕಂಡ ಮೇಲಾದರೂ ಈ ದಲಿತ ನಾಯಕರು ಮತ್ತು ಸಂಘಟನೆಗಳು ಒಗ್ಗೂಡಿ ಕೊಂಡು ದಲಿತರ ಮೇಲೆ ಆಗಿರುವ ಕೌಂಟರ್ ಕೇಸ್ ರದ್ದು ಮಾಡಲು ಯಶಸ್ವಿ ಆಗುವುದು ರೊಂದಿಗೆ ದೌರ್ಜನ್ಯಕ್ಕೆ ಒಳಗಾದ ಕುಟುಂಬ ಗಳಿಗೆ ನ್ಯಾಯ ಒದಗಿಸುವ ಕೊಡುವವರೋ ಇಲ್ಲವೋ ಎಂದು ಕಾಯ್ದು ನೋಡ ಬೇಕಿದೆ.

ವರದಿ:ಅಂದಪ್ಪ ಮಾದರ

ಮಾರುತಿ ಹೊಸಮನಿ

Maruti Basavantappa Hosamani is Editor of Sihi Kahi Kannada Daily News Paper. Sihi Kahi News Daily Publishing News Contents from His Own News Network and Own Contents. Over the Print Media and Website.

Leave a Reply

Back to top button