ಹುನಗುಂದ ದಿಂದ ಶ್ರೀ ಶೈಲ ಮಲ್ಲಿಕಾರ್ಜುನ ಜಾತ್ರೆಗೆ ವಿಶೇಷ ಬಸ್ ವ್ಯವಸ್ಥೆ – ಅರವಿಂದ ಭಜಂತ್ರಿ.
ಹುನಗುಂದ ಏಪ್ರಿಲ್.04





ಆಂಧ್ರದ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರಾಗೆ ಹೋಗುವ ಯಾತ್ರಿಕರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಹುನಗುಂದ ಘಟಕ ದಿಂದ ಶ್ರೀಶೈಲ ಮಲ್ಲಿಕಾರ್ಜುನ ಸನ್ನಿಧಿಗೆ ತೆರಳಲು ಹುನಗುಂದ ಘಟಕ ದಿಂದ ನೇರ ಬಸ್ಸಿನ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಘಟಕ ವ್ಯವಸ್ಥಾಪಕ ಅರವಿಂದ ಭಜಂತ್ರಿ ಹೇಳಿದರು. ಶ್ರೀಶೈಲ ಜಾತ್ರಾ ನಿಮಿತ್ಯವಾಗಿ ಜಾತ್ರಾ ವಿಶೇಷ ಬಸ್ಸಿಗೆ ಅವರು ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, ನಮ್ಮ ತಾಲೂಕಿನಿಂದ ಅನೇಕ ಭಕ್ತಾಧಿಗಳು ಮಲ್ಲಿಕಾರ್ಜುನ ಜಾತ್ರೆಗೆ ಹೋಗುತ್ತಿದ್ದು, ಅವರಿಗೆ ಪ್ರಯಾಣದಲ್ಲಿ ತೊಂದರೆ ಯಾಗಬಾರದು ಎನ್ನುವ ದೃಷ್ಠಿಯಿಂದ ಇಲ್ಲಿಂದ ನೇರವಾಗಿ ಬಸ್ಸಿನ ಸೌಲಭ್ಯ ಒದಗಿಸಲಾಗಿದೆ. 50 ಜನ ಭಕ್ತಾಧಿಗಳು ಸೇರಿ ಗ್ರಾಮೀಣ ಪ್ರದೇಶ ದಿಂದಲ ಶ್ರೀಶೈಲಕ್ಕೆ ಹೋಗಬಹುದು. ಇಲ್ಲಿಂದ ಶ್ರೀಶೈಲಕ್ಕೆ ಹೋಗಲು 1 ಸೀಟಿಗೆ ರೂ. 800/-. ಪ್ರಯಾಣಿಕರು ಹೆಚ್ಚಾದರೆ ಹೆಚ್ಚಿನ ಬಸ್ಸುಗಳನ್ನು ಘಟಕ ದಿಂದ ಒದಗಿಸಲಾಗುವದು. ಈ ಜಾತ್ರಾ ಸೌಲಭ್ಯವನ್ನು ಮಲ್ಲಯ್ಯನ ಭಕ್ತಾಧಿಕಾಗಳು ಸದ್ಭಳಕೆ ಮಾಡಿ ಕೊಳ್ಳಬೇಕು ಎಂದರು. ಜಿ.ಬಿ. ಕಂಬಾಳಿಮಠ, ದುರಗಪ್ಪ ಹಾದಿಮನಿ, ವೀರೇಶ ಕುರ್ತಕೋಟಿ, ಸಂಚಾರಿ ನಿರೀಕ್ಷಕಿ ಶೈಲಾ ಜಿಗಳೂರ, ಎಸ್.ಎಸ್.ಬಡಿಗೇರ, ಸಾರಿಗೆ ನಿಯಂತ್ರಕ, ಜಾತ್ರಾ ಉತ್ಸುವಾರಿ ಎಂ.ಎಸ್, ಮಸರಕಲ್, ಷಣ್ಮುಖ ಆನೇಹೊಸೂರ ಸೇರಿದಂತೆ ಇತರರು ಇದ್ದರು.
ತಾಲೂಕ ವರದಿಗಾರರು ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮಲ್ಲಿಕಾರ್ಜುನ.ಎಂ.ಬಂಡರಗಲ್ಲ ಹುನಗುಂದ