ಸಾಮಾಜಿಕ ನ್ಯಾಯ, ಸಮಾನ ಹಂಚಿಕೆ – ಅಭಿವೃದ್ಧಿ ಪರ ಬಜೆಟ್.
ರೋಣ ಮಾ.11

ಸಿ.ಎಂ ಸಿದ್ದರಾಮಯ್ಯರವರು ಶುಕ್ರವಾರ ಮಂಡಿಸಿರುವ ಮುಂಗಡ ಪತ್ರವು ಚೈತನ್ಯಶೀಲ ಅಭಿವೃದ್ಧಿಪರ ಮತ್ತು ಅರ್ಥ ವ್ಯವಸ್ಥೆಯನ್ನು ಏರುಗತಿಯಲ್ಲಿ ಕೊಂಡೊಯ್ಯುವ ಮುಂಗಡ ಪತ್ರವಾಗಿದೆ. ಅಭಿವೃದ್ಧಿ ಸಾಮಾಜಿಕ ನ್ಯಾಯ, ಸಮಾನ ಹಂಚಿಕೆ ಮತ್ತು ಪ್ರದೇಶವಾರು ಸಮತೋಲನ ಕಾಯ್ದು ಕೊಳ್ಳುವ ಅಭಿವೃದ್ಧಿಶೀಲ ಮುಂಗಡ ಪತ್ರವನ್ನು ಸಿದ್ದರಾಮಯ್ಯರವರು ಮಂಡಿಸಿದ್ದಾರೆ. ಶಿಕ್ಷಣ, ಆರೋಗ್ಯ ನೀರಾವರಿ, ಸಮಾಜ ಕಲ್ಯಾಣ ಮೂಲ ಸೌಕರ್ಯ ಅಭಿವೃದ್ಧಿಗೆ ಹಾಗೂ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲಾಗಿದೆ ಎಂದು ಸೋಮು ನಾಗರಾಜ ಕಾಂಗ್ರೆಸ್ ಯುವ ಮುಖಂಡ ಪತ್ರಿಕಾ ಮಾಧ್ಯಮಕ್ಕೆ ತಿಳಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ.ರೋಣ.ಗದಗ