ಕಾಡುಗೊಲ್ಲ ಸಂಘದಿಂದ ವಿ.ಕೆ ನೇತ್ರಾವತಿ ನೂತನ ತಾಲೂಕು ದಂಡಾಧಿಕಾರಿಗಳಿಗೆ – ಅಭಿನಂದನಾ ಗೌರವಗಳು.
ಕೂಡ್ಲಿಗಿ ಮಾ.11

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ ಆಡಳಿತ ಕಚೇರಿಯಲ್ಲಿ ಸೋಮವಾರ ದಂದು ಕರ್ನಾಟಕ ರಾಜ್ಯ ಕಾಡುಗೊಲ್ಲರ ಸಂಘ ಜಿಲ್ಲಾ ಘಟಕ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ತಾಲೂಕು ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ವತಿಯಿಂದ ತಾಲೂಕ ಕಚೇರಿಯಲ್ಲಿ ಈ ಕೆಲವೇ ದಿನಗಳ ಹಿಂದೆ ಗ್ರೇಡ್ – 2. ತಹಶೀಲ್ದಾರ್ ರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ವಿ.ಕೆ ನೇತ್ರಾವತಿ ರವರು ಈಗ ಕೂಡ್ಲಿಗಿ ತಾಲೂಕಿನ ತಾಲೂಕು ದಂಡಾಧಿಕಾರಿಗಳಾಗಿ ನೇಮಕಗೊಂಡು ದಿನಾಂಕ 252/2025 ರಂದು ಅಧಿಕಾರ ವಹಿಸಿ ಕೊಂಡಿರುವುದ ರಿಂದ ಸದರಿ ಯವರಿಗೆ ಕೂಡ್ಲಿಗಿ ತಾಲೂಕಿನ ಕಾಡುಗೊಲ್ಲ ಸಮಾಜದ ವತಿಯಿಂದ ಕೂಡ್ಲಿಗಿ ತಾಲೂಕು ಕಚೇರಿಯಲ್ಲಿ ಅಭಿನಂದನಾ ಪೂರಕವಾಗಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಕಾಡುಗೊಲ್ಲ ಸಂಘದ ರಾಜ್ಯ ಉಪಾಧ್ಯಕ್ಷರು ಮತ್ತು ಜಿಲ್ಲಾಧ್ಯಕ್ಷರಾದ ಎಸ್.ಸಣ್ಣ ಬಾಲಪ್ಪನವರು ಮತ್ತು ತಾಲೂಕು ಅಧ್ಯಕ್ಷರಾದಂತಹ ಜಿ.ಎಸ್ ದೊಡ್ಡಪ್ಪನವರು ಉಪಾಧ್ಯಕ್ಷರಾದಂತಹ ಸಣ್ಣಯ್ಯನವರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯಾದಂತಹ ಬಿ.ಎನ್ ವಿರೂಪಾಕ್ಷಪ್ಪ ಖಜಾಂಚಿ, ಗೌಡ ಚಿಕ್ಕಪ್ಪ ಸಂಘಟನಾ ಕಾರ್ಯದರ್ಶಿಗಳಾದ ರವಿ,ಸಿದ್ದೇಶ್ , ನಿಂಗಪ್ಪ, ಜಿ.ಸಿ ರಂಗಸ್ವಾಮಿ ಸಿದ್ದನಟ್ಟಿ ದೊಡ್ಡಪ್ಪ, ಗೋವಿಂದ ಗಿರಿ ಸಣ್ಣಬಡಪ್ಪ ಕಾರ್ಯದರ್ಶಿ ದೊಡ್ಡಪ್ಪ ಹಾಗೂ ಸಮುದಾಯದ ಹಲವು ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ