ಅಡಿಕೆ ತೋಟ ಬಾಳೆ ಬೆಳೆ ಧ್ವಂಸ – ಮಾಡಿದ ಕಾಡಾನೆಗಳು.
ನರಸಿಂಹರಾಜಪುರ ಮಾ.13
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್ ಪುರ ತಾಲೂಕಿನಲ್ಲಿ ರೈತರು ಕಷ್ಟಪಟ್ಟು ಬೆಳೆಸಿದ ನೂರಾರು ಅಡಿಕೆ ಮರಗಳು ಮತ್ತು ಬಾಳೆ ಬೆಳೆಯನ್ನು ಇತ್ತೀಚಿಗೆ ಕಾಡಾನೆಗಳು ಗುಂಪು ನಾಶ ಮಾಡಿದ್ದು ರೈತರು ಕಂಗಾಲಾಗಿದ್ದಾರೆ. ಅರಣ್ಯ ಇಲಾಖೆಯವರಿಗೆ ಹೇಳಿದರೆ ನಮಗೂ ಹೆಂಡತಿ ಮಕ್ಕಳು ಇದ್ದಾರೆ ಆನೆಗಳೇನು ಸಾಕಿದ ನಾಯಿಗಳೇ ಓಡಿಸಲು ಎಂದು ಹೇಳುತ್ತಾರೆ. ಆದರೆ ನೊಂದ ರೈತರು ಯಾರಿಗೆ ಹೇಳಲಿ ನಮ್ಮ ಗೋಳು, ಸರ್ಕಾರ ಸೂಕ್ತ ಕ್ರಮ ಕೈಗೊಂಡು ಆನೆಗಳ ಹಾವಳಿಯನ್ನು ತಪ್ಪಿಸುವರೊ, ಹಾಗೂ ನಷ್ಟಕ್ಕೆ ಒಳಗಾದ ರೈತರಿಗೆ ಸೂಕ್ತ ಪರಿಹಾರ ಕೊಡುವರೊ ಕಾದು ನೋಡ ಬೇಕಾಗಿದೆ.

ನರಸಿಂಹರಾಜಪುರ ಸುತ್ತಮುತ್ತ ಸುಮಾರು ನೂರಾರು ಕಾಡಾನೆಗಳು ಇತ್ತೀಚಿಗೆ ಗುಂಪು ಗುಂಪಾಗಿ ದಾಳಿ ಮಾಡುತ್ತಿವೆ ಆನೆಗಳ ಕಾರಿಡಾರ್ ಯೋಜನೆ ಅಡಿ ಸರ್ಕಾರ ಕೋಟಿ ಗಟ್ಟಲೆ ಹಣ ಬಿಡುಗಡೆ ಮಾಡಿ ಕಾಡಾನೆಗಳಿಗೆ ಕಾಡಿನಲ್ಲೇ ಆಹಾರ ಕೊಡುವಂತೆ ಮಾರ್ಗದರ್ಶನ ಇದ್ದರೂ ಸಹ ಆನೆಗಳು ರೈತರು ಬೆಳೆದಿರುವ ತೋಟಗಳಿಗೆ ನುಗ್ಗಿ ಬೆಳೆ ನಾಶ ಮಾಡುತ್ತಿದ್ದು, ಸರ್ಕಾರದಿಂದ ಬಿಡುಗಡೆಯಾದ ಹಣ ಸರಿಯಾದ ರೀತಿಯಲ್ಲಿ ಬಳಕೆಯಾಗದೆ ಹಣ ಲೂಟಿ ಆಗುತ್ತಿದೆ. ಕೊಪ್ಪ ಡಿ.ಎಫ್.ಓ ಅರಣ್ಯ ಇಲಾಖೆಯವರು ಈ ಕುರಿತು ಸೂಕ್ತ ಗಮನ ಹರಿಸಬೇಕೆಂದು ರೈತರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎನ್. ವೆಂಕಟೇಶ್.ತರೀಕೆರೆ.ಚಿಕ್ಕಮಗಳೂರು