ನರೇಗಲ್ಲಿಗೆ ಆಗಮಿಸಿದ ತಾಯಿ ಭುವನೇಶ್ವರಿದೇವಿಗೆ – ಅದ್ದೂರಿ ಸ್ವಾಗತ.
ನರೇಗಲ್ ಜ.23

10 ನೇ. ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ನಿಮಿತ್ತ ಜಕ್ಕಲಿಯಿಂದ ನರೇಗಲ್ಲಿಗೆ ಆಗಮಿಸಿದ ತಾಯಿ ಭುವನೇಶ್ವರಿ ಮೆರವಣಿಗೆಗೆ ನರೇಗಲ್ಲದ ಕೆಇಬಿ ಕಚೇರಿ ಹತ್ತಿರ ಅದ್ಧೂರಿ ಸ್ವಾಗತ ಕೋರಲಾಯಿತು.ಗಜೇಂದ್ರಗಡ ತಹಸೀಲ್ದಾರ ಕಿರಣಕುಮಾರ ಕುಲಕರ್ಣಿ, ಪ.ಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಉಪಾಧ್ಯಕ್ಷ ಕುಮಾರಸ್ವಾಮಿ ಕೋರಧಾನ್ಯಮಠ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಡಿ.ಎ. ಅರವಟಗಿಮಠ ಮತ್ತು ಡಾ, ಕೆ.ಬಿ ಧನ್ನೂರ ಪೂಜೆ ಸಲ್ಲಿಸುವ ಮೂಲಕ ಸ್ವಾಗತ ಕೋರಿದರು. ಜಕ್ಕಲಿ ಕ್ರಾಸ್ ಮೂಲಕ ಸಾಗಿದ ಮೆರವಣಿಗೆಯು ಹೊಸ ಬಸ್ನಿಲ್ದಾಣ, ಪಟ್ಟಣ ಪಂಚಾಯಿತಿ, ಕೊಂತಿ ಮಲ್ಲಪ್ಪನ ಗುಡಿ, ಶ್ರೀ ವೀರಭದ್ರೇಶ್ವರ ದೇವಸ್ಥಾನ, ಶ್ರೀ ಗಜಾನನ ದೇವಸ್ಥಾನ, ಹಳೆ ಮಾರುಕಟ್ಟೆ, ದರಗಾ ಓಣಿ, ನಾಗರಕೆರೆ, ಮಾರೆಮ್ಮನ ಗುಡಿ, ಹಳೆ ಬಸ್ ನಿಲ್ದಾಣಕ್ಕೆ ಬಂದು ಗಜೇಂದ್ರಗಡದತ್ತ ಸಾಗಿತು.ಮೆರವಣಿಗೆಯಲ್ಲಿ ಕಲಾ ತಂಡಗಳು, ಕರಡಿ ಮಜಲು, ಎಲ್ಲ ಶಾಲೆಗಳ ವಿದ್ಯಾರ್ಥಿಗಳು, ಶಿಕ್ಷಕ ವೃಂದದವರು, ಪ.ಪಂ ಸದಸ್ಯರು, ಮುಖ್ಯಾಧಿಕಾರಿ ಮಹೇಶ ನಿಡಶೇಶಿ, ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಹೋಬಳಿ ಘಟಕದ ಅಧ್ಯಕ್ಷ ಎಂ.ವಿ ವೀರಾಪೂರ, ಜಿಲ್ಲಾ ಮತ್ತು ತಾಲೂಕು ಘಟಕಗಳ ಪದಾಧಿಕಾರಿಗಳು, ಸದಸ್ಯರು, ಬೀಚಿ ಬಳಗದ ಅಧ್ಯಕ್ಷ ಕೆ.ಎಸ್. ಕಳಕಣ್ಣವರ. ರವೀಂದ್ರನಾಥ ದೊಡ್ಡಮೇಟಿ, ನಿಂಗನಗೌಡ ಲಕ್ಕನಗೌಡ್ರ ಎಂ.ಎಸ್. ದಢಸೂರಮಠ, ಶಿಕ್ಷಕ ಎಂ.ಕೆ. ಬೇವಿನಕಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಎಸ್.ವಿ ಸಂಕನಗೌಡ್ರ. ರೋಣ.ಗದಗ