ರೈತರು ಹಾಗೂ ಊರಿನ ಮುಖಂಡರು ಮತ್ತು ಗ್ರಾಮಸ್ಥರು ಸೇರಿ – ಗ್ರಾಮ ಲೆಕ್ಕಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಕಲಕೇರಿ ಫೆ.24

ವಿಜಯಪುರ ಜಿಲ್ಲೆಯ ತಾಳಿಕೋಟೆ ತಾಲೂಕಿನ ಕಲಕೇರಿ ಗ್ರಾಮ ಲೆಕ್ಕಾಧಿಕಾರಿ ಅವರಿಗೆ ರೈತರ ಜಿ.ಆರ್.ಜಿ ತೊಗರಿ ಬೀಜ ಫರಿಹಾರದ ಹಾಗೂ ಬೆಳೆ ವಿಮೆ (ಭೀಮಾ) 2024/25 ಜಿ.ಆರ್.ಜಿ ಇನ್ಸೂರೆನ್ಸ್ ಕೊಡುವ ಕುರಿತು ಗ್ರಾಮ ಲೆಕ್ಕಾಧಿಕಾರಿಗಳಿಗೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೈನೆ ಸಂಘದ ತಾಲೂಕ ಅಧ್ಯಕ್ಷರಾದ ಶ್ರೀಶೈಲ್ ವಾಲಿಕಾರ ಇವರು ಈ ಸಂದರ್ಭದಲ್ಲಿ ಇನ್ಸೂರೆನ್ಸ್ ಆಫೀಸ್ ದವ್ರು ಅವರು ಗ್ರಾಮ ಪಂಚಾಯಿತಿಯಲ್ಲಿ ತಿಳಿಸುತ್ತಾರೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ನಮ್ಮನ್ನು ಎಲ್ಲಾ ರೈತರಿಗೆ ತಿಳಿಸಬೇಕು ಆಗ ಎಲ್ಲಾ ರೈತರು ಮುಖಂಡರು ಸೇರಿ ನಮ್ಮ ಹೊಲಗಳನ್ನು ಜಿ.ಪಿ.ಎಸ್ ಮಾಡಿಸಬಹುದು ಎಂದು ತಿಳಿಸಿದರು. ರೈತ ಸಂಘದ ಅಧ್ಯಕ್ಷರು ಮೈಬೂಬಬಾಷ ಮನಗೂಳಿ. ಹಾಗೂ ಸದ್ಯಸರು ಗ್ರಾಮದ ರೈತರು ಹಾಗೂ ಊರಿನ ಮುಖಂಡರಾದ ಅಶೋಕ ಭೋವಿ ಇವರು ಕಲಕೇರಿ ಗ್ರಾಮದಲ್ಲಿ ಗ್ರಾಮ ಲೆಕ್ಕಾಧಿಕಾರಿ ಯಾವ ರೈತರು ಏನೇ ಕೇಳ ಬೇಕಪ್ಪ ಅಂದರೆ ತಲಾಟಿಯವರಿಗೆ ಕೇಳಬೇಕು ಈ ಗ್ರಾಮದ ರೈತರಿಗೆ ನೀವೇ ಅಧಿಕಾರಿಗಳು ಹೀಗೆಲ್ಲಾ ಇದ್ದ ವೇಳೆ ನಮ್ಮ ರೈತರ ಯಾವ ಪರಿಹಾರಗಳು ಜಮಾ ಆಗಿಲ್ಲಂದ್ರೆ ಕೇಳುವುದು ನಿಮಗೆ ಅದನ್ನು ಮೇಲಾಧಿಕಾರಿಗಳಿಗೆ ತಿಳಿಸಿ ಆ ರೈತರಿಗೆ ಪರಿಹಾರ ಮುಟ್ಟುವಂತ ಮಾಡುವ ಕೆಲಸ ನಿಮ್ಮದು ಎಂದು ತಿಳಿಸಿದರು. ಪ್ರವೀಣ್ ಜಗಶೆಟ್ಟಿ. ವಿನೋದ್ ವಡಗೇರಿ. ರಮೇಶ್ ಹೆಂಡಿ ಇವರು ಬೆಳೆ ನಾಶ ಆಗಿದ್ದ ಬೀಜ ತೊಗೊಂಡವರು ಅರ್ಜಿಗಳನ್ನು ಸಲ್ಲಿಸಿ ಎಂದು ತಿಳಿಸಿದರು. ನಾವೆಲ್ಲಾ ರೈತರು ಅರ್ಜಿಗಳನ್ನು ತಾಳಿಕೋಟೆ ಕೃಷಿ ಅಧಿಕಾರಿಗಳಿಗೆ ಸಲ್ಲಿಸಿದ್ದೇವೆ ಆದರೆ ಜಿ.ಪಿ.ಎಸ್ ಮಾಡುವಂತವರು ತೊಗರಿ ಇದ್ದಿದ್ದು ಹತ್ತಿಯನ್ನು ಮಾಡಿದ್ದಾರೆ. ಹೀಗಾದಾಗ ರೈತನ ಪರಿಸ್ಥಿತಿ ಏನಾಗುತ್ತೆ ಎಂಬುದನ್ನು ಅಧಿಕಾರಿಗಳು ವಿಚಾರ ಮಾಡಬೇಕು ರೈತನ ಹೊಲಕ್ಕೆ ಬಂದು ಜಿ.ಪಿ.ಎಸ್ ಮಾಡುವ ಸಂದರ್ಭದಲ್ಲಿ ಆ ಹೊಲದಲ್ಲಿ ಯಾವ ಬೆಳೆ ಇದೆ ಎಂಬುದನ್ನು ಪರಿಶೀಲನೆ ಮಾಡಬೇಕು ಸರಿಯಾಗಿ ಜಿ.ಪಿ.ಎಸ್ ಮಾಡಿ ಮೇಲಾಧಿಕಾರಿಗಳಿಗೆ ಕಳಿಸಬೇಕು ಜಿ.ಪಿ.ಎಸ್ ಮಾಡುವರು ಸರಿಯಾಗಿ ಜಿ.ಪಿ.ಎಸ್ ಮಾಡದ ಕಾರಣ ಇನ್ಸೂರೆನ್ಸ್ ಹಣ ರೈತರಿಗೆ ತಲುಪಿಲ್ಲ ಎಂದು ಮತ್ತು ರೈತರ ಬೆಳೆ ಪರಿಹಾರ ಇನ್ನೂ ಬಂದಿಲ್ಲ ಆದ್ದರಿಂದ ಅಧಿಕಾರಿಗಳು ರೈತರಿಗೆ ಬರುವಂತ ಪರಿಹಾರ ಬೇಗನೆ ಹಾಕು ಅಂತ ಕೆಲಸಗಳನ್ನು ಮಾಡಬೇಕು ಎಂದು ಒಂದು ವೇಳೆ ಪರಿಹಾರ ಜಮಾ ಆಗದ ಕಾರಣ ಮುಂದಿನ ದಿನದಲ್ಲಿ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.

ಕಲಕೇರಿ ಗ್ರಾಮದ ಲೇಕ್ಕಾಧಿಕಾರಿಗಳು ಎಲ್ಲಾ ರೈತರು ನೀವು ಕೊಟ್ಟಂತ ಮನವಿಯನ್ನು ನಾನು ಮೇಲಾಧಿಕಾರಿಗಳಿಗೆ ಮುಟುಸುವಂತ ಕೆಲಸ ಮಾಡುತ್ತೇನೆ ರೈತರ ಪರಿಹಾರ ಮತ್ತು ಇನ್ಸೂರೆನ್ಸ್ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡಿ ರೈತರಿಗೆ ತಲುಪುವಂತ ಪರಿಹಾರ ಮುಟ್ಟುವಂತೆ ಮಾಡುತ್ತೇನೆ ಎಂದು ಅಧಿಕಾರಿಗಳು ತಿಳಿಸಿದರು. ಮಲ್ಲಿಕಾರ್ಜುನ್ ವಡ್ಡರ. ಮಲ್ಲು ತಳವಾರ. ಗಿರೀಶ್ ಹೆಗ್ಗಣದೊಡ್ಡಿ. ದಲಿತ ಮುಖಂಡರಾದ ಬಸವರಾಜ್ ಕಾಂಬಳೆ. ಈರಣ್ಣ ಆಲಗೂರ. ಬಸಪ್ಪ ಬೈಚಬಾಳ. ಮೊಮ್ಮದ್ ರಫಿ ಮಂದೇವಾಲ್. ಮಲ್ಕಪ್ ಗೌಡ ಸಾಸನೂರ್. ಸಾಹೇಬ್ ಗೌಡ ಸಾಸುನೂರ್. ಕುಮಾರ್ ಚಿಕ್ಕ ಮಠ್. ಚಂದ್ರಶೇಖರ್ ಸುಂಕದ. ಪುಂಡಲೀಕ್ ಚವಾಣ್. ಮೈಬೂಬ್ ವಲ್ಲಿಭಾವಿ. ಮಲ್ಲಯ್ಯ ಹಿರೇಮಠ್. ಇನ್ನೂ ಹಲವಾರು ರೈತರು ಹಾಗೂ ಊರಿನ ಮುಖಂಡರು ಗ್ರಾಮಸ್ಥರು ಸೇರಿ ಹಾಗೂ ರೈತರು ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಿದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ