ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಜಾರಿ ಗೊಳಿಸಲು – ಅಂದಪ್ಪ ಮಾದರ ಆಗ್ರಹ.
ಗದಗ ಮಾ.15

ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟಗಾರರ ಮೇಲಿನ ಪ್ರಕರಣವನ್ನ ಹಿಂಪಡೆದು ಒಳ ಮೀಸಲಾತಿ ಜಾರಿ ಗೊಳಿಸಿ ಸಾಮಾಜಿಕ ನ್ಯಾಯ ಒದಗಿಸಿ ಕೊಡಬೇಕೆಂದು ರೋಣ ತಾಲೂಕಾ ದಲಿತ ಯುವ ಮುಖಂಡ ಅಂದಪ್ಪ ಎಂ.ಮಾದರ ಆಗ್ರಹಿಸಿದರು.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಸಿ.ಎಂ ಸಿದ್ದರಾಮಯ್ಯನವರ ಬಜೆಟ್ ಮಂಡನೆ ವೇಳೆ ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಹೋರಾಟಗಾರರು ಘೋಷಣೆ ಕೂಗ ಬಾರದಿತ್ತು. ಕೂಗಿದ್ದು ತಪ್ಪೇ ಆದ್ರೆ ಏನ್ಮಾಡಣಾ ತಾಳ್ಮೆಯ ಕಟ್ಟೆ ಹೊಡೆದು ಹೋಗಿದೆ. ಈ ವಿಷಯವಾಗಿ ಕೆಲವರು ಪ್ರಾಣ ಕಳೆದು ಕೊಂಡಿದ್ದಾರೆ. ಇನ್ನೂ ಎಷ್ಟು ವರ್ಷ ಅಂತಾ ಕಾಯೋಣ. ಯಾಕೆ ಮಾದಿಗರ ಮಕ್ಕಳ್ಯಾರು ಒಳ ಮೀಸಲಾತಿ ಪಡೆದು ಎಲ್ಲರಂತಾಗುವದು ನಿಮಗ್ಯಾರಿಗೂ ಇಷ್ಟವಿಲ್ಲವೇ ಎಂದರು. ಕಳೆದ ಮೂರು ದಶಕಗಳಿಂದ ಮಾದಿಗರಿಗೆ ಒಳ ಮೀಸಲಾತಿ ಕೊಡ್ತೇವೆ. ಖಂಡೀತಾ ಕೊಡ್ತೇವೆ ಅಂತಾ ಮೂಗಿಗೆ ತುಪ್ಪಾ ಸವ್ರೀದರೆ ಹೊರತು ಯಾರೂ ಕೊಡುತ್ತಿಲ್ಲ. ಸಾಮಾಜಿಕ ನ್ಯಾಯದ ಹರಿಕಾರ. ಅಹಿಂದ ನಾಯಕ ಅಂತಾ ಬಿರುದು ಪಡೆದ ಸಿದ್ದರಾಮಯ್ಯರವರಂತೂ ಈ ಬಗ್ಗೆ ಬಾಯ್ಬಿಚ್ಚಿ ಮಾತಾಡ್ತಿಲ್ಲ. ಒಳ ಮೀಸಲಾತಿ ಕೊಡ್ತೀವಿ ಅಂತಾ ಎರೆಡು ಬಾರಿ ಅಧಿಕಾರ ಅನುಭವಿಸಿ ಮಾದಿಗ ಜನಾಂಗಕ್ಕೆ ಘೋರ ಅನ್ಯಾಯ ಮಾಡೀದ್ರು ಇನ್ನೂ ಕಾಂಗ್ರೆಸ್ ಸರ್ಕಾರದಲ್ಲಿರುವ ಮಾದಿಗ ಸಮಾಜದ ಸಚಿವರು ನಾಯಕರು ಹಲ್ಲು ಕಿತ್ತ ಹಾವಾಗಿದ್ದಾರೆ. ಅಧಿಕಾರದ ದುರಾಸೆಗಾಗಿ ಸಮಾಜದ ಏಳ್ಗೆಯನ್ನೇ ಬಲಿ ಕೊಡ್ತಾಯಿದ್ದಾರೆ. ಸಮಾಜ ಹಾಗೂ ಸಮಾಜದ ಮಕ್ಕಳ ಏಳ್ಗೆಗಾಗಿ ಧ್ವನಿ ಎತ್ತಿ ಇಲ್ಲದಿದ್ರೆ ಸಮಾಜದ ಹೆಸರೇಳಿಕೊಂಡು ಅಧಿಕಾರ ಅನುಭವಿಸಿರುವ ನಿಮಗೆ ಸಮಾಜವೇ ಒಂದು ದಿನಾ ಪಾಠ ಕಲಿಸ ಬೇಕಾಗುತ್ತದೆ.ಮತ್ತೊಂದೆಡೆ ಅಂಬೇಡ್ಕರ್ ಅವರ ಆಶಯದಂತೆ ಬದುಕುತ್ತಿದ್ದೇವೆ ಅಂತಾ ಜಂಬ ಕೊಚ್ಚಿ ಕೊಳ್ಳುತ್ತಿರುವ ಸಹೋದರ ಸಮುದಾಯದ ಸಚಿವರು ನಾಯಕರು ಮಾದಿಗರನ್ನೇ ದಿನೇ ದಿನೇ ಶೋಷಣೆ ಮಾಡ್ತಿದ್ದಾರೆ. ಒಳ ಮೀಸಲಾತಿ ಜಾರಿಗೆ ವಿರೋಧಿಸುತ್ತಿರುವುದು ಅಂಬೇಡ್ಕರ್ ಆಶಯಗಳಿಗೆ ವಿರುದ್ದವಾಗಿರುವದು. ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಒಳ ಮೀಸಲಾತಿಯನ್ನ ಜಾರಿ ಗೊಳಿಸಿ ಮಾದಿಗ ಸಮುದಾಯಕ್ಕೆ ನ್ಯಾಯ ಒದಗಿಸಿ ಕೊಡಿ. ಹೌದು ಅಷ್ಟಕ್ಕೂ ಒಳ ಮೀಸಲಾತಿ ಹೋರಾಟಗಾರರು ನನ್ನ ಸಹೋದರರು ಕೇಳಿದ್ದು ಸಾಮಾಜಿಕ ನ್ಯಾಯದ ಹಕ್ಕನ್ನು ಯಾರದ್ದೋ ಮನೆಯ ಭಿಕ್ಷೆಯನ್ನಲ್ಲ. ಅಂತಹವರನ್ನ ಅಪರಾಧಿಗಳಂತೆ ಮಾರ್ಷಲ್ಸ್‌ಗಳು ಕರೆದು ಕೊಂಡು ಹೋಗಿದ್ದು ಖಂಡನೀಯ. ಇದಕ್ಕೆ ತಕ್ಕ ಪಾಠ ಕಲಿಸುತ್ತೇವೆ ಎಂದು ಎಚ್ಚರಿಸಿದರು.