ವಿದ್ಯುತ್ ಸ್ಪರ್ಶ, ಮೃತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ – ಶಾಸಕರಿಂದ ವಿತರಣೆ.
ಕೂಡ್ಲಿಗಿ ಮಾ .18




ಕಳೆದ ಆರೇಳು ತಿಂಗಳ ಹಿಂದೆ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟ ದುರ್ದೈವಿ ಕುಟುಂಬಕ್ಕೆ ವಿದ್ಯುತ್ ಸರಬರಾಜು ಇಲಾಖೆಯಿಂದ 5 ಲಕ್ಷರೂ ಪರಿಹಾರ ಧನದ ಆದೇಶ ಪ್ರತಿ ಬಂದಿದ್ದು ಕೂಡ್ಲಿಗಿ ಶಾಸಕ ಡಾ, ಶ್ರೀನಿವಾಸ ಎನ್.ಟಿ ಅವರು ಮೃತನ ಮನೆಗೆ ಭೇಟಿ ನೀಡಿ ಆತನ ಕುಟುಂಬಕ್ಕೆ ಪರಿಹಾರದ ಆದೇಶ ಪ್ರತಿ ನೀಡಿದರು.ಕೂಡ್ಲಿಗಿ ಪಟ್ಟಣದ ಪಿ.ಸೋಮಣ್ಣ ಎಂಬಾತನು ಕಳೆದ ಆರು ತಿಂಗಳ ಹಿಂದೆ ಆಕಸ್ಮಿಕ ವಿದ್ಯುತ್ ಸ್ಪರ್ಶದಿಂದ ಮೃತಪಟ್ಟಿದ್ದರು ಮೃತನಿಗೆ ವಿದ್ಯುತ್ ಸರಬರಾಜು ಇಲಾಖೆಯಿಂದ 5 ಲಕ್ಷರೂ ಪರಿಹಾರ ನೀಡಲಾಗುತ್ತಿದ್ದು ಅದರ ಆದೇಶ ಪ್ರತಿಯನ್ನು ಕೂಡ್ಲಿಗಿ ಶಾಸಕರು ಮೃತ ಸೋಮಣ್ಣನ ಕುಟುಂಬಕ್ಕೆ ತಾವೇ ಖುದ್ದಾಗಿ ಭೇಟಿ ನೀಡಿ ಪರಿಹಾರದ ಆದೇಶದ ಪ್ರತಿಯನ್ನು ನೀಡಿದ ಶಾಸಕ ಡಾ, ಶ್ರೀನಿವಾಸ ಮಾತನಾಡಿ ಜೀವದ ಬೆಲೆ ಕಟ್ಟಲಾಗದು ದುಡಿಯುವ ಮಗನನ್ನು ಕಳೆದು ಕೊಂಡ ದುಃಖವಾಗಿದೆ. ಸಂದರ್ಭದಲ್ಲಿ ಪ.ಪಂ ಅಧ್ಯಕ್ಷ ಶಿವಪ್ಪನಾಯಕ ಪ.ಪಂ ಸದಸ್ಯ ಚಂದ್ರು, ಶಾಮಿಯಾನ ಚಂದ್ರಣ್ಣ ಗ್ರಾರಂಟಿ ಯೋಜನೆಯ ತಾಲೂಕು ಅಧ್ಯಕ್ಷ ಜಿಲಾನ್, ಸಿರಿಬಿ ಮಂಜು, ಈಶಪ್ಪ, ಗುರಿಕಾರ ರಾಘವೇಂದ್ರ ಸೇರಿದಂತೆ ಇತರರು ಹಾಗೂ ಮುಖಂಡರು ಮತ್ತು ಇತರರು ಉಪಸ್ಥಿತರಿದ್ದರು.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ

