ಶ್ರೀ ಶರಣ ಬಸವೇಶ್ವರ ಜಾತ್ರಾ ಮಹೋತ್ಸವದ – ಅಂಗವಾಗಿ ಕುಂಭ ಮೆರವಣಿಗೆ.
ಇಳಕಲ್ಲ ಮಾ.18


ತಾಲೂಕಿನ ವಾರ್ಡನಂ 2. ರ ಕುಲಕರ್ಣಿ ಪೇಟೆಯಶ್ರೀ ಶರಣ ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವದ ಅಂಗವಾಗಿ ಮಾ 18. ರಂದು ಶ್ರೀ ಶರಣ ಬಸವೇಶ್ವರ ಭಾವಚಿತ್ರ ಜೊತೆಗೆ 101 ಕುಂಭ ಮೆರವಣಿಗೆಯು ದೇವಸ್ಥಾನದಿಂದ ಸಾಗಿ ಬಂದು.

ನಾರಾಯಣ ಚಿತ್ರಮಂದಿರ ಮಹಾಂತೇಶ ಚಿತ್ರ ಮಂದಿರ ಪತ್ತಾರ ಆಸ್ಪತ್ರೆ, ಗ್ರಾಮ ಚೌಡಿ, ಗಾಂಧಿ ವೃತ್ತ, ಬಜಾರ ಬಸವೇಶ್ವರ ದೇವಸ್ಥಾನ, ಬನಶಂಕರಿ ದೇವಸ್ಥಾನ, ದನದ ದವಾಖಾನೆ, ವಿಜಯ ಮಹಾಂತೇಶ ಬ್ಯಾಂಕ, ಶ್ಯಾವಿ ಆಸ್ಪತ್ರೆ ಮಾರ್ಗವಾಗಿ ದೇವಸ್ಥಾನಕ್ಕೆ ಬಂದು ತಲುಪಿತು. ಬಿಸಿಲನ್ನು ಲೆಕ್ಕಿಸದೇ ಮಹಿಳೆಯರು ಕುಂಭ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಪ್ರತಾಪ್.ವಾಯ್.ಕಿಳ್ಳಿ.ಇಲಕಲ್ಲ

