ಸುಂಗಠಾಣ ಗ್ರಾ.ಪಂ ಚುನಾವಣೆಗೆ – ಶರಣಗೌಡ ಬಗಲೂರ್ ಅವಿರೋಧ ಆಯ್ಕೆ.
ಸುಂಗಠಾಣ ಮಾ.18

ಸಿಂದಗಿ ತಾಲೂಕಿನ ಸುಂಗಠಾಣ ಗ್ರಾಮ ಪಂಚಾಯಿತಿಗೆ ನೂತನ ಅಧ್ಯಕ್ಷರಾಗಿ ಶರಣಗೌಡ ರುದ್ರಗೌಡ ಬಗಲೂರು, ಹಾಗೂ ಉಪಾಧ್ಯಕ್ಷರಾಗಿ ಅಮರಯ್ಯ ಶರಣಯ್ಯ ಹಿರೇಮಠ್ ಆಗಿರೋಧವಾಗಿ ಆಯ್ಕೆ ಯಾಗಿದ್ದಾರೆ.ಸಿಂದಗಿ ತಾಲೂಕ ಕಾರ್ಯ ನಿರ್ವಾಹಕ ಅಧಿಕಾರಿ ರಾಮು.ಜಿ ಅಗ್ನಿ ರವರ ಸಮ್ಮುಖದಲ್ಲಿ ಚುನಾವಣೆ ಪ್ರಕ್ರಿಯೆ ನಡೆಯಿತು. ಒಟ್ಟು 12 ಗ್ರಾಮ ಪಂಚಾಯತಿ ಸದಸ್ಯರು ಇದ್ದು ಇದರಲ್ಲಿ 9 ಜನ ಸದಸ್ಯರು ಹಾಜರಿರುವುದಾಗಿ ಅಧಿಕಾರಿಗಳು ತಿಳಿಸಿದರು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬಸವರಾಜ್ ಶಹಾಪುರ ಭಾಗವಹಿಸಿದ್ದರು ನಂತರ ಮಾತನಾಡಿದ ನೂತನ ಗ್ರಾಮ ಪಂಚಾಯತಿ ಅಧ್ಯಕ್ಷರು ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ ಎಂದು ಹಾಗೂ ನನ್ನನ್ನು ಎಲ್ಲಾ ಸದಸ್ಯರು ಒಮ್ಮತದಿಂದ ಅವಿರೋಧ ಆಯ್ಕೆ ಮಾಡಿದ್ದಕ್ಕೆ ಕೃತಜ್ಞತೆ ತಿಳಿಸಿದರು. ಗ್ರಾಮಸ್ಥರಾದ ಶರಣಗೌಡ ಅವಳಗಿ. ದುಂಡಪ್ಪ ಗಡಗಿ. ಸಿದ್ದನಗೌಡ ಬಿರಾದಾರ್, ಕುಮಾರ್ ಗೌಡ ಪಾಟೀಲ್, ದೊಡ್ಡಪ್ಪ ಗಡಿಗಿ, ಮಲ್ಲನಗೌಡ ಕುರನಾಳ, ಮಡಿವಾಳಪ್ಪ ಗೌಡ ಪಾಟೀಲ್, ಸಿದ್ದರಾಮ್ ದ್ಯಾಮಗೌಡ, ಭಗವಂತರಾಯ ಬಾಗಲೂರ್, ನಾಗಣ್ಣ ಸೌಕಾರ್ ಮಜ್ಜಿಗಿ, ಬಸವಂತರಾಯ ಮನ್ನಾಪುರ್, ಮಲ್ಲಿಕ ಹದ್ನೂರ್, ವಿಜಯೋತ್ಸವದಲ್ಲಿ ಪಾಲ್ಗೊಂಡಿದ್ದರು. ಸಿಂದಗಿಯ ಪೊಲೀಸ್ ಸಿಬ್ಬಂದಿ ಚುನಾವಣೆಯಲ್ಲಿ ಯಾವುದೇ ತರಹದ ಅಹಿತಕರ ಘಟನೆ ಆಗದಂತೆ ನೋಡಿ ಕೊಂಡರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ