ಬಿಂಜಲಭಾವಿ ಗ್ರಾಮದ ಗ್ರಾಮ ಆಡಳಿತ ಅಧಿಕಾರಿಗಳು ಇವರನ್ನು – ವರ್ಗಾವಣೆ ಮಾಡದಿದ್ದಲ್ಲಿ ರೈತ ಸಂಘದಿಂದ ಉಗ್ರ ಹೋರಾಟದ ಎಚ್ಚರಿಕೆ.
ತಾಳಿಕೋಟೆ ಮಾ.19

ತಾಳಿಕೋಟೆ ತಾಲೂಕಿನ ಬಿಂಜಲಭಾವಿ ಗ್ರಾಮದ ಗ್ರಾಮಸ್ಥರಾಗಿದ್ದು ಬಿಂಜಲಭಾವಿ ಗ್ರಾಮದ ಗ್ರಾಮ ಆಡಳಿತ ಅಧಿಕಾರಿಗಳು ರೈತರಿಗೆ ಮತ್ತು ರೈತರೆಲ್ಲರಿಗೂ ರೈತ ಸಂಘದಿಂದ ಸಭೆ ಸೇರಿದಾಗ ಈ ಕೆಳಗಿನಂತೆ ಗ್ರಾಮ ಆಡಳಿತಾಧಿಕಾರಿಗಳಿಗೆ ದೂರು ನೀಡಿರುತ್ತಾರೆ. ವಾರಸಾ ವಹಿವಾಟು, ವಾ, ಹಕ್ಕು ಬಿಡುಗಡೆ, ಹಕ್ಕು ದಾಖಲೆ, ಪೋಡಿ ಅರ್ಜಿ, ಇವುಗಳಿಗೆ ಗ್ರಾಮ ಆಡಳಿತ ಅಧಿಕಾರಿ ಹಣದ ಆಮಿಸ್ಯ ಹೊಡ್ಡಿ ರೈತರಲ್ಲಿ 40,000/- ರೂಪಾಯಿದಿಂದ 1.00.000/- ಲಕ್ಷದ ವರೆಗೆ ಹಣ ಕೇಳುತ್ತಾರೆ. ಮತ್ತು ಗ್ರಾಮದ ಪರಿಹಾರ ವಿತರಣೆ ಸಮಯದಲ್ಲಿ ರೈತರಲ್ಲಿ ಹಣದ ಬೇಡಿಕೆ ಇಡುತ್ತಾರೆ. ಜಮೀನದ ಬೆಳೆ ಸಮಿಕ್ಷೆಗೆ ಪ್ರತಿ ಖಾತೆಗೆ 100 ರೂ. ನಂತೆ ಹಣ ಕೇಳುತ್ತಾರೆ.

ಬಿಂಜಲಭಾವಿ ಗ್ರಾಮಕ್ಕೆ 10 ವರ್ಷದಿಂದ ಒಂದು ದಿನವೂ ಬಂದಿರುವುದಿಲ್ಲ. ರೈತರು ಕೇಳಿದರೆ ತಾಳಿಕೋಟೆಗೆ ಬನ್ನಿ ಅಂತಾ ಹೇಳುತ್ತಾರೆ ಇವರನ್ನು ಬಿಂಜಲಭಾವಿ ಗ್ರಾಮದಿಂದ ಬೇರೆ ಕಡೆ ವರ್ಗಾವಣೆ ಮಾಡಿ ರೈತರಿಗೆ ಸ್ಪಂದಿಸು ಗ್ರಾಮ ಲೆಕ್ಕಾಧಿಕಾರಿಗಳನ್ನು ನೇಮಕ ಮಾಡಿ ಇವರನ್ನು ವರ್ಗಾವಣೆ ಮಾಡಿ. ಒಂದು ವೇಳೆ ಇವರನ್ನು ವರ್ಗಾವಣೆ ಮಾಡದೇ ಇದ್ದರೆ ಜಿಲ್ಲಾ ಅಧಿಕಾರಿಗಳ ಕಾರ್ಯಲಯ ಮುಂದೆ ಸಮಸ್ತ ಬಿಂಜಲಭಾವಿ ಗ್ರಾಮದ ರೈತರು ಉಗ್ರವಾದ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಷ್ಟ್ರೀಯ ರೈತ ಸಂಘ ಜಿಲ್ಲಾ ಮಹಿಳಾ ಅಧ್ಯಕ್ಷರು ಶ್ರೀಮತಿ ರೇಣುಕಾ ಶಾಂತಗೌಡ ಪಾಟೀಲ್.
ಮೈಬೂಬಬಾಷ ಮನಗೂಳಿ ಜಿಲ್ಲಾ ಉಪಾಧ್ಯಕ್ಷರು ತಾಳಿಕೋಟೆ ತಾಲೂಕಾ ಅಧ್ಯಕ್ಷರು ಅಶೋಕಗೌಡ ಬ ಪಾಟೀಲ್ ತಾಳಿಕೋಟೆ ತಾಲೂಕಾ ಯುವ ಮೋರ್ಚಾ ಅಧ್ಯಕ್ಷರು ಗೌಡಪ್ಪಗೌಡ ಬ ಹಳಿಮನಿ ಬಿಂಜಲಬಾವಿ ಗ್ರಾಮ ಘಟಕ ಅಧ್ಯಕ್ಷರು ವಿಜಯಕುಮಾರ್ ಉಕ್ಕಲಿ ಅಸ್ಕಿ ಗ್ರಾಮ ಘಟಕ ಅಧ್ಯಕ್ಷರು ಸಂಗನಗೌಡ ಸಾ ಬಿರಾದಾರ್ ಮಲ್ಲಪ್ಪ ಅಂಗಡಿ ಮಹಾದೇವ ಚಟ್ನಳ್ಳಿಶ್ರೀಶೈಲ್ ಉಕ್ಕಲಿ ಸದ್ಯಸರು, ಶರಣಗೌಡ ಕೊಣ್ಯಳ ಯಂಕಪ್ಪ ಗುತ್ಯಾಲ್, ವರ್ಗಾವಣೆ ಮಾಡದಿದ್ದಲ್ಲಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ ಎಂದು ವರದಿಯಾಗಿದೆ.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಮೈಬೂಬಬಾಷ.ಮನಗೂಳಿ.ತಾಳಿಕೋಟೆ