ನಿಧನ ವಾರ್ತೆ : ಗಿಡ್ಡ ಉಚ್ಚಿಂಗೆಪ್ಪನವರ ಪಾಪಯ್ಯ – ತೀವ್ರ ಅನಾರೋಗ್ಯದಿಂದ ನಿಧನ.
ಕೂಡ್ಲಿಗಿ ಮಾ.19

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಪಟ್ಟಣದ 14 ನೇ. ವಾರ್ಡಿನ ಡಾಕ್ಟರ್, ಬಿ.ಆರ್ ಅಂಬೇಡ್ಕರ್ ನಗರದ ನಿವಾಸಿಗಳಾದ ಗಿಡ್ಡ ಹುಚ್ಚಿಂಗೆಪ್ಪನವರ ಪಾಪಯ್ಯ (80) ಬುಧವಾರ ರಂದು ಸಾಯಂಕಾಲ 4 ಘಂಟೆಗೆ ಸ್ವ ಗೃಹದಲ್ಲಿ ಸುಮಾರು ಆರು ತಿಂಗಳಗಳಿಂದ ಹಾಸಿಗೆಯಲ್ಲಿ ಅನಾರೋಗ್ಯ ದಿಂದ ಬಳಲುತ್ತಿದ್ದು ಈ ದಿನ ನಿಧನರಾಗಿದ್ದಾರೆ. ಅವರು ಗಿಡ್ಡ ಉಚ್ಚಿಗೆಂಪ್ಪನವರ ಪಾಪಯ್ಯ ಇವರಿಗೆ ಧರ್ಮ ಪತ್ನಿ ಉಚ್ಚೆಂಗೆಮ್ಮ ಇದ್ದು ಹಾಗೂ 3 ಜನ ಗಂಡು ಮಕ್ಕಳು ಹಾಗೂ 4 ಜನ ಹೆಣ್ಣು ಮಕ್ಕಳಿದ್ದು ಮೊಮ್ಮಕ್ಕಳು ಸೇರಿದಂತೆ. ಅಳಿಯಂದಿರು, ತುಂಬು ಕುಟುಂಬವನ್ನು ಅಪಾರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಅಂತ್ಯಕ್ರಿಯೆ- ಮಾರ್ಚ್ -20 ಗುರುವಾರ ರಂದು 10.30 ಘಂಟೆಗೆ ಕೂಡ್ಲಿಗಿ ಪಟ್ಟಣದ ಕಡೆಯ ಅಂಚಿನಲ್ಲಿರುವ ಶ್ರೀ ರಾಜೀವ್ ಗಾಂಧಿ ನಗರದ ಪಕ್ಕದಲ್ಲಿ ಬರುವ ಶಾಂತಿ ವನದಲ್ಲಿ ಅಂತ್ಯಕ್ರಿಯೆ ನೆರವೇರಿಸಲಾಗುವುದು. ಸಂತಾಪ- ಕೂಡ್ಲಿಗಿ ಪಟ್ಟಣದ ಡಾಕ್ಟರ್, ಬಿ.ಆರ್ ಅಂಬೇಡ್ಕರ್ ಸಂಘ ಹಾಗೂ ಮಾದಿಗ ದಂಡೋರ ಸಂಘ ಹಾಗೂ ದಲಿತ ಸಮುದಾಯದ ಮುಖಂಡರುಗಳು, ಸಂಬಂಧಿಕರು ಹಾಗೂ ವಿವಿಧ ಸಮುದಾಯದವರು ಪಟ್ಟಣದ ಸಮಸ್ತ ಗ್ರಾಮಸ್ಥರು. ಸೇರಿದಂತೆ ವಿವಿಧ ಸಮುದಾಯದವರು. ತಾಲೂಕಿನ ಎಲ್ಲಾ ದಲಿತ ಪರ ಸಂಘಟನೆಗಳು ಸೇರಿದಂತೆ ರೈತರು ಕಾರ್ಮಿಕರು ಮಹಿಳೆಯರ ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು. ಪಟ್ಟಣ ಪಂಚಾಯಿತಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಸರ್ವ ಸದಸ್ಯರು. ಶಾಸಕರು ಮೊದಲ್ಗೊಂಡು ತಾಲೂಕಿನ ವಿವಿಧ ಜನ ಪ್ರತಿನಿಧಿಗಳು ಹಾಗೂ ಗಣ್ಯರು. ಕೂಡ್ಲಿಗಿ ಪಟ್ಟಣದ ಪ್ರಮುಖ ನಾಗರೀಕರು, ಕೂಡ್ಲಿಗಿ ಪಟ್ಟಣ ಸೇರಿದಂತೆ ನೆರೆ ಹೊರೆ ಸಂಬಂಧಿಕರು ಗ್ರಾಮಸ್ಥರು. ಇವರ ಅಗಲಿಕೆಗೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ರಾಘವೇಂದ್ರ.ಸಾಲುಮನೆ.ಕೂಡ್ಲಿಗಿ