ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕಣ್ಣಿನ ಉಚಿತ ತಪಾಸಣೆ – ಶಿಬಿರ ಜರುಗಿತು.
ಯಲಗೋಡ ಮಾ.07

ದೇವರ ಹಿಪ್ಪರಗಿ ತಾಲ್ಲೂಕಿನ ಯಲಗೋಡ ಗ್ರಾಮದಲ್ಲಿ ಶುಕ್ರವಾರ ದಂದು ಬನಶಂಕರಿ ನೇತ್ರಾಲಯ ವಿಜಯಪುರ ಇವರ ಆಸ್ಪತ್ರೆಯ ವತಿಯಿಂದ ಉಚಿತ ಕಣ್ಣಿನ ತಪಾಸಣೆ ಶಿಬಿರಯನ್ನು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು. ಈ ಶಿಬಿರದ ನೇತೃತ್ವ ವಹಿಸಿದ ಖ್ಯಾತ ತಜ್ಞರಾದ. ಡಾ, ರಾಘವೇಂದ್ರ ಇಜೇರಿ ಯವರು ಈ ಶಿಬಿರ ಉದ್ಘಾಟನೆ ಮಾಡಿದರು.
ಅವರಿಗೆ ಗ್ರಾಮದ ವತಿಯಿಂದ ಸನ್ಮಾನ ಮಾಡಿದರು. ಹಾಗೂ ಕಾರ್ಯಕ್ರಮದ ಮುಖ್ಯ ಅಥಿತಿಗಳಾದ ಡಾ, ಮುತ್ತು ಬ್ಯಾಕೋಡ ಶಾಲೆಯ ಮುಖ್ಯ ಗುರುಗಳಾದ ಮಲ್ಲಿಕಾರ್ಜುನ ದೊಡ್ಡಮನಿ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ಮಾಂತೇಶ ಕೂಟನೂರ ಪತ್ರಕರ್ತರಾದ ಭೀಮಪ್ಪ ಹಚ್ಯಾಳ.
ಈ ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಹುಯೋಗಿ ತಳ್ಳೋಳ್ಳಿ, ಡಾ, ಚಿದಾನಂದ ಶಾಸ್ತ್ರೀಯವರು, ಹಾಗೂ ಈ ಶಿಬಿರಕ್ಕೆ ಯಲಗೋಡ, ವಂದಾಲ ಕದರಪೂರ ಗ್ರಾಮಗಳು, ಸಾರ್ವಜನಿಕರು ಈ ಕಣ್ಣಿನ ಉಚಿತ ತಪಾಸಣೆ ಶಿಬಿರಕ್ಕೆ ಭಾಗವಹಿಸಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಭೀಮಪ್ಪ.ಹಚ್ಯಾಳ.ದೇವರ ಹಿಪ್ಪರಗಿ