ಜ್ಞಾನ ಸಂಪಾದನೆ ಯಿಂದ ಮಾತ್ರ ಉನ್ನತ ಹುದ್ದೆಗೆ ಏರಲು ಸಾಧ್ಯ – ಕೊಟ್ಟೂರು ತಹಶೀಲ್ದಾರ್ ಜಿ.ಕೆ ಅಂಬರೀಶ್.
ಕೆ.ಹೊಸಹಳ್ಳಿ ಮಾ.22

ವಿಜಯನಗರ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೆ.ಹೊಸಹಳ್ಳಿ ಬಿ.ಸಿ.ಎಂ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯದಲ್ಲಿ ಬುಧವಾರ ಆಯೋಜಿಸಿದ್ದ ಶಾರದಾ ಪೂಜೆ ಹಾಗೂ ಬೀಳ್ಕೊಡುಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ನೆರವೇರಿಸಿ ಮಾತನಾಡುತ್ತಾ ವಿದ್ಯಾರ್ಥಿಗಳು ಜ್ಞಾನ ಸಂಪಾದನೆಯಿಂದ ಮಾತ್ರ ಉನ್ನತ ಹುದ್ದೆಗೆ ಏರಲು ಸಾಧ್ಯ, ಸರ್ಕಾರಗಳು ಹಾಸ್ಟೆಲ್ ವಿದ್ಯಾರ್ಥಿಗಳು ಹೆಚ್ಚಿನ ಸೌಲಭ್ಯವನ್ನು ಕಲ್ಪಿಸಿದ್ದು. ಬಡವರ ಮಕ್ಕಳಿಗೆ ಇಲ್ಲಿನ ವಸತಿ ಊಟದ ಜೊತೆಗೆ ಕಲಿಕೆಯು ಸಿಗಲಿದೆ. ಮನೆಯಲ್ಲಿ ತಂದೆ ತಾಯಿ ತಮ್ಮ ಶಿಕ್ಷಣ ಕಲಿಕೆಗೆ ಹೆಚ್ಚು ಹೊತ್ತು ನೀಡುವುದರಿಂದ ಅವರ ಹೆಸರು ಬೆಳಗುವ ನಿಟ್ಟಿನಲ್ಲಿ ನಿಮ್ಮ ಭವಿಷ್ಯ ರೂಪಿಸಿಕೊಳ್ಳಿ ಎಂದರು, ನಾಡಿನ ಅನೇಕ ದಾರ್ಶನಿಕರ ಜೀವನ ಚರಿತ್ರೆಗಳನ್ನು ಓದುವ ಹವ್ಯಾಸ ರೂಢಿಸಿ ಕೊಳ್ಳಬೇಕು. ಮಾತೃ ಹೃದಯದೊಂದಿಗೆ ಹಾಸ್ಟೆಲ್ ನಿಲಯ ಮೇಲ್ವಿಚಾರಕರು ವಿದ್ಯಾರ್ಥಿಗಳ ಕಾಳಜಿ ವಹಿಸುತ್ತಿದ್ದಾರೆ. ಇಂತಹ ಹಾಸ್ಟೆಲ್ ನಲ್ಲಿ ಕಲಿತ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯವನ್ನು ಬೆಳಗಲಿ ಎಂದರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿಗಳಾದ ರಾಮಚಂದ್ರಪ್ಪ ಮಾತನಾಡಿ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯುವ ಮೂಲಕ ಕಲಿಕಾ ಶಾಲೆಗೆ ಮತ್ತು ಹಾಸ್ಟೆಲ್ ಗ್ರಾಮಕ್ಕೆ ಕೀರ್ತಿ ತರಬೇಕು. ಬಡ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ದೇವಸ್ಥಾನ ವಿದ್ದಂತೆ ಊಟ ವಸತಿ ಹಾಗೂ ಕಲಿಕೆಗೆ ಪೂರಕವಾಗುವ ಸೌಲಭ್ಯವನ್ನು ಸರ್ಕಾರ ನೀಡುವ ಮೂಲಕ ಬಡ ವಿದ್ಯಾರ್ಥಿಗಳ ಭವಿಷ್ಯಕ್ಕೆ ಸಹಕಾರಿಯಾಗುತ್ತಿದೆ ಇಂತಹ ಹಾಸ್ಟೆಲ್ ಸೌಲಭ್ಯಗಳನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿ ಕೊಳ್ಳಬೇಕು ಎಂದು ತಿಳಿಸಿದರು. ಇದೇ ಸಂದರ್ಭದಲ್ಲಿ ಹೊಸಹಳ್ಳಿ ಗ್ರಾಮ ಪಂಚಾಯಿತಿಯ ಅಧ್ಯಕ್ಷರಾದ ಕೆ.ಜಿ ಸಿದ್ದನಗೌಡ, ಉಪಾಧ್ಯಕ್ಷರಾದ ಲಕ್ಷ್ಮಿ ರಜನಿಕಾಂತ್, ಸದಸ್ಯರಾದ ಪಿತಾಂಬರ. ಹೊಸಹಳ್ಳಿ ಬಿ.ಸಿ.ಎಂ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿಗಳಿಗೆ ಮೇಲ್ವಿಚಾರಕರಾದ ರಾಚಪ್ಪ, ಕುಮಾರಸ್ವಾಮಿ, ಅಂಜಿನಪ್ಪ, ನಿಂಗಣ್ಣ, ಪ್ರವೀಣ್ ಕುಮಾರ್, ಮನೋಹರ, ಶ್ವೇತ, ಪತ್ರಕರ್ತರಾದ ದಯಾನಂದ ಸಜ್ಜನ್, ಬಸವರಾಜ ರಂಗನಾಥನಹಳ್ಳಿ, ಪ್ರಕಾಶ, ಕಿರಣ್, ನೀರ್ ಗಂಟಿ ತಿಪ್ಪೇಸ್ವಾಮಿ,ಸೇರಿದಂತೆ ಇತರರಿದ್ದರು. ಗಣ್ಯರು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ. ಹೊಸಹಳ್ಳಿ