ಡಾ, ಶಿವಣ್ಣ.ಜಿ. “ಕಲಾ ಸೇವಾರತ್ನ ಪ್ರಶಸ್ತಿ” ನೀಡಿ – ಗೌರವ ಸನ್ಮಾನ.
ಬೆಂಗಳೂರು ಮಾ.24





ಪುನೀತ್ ರಾಜಕುಮಾರ್ ರವರ 50 ನೇ. ಹುಟ್ಟು ಹಬ್ಬದ ನಿಮಿತ್ತ ಕನ್ನಡ ಫಿಲಂ ಚೇಂಬರ್ ಬೆಂಗಳೂರು ಇವರು ಆಯೋಜಿಸಿದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಡಾ, ಶಿವಣ್ಣ.ಜಿ ಇವರಿಗೆ “ಕಲಾ ಸೇವಾರತ್ನ ಪ್ರಶಸ್ತಿ” ನೀಡಿ ಗೌರವಿಸಲಾಯಿತು. ಇವರನ್ನು ಸಾಹಿತ್ಯ ಕ್ಷೇತ್ರದಲ್ಲಿ ಮತ್ತು ಸಮಾಜ ಸೇವೆಯಲ್ಲಿ ಇವರ ಸಾಧನೆಯನ್ನು ಮೆಚ್ಚಿ ರಾಜ್ಯ ಮಟ್ಟದ ಪ್ರಶಸ್ತಿ ನೀಡಿ ಮೈಸೂರು ಪೇಟ, ಹಾರ, ಶಾಲು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.

ಇದೇ ವೇಳೆ ಚೇತನ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರು, ಸರ್ವ ಸದಸ್ಯರು, ಕಾವ್ಯಶ್ರೀ ಚಾರಿಟ್ರಬಲ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷರು, ಸರ್ವ ಸದಸ್ಯರು, ವಿಶ್ವಾಸ್ ಫೌಂಡೇಶನ್ ಹುಬ್ಬಳ್ಳಿ ಸಂಸ್ಥಾಪಕ ಅಧ್ಯಕ್ಷರು ಮತ್ತು ಸರ್ವ ಸದಸ್ಯರು, ಸಾಹಿತ್ಯ ಅಭಿಮಾನಿಗಳು, ಕನ್ನಡ ಮನಸ್ಸುಗಳು, ಅಭಿಮಾನಿಗಳು, ಹಿತೈಷಿಗಳು, ಹರ್ಷ ವ್ಯಕ್ತಪಡಿಸಿದ್ದಾರೆ.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಕೆ.ಎಸ್ವೀರೇಶ್.ಕೆ.ಹೊಸಹಳ್ಳಿ