ಪುನೀತ್ ರಾಜಕುಮಾರ್ ಇಂದಿಗೂ ಜೀವಂತ – ಡಾ, ರಮೇಶ್. ಮಹಾದೇವಪ್ಪನವರ್.
ಧಾರವಾಡ ಮಾ.24

ಪುನೀತ್ ರಾಜಕುಮಾರ್ ಅವರು ಎಂದಿಗೂ ಜೀವಂತ ಬಾಲ್ಯದಿಂದಲೂ ಅನೇಕ ಬಾಲ ನಟನಾಗಿ, ನಾಯಕ ನಟನಾಗಿ, ಅನೇಕ ಚಲನ ಚಿತ್ರಗಳನ್ನು ನಟಿಸಿದ್ದು ಇಂದಿಗೂ ಜೀವಂತವಾಗಿದೆ.ಪುನೀತ್ ರಾಜಕುಮಾರ್ ಅವರ ಅತ್ಯಂತ ಕಡಿಮೆ ಸಮಯದಲ್ಲಿ ಈ ನಾಡಿಗೆ ತನ್ನದೇ ಆದ ಕೊಡುಗೆಯನ್ನು ಕೊಟ್ಟಿದ್ದಾರೆ ಎಂದು ಡಾಕ್ಟರ್, ರಮೇಶ್ ಮಹದೇವಪ್ಪನವರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ಸೋಶಿಯಲ್ ಕ್ಲಬ್ ಧಾರವಾಡ ವಿಶ್ವಾಸ ಫೌಂಡೇಶನ್ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಅಪ್ಪು ಉತ್ಸವ ಪುನೀತ್ ರಾಜಕುಮಾರ್ ಸ್ಪೂರ್ತಿ ಪ್ರಶಸ್ತಿ ಹಾಗೂ ಮಹಿಳಾ ದಿನಾಚರಣೆ ಅಂಗವಾಗಿ ಸುಂದರ ರಾಷ್ಟ್ರೀಯ ಪ್ರಶಸ್ತಿ ಕಾರ್ಯಕ್ರಮ ಪ್ರಶಸ್ತಿ ಪ್ರಧಾನ ಮಾಡಿ ಮಾತನಾಡಿದರು.ಕಾರ್ಯಕ್ರಮವನ್ನು ಮನೋಹರ ವಾಲಾಗದ ರವರು ಉದ್ಘಾಟಿಸಿದರು. ಇದೇ ವೇಳೆ ಕಾರ್ಯಕ್ರಮದ ಆಯೋಜಕರಾದ ಚಂದ್ರಶೇಖರ್ ಮಾಡಲಗೇರಿ ಮಾತನಾಡಿ ಡಾ, ಪುನೀತ್ ರಾಜಕುಮಾರ್ ಅವರು ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ ನಟರಾಗಿ ಕಾಣಿಸಿ ಕೊಂಡ ಇವರು ವಸಂತ ಗೀತೆ, ಭಾಗ್ಯವಂತ, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಬೆಟ್ಟದ ಹೂವು, ಇನ್ನೂ ಅನೇಕ ಚಲನ ಚಿತ್ರಗಳಲ್ಲಿ ನಟಿಸಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ಯೋಜನೆಗಳ ರಾಯಭಾರಿಯಾಗಿ ಸಾಮಾಜಿಕ ಜಾಗೃತಿಯ ಪ್ರಚಾರಕರಾಗಿ ಸೇವೆ ಸಲ್ಲಿಸಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ವೀಣಾ ಹೊಸಮನಿ, ಜಯಶ್ರೀ ಪಾಟೇಲ, ಪಂಡಿತ್.ಬಿ ಆವಜಿ, ವಿಶ್ವಾಸ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಮಂಜುಳಾ ಬೆಣ್ಣೆ, ಎಲ್.ಐ ಲಕ್ಕಮ್ಮನವರ್, ಜ್ಯೋತಿ ಚಂದ್ರಶೇಖರ್, ವಿದ್ಯಾದೇವಗಿರಿ, ಸಂಗೀತ ಮಠಪತಿ, ಭಾಗ್ಯಶ್ರೀ ರಜಪೂತ, ಸಂಚಾಲಕರಾದ ವೀರೇಶ್ ಕೆ.ಎಸ್, ನಂದನ್ ಕುಮಾರ್ ದ್ಯಾಮಪುರ, ಇದೇ ವೇಳೆ ಕನ್ನಡ ಚಲನ ಚಿತ್ರ ಗೀತೆಗಳ ಗೀತ ಗಾಯನ ಕಾರ್ಯಕ್ರಮ ನಡೆಯಿತು, ಪುನೀತ್ ರಾಜಕುಮಾರ್ ಸ್ಪೂರ್ತಿ ಪ್ರಶಸ್ತಿ ಪುರಸ್ಕೃತರು, ವಸುಂದರಾ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು, ಸೇರಿದಂತೆ ಎಲ್ಲಾ ಕನ್ನಡ ಮನಸ್ಸುಗಳು ಸಾಹಿತ್ಯ ಆಸಕ್ತರು, ಕನ್ನಡ ಅಭಿಮಾನಿಗಳು, ಸೇರಿದಂತೆ ಇತರರು ಸಾರ್ವಜನಿಕರು ಉಪಸ್ಥಿತರಿದ್ದರು.
ಹೋಬಳಿ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್:ಕೆ.ಎಸ್ ವೀರೇಶ್.ಕೆ.ಹೊಸಹಳ್ಳಿ