ಇಜೇರಿ ಗ್ರಾಮ ಭಾವೈಕ್ಯತೆ ಸಂಕೇತ ಇಪ್ತಿಯಾರ್ ಕೂಟದಲ್ಲಿ – ಭಾವನಾತ್ಮಕ ಮಾತುಗಳು.
ಇಜೇರಿ ಮಾ.25

ಇಂದು ಸಾಯಂಕಾಲ 7. ಗಂಟೆಗೆ ಇಜೇರಿ ಗ್ರಾಮದ ವಿವಿಧ ಸಂಘಟನೆಗಳ ಸಮನ್ವಯ ಸಮಿತಿ ವತಿಯಿಂದ ರಂಜಾನ್ ಉಪವಾಸ ಇರುವ ಗ್ರಾಮದ ಮುಸ್ಲಿಂ ಗ್ರಾಮದ ದೊಡ್ಡ ಮಜಿದನಲ್ಲಿ ಇಪ್ತಿಯಾರ್ ಕೂಟಕ್ಕೆ ಆಯೋಜಿಸಲಾಗಿತ್ತು, ರಂಜಾನ್ ಉಪವಾಸ ಇರುವ ಆತ್ಮೀಯರಿಗೆ ಹಣ್ಣು ಹಂಪಲು ನೀಡಿ ನಂತರ ಊಟದ ವ್ಯವಸ್ಥೆ ಮಾಡಲಾಗಿತ್ತು, ನಮ್ಮ ಸತ್ಕಾರವನ್ನು ಸ್ವೀಕರಿಸಿದ ಭಾಂದವರು ಆಯೋಜನೆ ಮಾಡಿದ ಸಂಘಟನೆಯ ಮುಖಂಡರಿಗೆ ಶಾಲು ಹೊದಿಸಿ ಸನ್ಮಾನಿಸಿ ಗೌರವಿಸಿದು, ಇಜೇರಿ ಗ್ರಾಮ ಭಾವೈಕ್ಯತೆ ಸಾರುವ ಸಂಕೇತವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪತ್ರಕರ್ತರು ಮತ್ತು ಸಾಮಾಜಿಕ ಹೋರಾಟಗಾರರಾದ ಶ್ರವಣಕುಮಾರ.ಡಿ ನಾಯಕ, ಶಿಕ್ಷಕರಾದ ಅಂಬರೇಶ ಸಾಹು ಲಿಂಗಸ್ಗೂರ, ರೈತ ಮುಖಂಡರಾದ ಅಲ್ಲಾಪಟೇಲ್ ಮಾಲೀಬಿರಾದಾರ, ರೈತ ಸಂಘದ ಇಜೇರಿ ವಲಯ ಅಧ್ಯಕ್ಷ ಹೊನ್ನಪ್ಪ ಬಡಿಗೇರ, ಮಾಜಿ ಗ್ರಾಮ ಪಂಚಾಯತ್ ಸದಸ್ಯ ಸೈದಪ್ಪ ಕಟ್ಟಿಮನಿ, ಗ್ರಾಮೀಣ ಅಭಿವೃದ್ಧಿ ಹೋರಾಟ ಸಮಿತಿ ಇಜೇರಿ ಘಟಕ ಅಧ್ಯಕ್ಷ ನಿಂಗಣ್ಣ ಚಿಗರಹಳ್ಳಿ, ಜಿಲ್ಲಾ ಅಹಿಂದ ಸಂಘಟನೆ ಮುಖಂಡ ಈರಣ್ಣ ಬಿದಾರಾಣಿ, ಕಲಾವಿದ ವೆಂಕಟೇಶ ಗುತ್ತೇದಾರ, ರಮೇಶ ಮೇಲಗಿರಿ, ಸೈಯದ್ ಪಟೇಲ್ ಮಾಲೀಬಿರಾದಾರ, ರಾಜಾ ಅಹ್ಮದ್ ಮಡಕಿ, ಖಲೀಲ ಅಹ್ಮದ,ಸೈಯದ್ ರಾಯಲ ಬೇಕರಿ, ಬಾಬಾ ಹೋಟೆಲ್, ದೌಲತ್ರಾಯ ನೀರಲಕೋಡ, ಪರಶುರಾಮ ಕಿಲೆದಮನಿ, ಮೌನೇಶ ಹಾಲಗಡ್ಲಾ, ಧರ್ಮರಾಜ ಚಿಗರಹಳ್ಳಿ ಮತ್ತು ನೂರಾರು ಗ್ರಾಮಸ್ಥರು ಇದ್ದರು.