ಇಂದು ರಂಜಾನ್ ಹಬ್ಬವನ್ನು ಅಂಧ ಮಕ್ಕಳೊಂದಿಗೆ ಆಚರಣೆ ಮಾಡಿದ – ಜೆಡಿಎಸ್ ಮುಖಂಡರು ಹಾಗೂ ಎಸ್.ಹೆಚ್ ಸಾಜಿದ್ ಖಾದ್ರಿ.
ಮಾನ್ವಿ ಮಾ.30

ರಂಜಾನ್ ಮಾಸದ ಒಂದು ತಿಂಗಳು ಉಪವಾಸ ಮಾಡಿದ ಮೇಲೆ ಶ್ರೀ ಚನ್ನಬಸವೇಶ್ವರ ಅಂಧ ಮಕ್ಕಳ ವಸತಿ ಶಾಲೆಗೆ ತೆರಳಿ ಅಂಧ ಮಕ್ಕಳಿಗೆ ಶೀರ್ ಖುರ್ಮಾ (ಶಾವಿಗೆ) ಕುಡಿಸಿ ಮಾತಾಡಿದ ಅವರು ಅಂಧ ಮಕ್ಕಳು ಅಂದ್ರೆ ದೇವರ ಮಕ್ಕಳು.


ಈ ಮಕ್ಕಳುಗಳೊಂದಿಗೆ ಹಬ್ಬ ಆಚರಣೆ ಮಾಡಿದ್ದು ಅತ್ಯಂತ ಸಂತೋಷವಾಗಿದೆ ಹಾಗೂ ಮುಂದೆ ನನ್ನ ಉಸಿರು ಇರೋವರೆಗೂ ಈ ಅಂಧರ ಜೊತೆಯಲ್ಲಿಯೇ ಆಚರಿಸಲು ಬಯಸಿದ್ದೇನೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಂಕಲ್ಪ ಕೂಡ ಮಾಡಿದ ಜೆ.ಡಿಎಸ್ ಮುಖಂಡರು ಹಾಗೂ ಸಿಟ್ಟಿನ ದೇವರ (ಹುಸೇನಿ ಆಲಂ) ಗುಡಿಯ ಗುರುಗಳಾದ ಎಸ್.ಹೆಚ್ ಸಾಜಿದ್ ಖಾದ್ರಿ ಎಂದು ಹೇಳಬಹುದು.

ಗ್ರಾಮೀಣ ಅಭಿವೃದ್ಧಿ ಸಂಸ್ಥೆ, ಮಾನ್ವಿ ಅಧ್ಯಕ್ಷ ಪರಶುರಾಮ್ ಬಾಗಲವಾಡ ಮತ್ತು ಅಂಧ ಮಕ್ಕಳ ವಸತಿ ಶಾಲೆಯ ಮುಖ್ಯಸ್ಥರು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ತಾಲೂಕ ವರದಿಗಾರರು, ಸಿಹಿ ಕಹಿ ಕನ್ನಡ ದಿನ ಪತ್ರಿಕೆ ಹಾಗೂ ಎಸ್.ಕೆ ನ್ಯೂಸ್ ಕನ್ನಡ ಚಾನಲ್: ಹುಸೇನ್.ಭಾಷಾ.ನಕ್ಕುಂದಿ.ಮಾನ್ವಿ