“ಯುಗದ ಸಂತ ಅವತರಿಸಿದ ಶುಭ ದಿನ”…..

ನಡೆದಾಡುವ ದೇವರು ಧರೆಯಲಿ ಅವತರಿಸಿದ ದಿನ ಸರ್ವ ಶ್ರೇಷ್ಠ ಅಮೃತ ಘಳಿಗೆ
ಶುಭ ದಿನ ಸರ್ವಜನ ಮಾನಸದಲಿ ಪೂಜ್ಯ ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮಿಗಳು
ಜಗದ ತ್ರಿವಿದ ದಾಸೋಹ ನಿತ್ಯ ನಿರಂತ ಸಿದ್ದಗಂಗಾ ಶ್ರೀ ವಿಶ್ವದೆಲ್ಲೆಡೆ ಬೆಳಗುತಿಹುದು
ಅನ್ನ ಅಕ್ಷರ ಆಧ್ಯಾತ್ಮಿಕ ಜನಗಳ ಬದುಕಿನ ಜೀವನಾಡಿ
ಸರ್ವಜನರ ಸಮಾನತೆಯ ಭಾವ ಬೆಳಗಿದ ಪರಮ ಪೂಜ್ಯ ಶ್ರೀಗಳು
“ಸರ್ವೇ ಜನಃ ಸುಖಿನೋ ಭವಂತು” ನಿಜವಾಗಿಸಿದ ಅಭಿನವ ಬಸವಣ್ಣ
ಜಗದಲಿ ಸದಾ ಭಾರತ ಆಧ್ಯಾತ್ಮಿಕ ಕಳಸ ಪ್ರಾಯ ನಂದಾ ದೀಪ ಅನವರತ ಬೆಳಗುತಿಹದು
ಮಾನವ ಜನ್ಮದ ಹೆಮ್ಮೆ ಸಕಲ ಜೀವಿಗಳ ಲೇಸ ಬಯಕೆ
ದಯವೇ ಧರ್ಮದ ಮೂಲ ಮಹಾದೇವನ ಸ್ವರೂಪ ತ್ರಿಕಾಲ ಲಿಂಗ ಪೂಜೆ ಗೈದರು
ಕರ್ನಾಟಕ ರತ್ನ ಪದ್ಮ ಭೂಷಣ ನಿತ್ಯ ಕಾಯಕಯೋಗಿ ಐತಿಹಾಸಿಕ
ಲೋಕೋಪಕಾರಿ ಯುಗ ಪುರುಷ ಅಭಿನವ ಬಸವಣ್ಣ
ಡಾ, ಶಿವಕುಮಾರ ಮಹಾಸ್ವಾಮಿಗಳು ಧರೆಯಲಿ ಅವತಿರಿಸಿದ ನಡೆದಾಡುವ ದೇವರು
ಯುಗದ ಸಂತ ಅವತರಿಸಿದ ದಿನ ಅಮೃತ ಘಳಿಗೆ ಸರ್ವರ ಬಾಳ ಬೆಳಗುವ ಜ್ಞಾನಜ್ಯೋತಿ
ಶುಭ ಹರುಷ ತರಲಿ ಪರಮ ಪೂಜ್ಯರು ಶ್ರೀ ಶಿವಕುಮಾರ ಮಹಾ ಸ್ವಾಮಿಗಳು
ಸನ್ನಿಧಿಯ ದರ್ಶನ ಭಾಗ್ಯ ಪುಣ್ಯದ ಸುಕೃತ ಫಲ ವರಪ್ರದಾಯ
ನಡೆ ನುಡಿ ಒಂದಾಗಿಸಿದ ನಿಜ ದೇವನಿಗೆ ಭಕ್ತಿಯ ಮನಃಪೂರ್ವಕ ಶತಕೋಟಿ ನಮನಗಳು.

-ಶ್ರೀದೇಶಂಸು
ಶ್ರೀಸುರೇಶ ಶಂಕ್ರೆಪ್ಪ ಅಂಗಡಿ
ಬಾಗಲಕೋಟ